Karnataka News
ಪೋಷಣ್ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾದ ಜವಾಬ್ದಾರಿ ನಿರ್ವಹಿಸಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ – ಪ್ರಧಾನ ಮಂತ್ರಿ ಪೋಷಣ್ ನಿರ್ಮಾಣ್ ಅಭಿಯಾನದ ಅಡಿ ಮಧ್ಯಾಹ್ನದ ಉಪಹಾರ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಕ್ಕಿ ವಿತರಣೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹೆಬ್ಬಾಳಕರ್, ಶಿಕ್ಷಣದ ಜೊತೆಗೆ ಮಧ್ಯಾಹ್ನದ ಉಪಹಾರವು ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಮಾಡಿ, ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಯೋಜನೆ ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದ್ದು, ಸರ್ಕಾರದ ಸುತ್ತೋಲೆ, ಆದೇಶ ಮಾರ್ಗಸೂಚಿಗಳಂತೆ ಶಾಲಾ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳವುದು ಅತ್ಯವಶ್ಯಕ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ ದನವಾಡ್ಕರ್, ಡಿಡಿಪಿಆಯ್ ಬಿ ಎಸ್ ನಾಲವತವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಪಿ. ಜುಟ್ನವರ, ಅಕ್ಷರ ದಾಸೋಹ ಅಧಿಕಾರಿ ಮುದಕನಗೌಡರ, ಸಮನ್ವಯ ಅಧಿಕಾರಿ ಎಮ್ ಎಸ್ ಮೇದಾರ, ನಿಂಗಪ್ಪ ಮೊದಗೇಕರ್, ದೀಪಕ್ ಕಾತ್ಕರ್, ವಿಠ್ಠಲ ಬೊಮ್ಮನಾಂಚೆ, ಚಾಯಪ್ಪ ಮೊದಗೇಕರ್, ಮಧು ಮೊದಗೇಕರ್, ರಮೇಶ ಮೊದಗೇಕರ್, ವಿನಂತಿ ಬೊಮ್ಮನಾಂಚೆ, ರೇಖಾ ಮೊದಗೇಕರ್, ಮಲ್ಲವ್ವ ಸುತಾರ, ಪಲ್ಲವಿ ಪಾಟೀಲ, ವಸಂತ ಪಾಟೀಲ, ಶಿವರಾಯ ದೇಸಾಯಿ, ಶಾಲಾ ಶಿಕ್ಷಣ ಕಲಿಕಾ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.