ಪ್ರವೀಣ್ ಹತ್ಯೆ ಪ್ರಕರಣ: 10 ಆರೋಪಿಗಳ ಬಂಧನ- ಗೃಹಸಚಿವ ಅರಗ ಜ್ಞಾನೇಂದ್ರ ಮಾಹಿತಿ

ಬೆಂಗಳೂರು, ಜುಲೈ 27: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ, ಸಿಟಿ ರವಿ ಜೊತೆಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದೇವೆ.
ಪ್ರವೀಣ್ ಅಂತ್ಯಕ್ರಿಯೆ ನೆರೆವೇರಿದೆ. ಪ್ರಕರಣದ ಎಲ್ಲಾ ಬೆಳವಣಿಗೆಯನ್ನು ಡಿಜಿ ಪ್ರವೀಣ್ ಸೂದ್ ವಿವರಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಈಗಾಗಲೆ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಬಿಜೆಪಿ ಯುವ ಮುಖಂಡನ ಹತ್ಯೆ, ಕೆಲವೆಡೆ 144 ಸೆಕ್ಷನ್ ಜಾರಿ, ಶಾಲೆಗಳಿಗೆ ರಜೆ
ಕೇರಳಕ್ಕೂ ಪೊಲೀಸರು ತೆರಳಿದ್ದು, ಅಲ್ಲಿಯೂ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನಾವು ಇಂತಹ ಘಟನೆ ನಡೆದಾಗ ಯಾವ ಪ್ರಕರಣಗಳನ್ನು ಬಿಟ್ಟಿಲ್ಲ, ಎಲ್ಲವೂ ತನಿಖೆಯಾಗಿವೆ. ಕೇರಳ ಸರಕಾರದ ಜೊತೆಗೆ ನಮ್ಮ ಡಿಜಿ ಮಾತನಾಡಿದ್ದಾರೆ, ಜಂಟಿಯಾಗಿ ಕಾರ್ಯಾಚಾರಣೇ ಮಾಡಿ ಆರೋಪಿಗಳನ್ನು ಹಿಡಿದು ತರಲಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲಾತಾಣದಲ್ಲಿ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವುದರ ಬಗ್ಗೆ ಮಾತನಾಡಿ, ಅಮಾಯಕರು ಕೊಲೆಯಾದಾಗ ಎಲ್ಲರಿಗೂ ನೋವುಂಟಾಗಲಿದೆ, ಮನಸ್ಸು ಕಲಕುತ್ತದೆ, ಸಿಟ್ಟು ಉಂಟಾಗಿ ಮಾತನಾಡುತ್ತಾರೆ, ಆರೋಪಿಗಳನ್ನು ಬಂಧಿಸಿದ ಮೇಲೆ ಅವರ ಆಕ್ರೋಶ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಪ್ರವೀಣ್ ಹತ್ಯೆ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಯು.ಟಿ. ಖಾದರ್ ಒತ್ತಾಯ
ಆದಷ್ಟು ಆರೋಪಿಗಳ ಬಂಧನ
ಪ್ರವೀಣ್ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಸಂಬಂಧ ಕೇರಳ ಪೊಲೀಸರ ಜೊತೆಗೆ ರಾಜ್ಯದ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಮಂಗಳೂರು ಎಸ್.ಪಿ ಈಗಾಗಲೇ ಕಾಸರಗೋಡು ಎಸ್.ಪಿ ಜೊತೆ ಸತತವಾಗಿ ಸಂಪರ್ಕದಲ್ಲಿದ್ದಾರೆ. ರಾಜ್ಯದ ಡಿಜಿಪಿ ಕೂಡ ಕೇರಳದ ಡಿಜಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನ ಬಂಧಿಸುತ್ತೇವೆ ಎಂದರು.
ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ಪ್ರಕರಣವನ್ನ ಎನ್‌ಐಎಗೆ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.