Draupadi Murmu: ʼದ್ರೌಪದಿ ನನ್ನ ಮೂಲ ಹೆಸರಲ್ಲ! ಹಾಗಿದ್ರೆ ಹೊಸ ರಾಷ್ಟ್ರಪತಿಯವರ ನಿಜವಾದ ಹೆಸರೇನು?

ನಿಜವಾದ ಹೆಸರೇನು?
ಮುರ್ಮು ಎಂಬ ಹೆಸರೇ ನನ್ನ ಮೂಲ ಹೆಸರು. ದ್ರೌಪದಿ ಎಂಬುದು ಮಹಾಭಾರತದಲ್ಲಿರುವ ಹೆಸರಾಗಿದೆ. ಯಾವುದೋ ಸಂದರ್ಭದಲ್ಲಿ ನನ್ನ ಶಾಲಾ ಶಿಕ್ಷಕಿಯೊಬ್ಬರು ದ್ರೌಪದಿ ಎಂದು ಕರೆದು ಅಂದಿನಿಂದ ಇಂದಿನವರೆಗೆ ನನ್ನ ಹೆಸರು ದ್ರೌಪದಿ ಮುರ್ಮು ಎಂದೇ ಎಲ್ಲರಿಗೂ ಪರಿಚಿತವಾಗಿದೆ ಎಂದು ಬಹಿರಂಗಪಡಿಸಿದರು.
ಇತ್ತೀಚೆಗೆ ಅವರು ಒಡಿಯಾ ವಿಡಿಯೋ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಮುರ್ಮು ಹೆಸರಿನ ಹಿಂದೆ ಈ ಹಿಂದೆ ಪುಟಿ ಎಂದು ಇತ್ತು. ಒಬ್ಬ ಶಾಲಾ ಶಿಕ್ಷಕಿ ಅದನ್ನು ಇಷ್ಟ ಪಡದೇ ನೀನು ಒಳ್ಳೆಯ ಹುಡುಗಿ ಒಳ್ಳೆಯದಕ್ಕೆ ಮತ್ತೊಂದು ಹೆಸರಾದ ʼದ್ರೌಪದಿʼ ಎಂದು ಬದಲಾಯಿಸಿದರು. ಇದನ್ನು ನಮ್ಮ ಹಳ್ಳಿಯಾದ ಮಯೂರ್‌ಭಂಜ್ ಶಿಕ್ಷಕರು ನೀಡಲಿಲ್ಲ. ಬದಲಾಗಿ ಬೇರೆ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ನನ್ನ ಹೆಸರನ್ನು ದ್ರೌಪದಿ ಮುರ್ಮು ಎಂದು ಕರೆದರು ಎಂಬುದನ್ನು ಸುದ್ದಿ ಸಂಸ್ಥೆಯಾದ ಪಿಟಿಐ ಉಲ್ಲೇಖಿಸಿದೆ.
ಇದ್ಕಕೂ ಮುಂಚೆ ನನ್ನ ಹೆಸರನ್ನು ಹಲವಾರು ಬಾರಿ ಬದಲಾಯಿಸಿ ಆಗಿತ್ತು. ಅದರಲ್ಲಿ- ದುರ್ಗಾಡಿ, ದೋರ್ಪಿಡಿ ಇನ್ನು ಹಲವು ಹೆಸರುಗಳಿಂದ ಈ ಮುಂಚೆ ಕರೆಯಲಾಗುತ್ತಿತ್ತು ಎಂದು ಅವರು ಹೇಳಿದರು.
ಹೆಸರು ಬದಲಾವಣೆಯ ಬಗ್ಗೆ ಮುರ್ಮು ಏನು ಹೇಳಿದರು
ಒಡಿಯಾ ವಿಡಿಯೋ ಸಂದರ್ಶಕ್ಕೆ ನೀಡಿದ ವರದಿ ಪ್ರಕಾರ “ನಮ್ಮ ಬುಡಕಟ್ಟು ಜನಾಂಗದ ಸಂಸ್ಕೃತಿ ಪ್ರಕಾರ ಒಂದು ಹೆಣ್ಣು ಮಗು ಜನಿಸಿದರೆ ಅದರ ಸರ್ ನೇಮ್ ಅಜ್ಜಿ ಹೆಸರು ಇರುತ್ತದೆ. ಆದರೆ ಒಂದು ಗಂಡು ಮಗು ಜನಿಸಿದರೆ ಅದರ ಸರ್ ನೇಮ್ ಅಜ್ಜನ ಹೆಸರನ್ನು ಆ ಮಗುವಿನ ಹೆಸರಿನ ಮುಂದೆ ಇರಿಸಲಾಗುತ್ತದೆ” ಎಂದು ದ್ರೌಪದಿ ಮುರ್ಮು ಹೇಳಿದರು.
ದ್ರೌಪದಿ ಮುರ್ಮು ಅವರಿಗೆ ಶಾಲಾ-ಕಾಲೇಜುಗಳಲ್ಲಿ ತುಡು ಎಂಬ ಸರ್ ನೇಮ್ ಚಾಲ್ತಿಯಲ್ಲಿತ್ತು ಎಂದು ಹೇಳಿದರು. ಈ ಸರ್ ನೇಮ್ ಏಕೆಂದರೆ ಇವರು ಒಬ್ಬ ಬ್ಯಾಂಕ್ ಅಧಿಕಾರಿಯಾದ ಶ್ಯಾಮ್ ಚರಣ್ ತುಡು ಅವರನ್ನು ಮದುವೆಯಾಗಿದ್ದಕ್ಕೆ ಅವರ ಸರ್ ನೇಮ್ ಅನ್ನೆ ಮುರ್ಮುಗೂ ಕರೆಯಲಾಗುತ್ತಿತ್ತು. ಆದರೆ ಇವರು ಮದುವೆಯಾಗಿ ಸ್ವಲ್ಪ ದಿನಗಳ ನಂತರ ತಮ್ಮ ಹೆಸರನ್ನು ಮತ್ತೆ ಮುರ್ಮು ಎಂಬ ಸರ್ ನೇಮ್ ನಿಂದ ಬಳಸಲು ಆರಂಭಿಸಿದರು. ಇದೆಲ್ಲವೂ ಅವರ ದ್ರೌಪದಿ ಹಿಂದಿನ ಹೆಸರು ಏಕೆ ಬಂತು ಎಂಬುದರ ಮಾಹಿತಿ ಆಗಿದೆ. ಇದನ್ನು ಅವರೇ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿರುವುದು ಇನ್ನು ವಿಶೇಷವಾಗಿದೆ.
ರಾಷ್ಟ್ರಪತಿ ಭವನದಿಂದ ಸಂಸತ್ ಭವನದವರೆಗೆ ಮೆರವಣಿಗೆ
ದ್ರೌಪದಿ ಮುರ್ಮು ಅವರು ಸೋಮವಾರದಂದು ಹಿಂದಿಯಲ್ಲಿ ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ಪ್ರಮಾಣ ವಚನವನ್ನು ಸ್ವೀಕರಿಸಿದರು. ಅತ್ತ ಕಡೆ ರಾಮನಾಥ್ ಕೋವಿಂದ್ ಅವರ ನಿರ್ಗಮನ ಇತ್ತ ಕಡೆ ದ್ರೌಪದಿ ಮುರ್ಮು ಅವರ ಆಗಮನ. ಪ್ರತಿ ಹಂತಕ್ಕೂ ಒಂದು ಆರಂಭವಿದ್ದರೆ ಒಂದು ಅಂತ್ಯವಿದ್ದೆ ಇರುತ್ತದೆ ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.
ರಾಷ್ಟ್ರಪತಿ ಭವನದಿಂದ ಸಂಸತ್ ಭವನದವರೆಗೆ ಮೆರವಣಿಗೆಯಲ್ಲಿ ದ್ರೌಪದಿ ಮುರ್ಮು ಕಾಣಿಸಿಕೊಂಡರು. ಸಣ್ಣ ಸಮಾರಂಭದ ನಂತರ, ದ್ರೌಪದಿ ಮುರ್ಮು ಮತ್ತು ರಾಮನಾಥ್ ಕೋವಿಂದ್ ಅವರನ್ನು ಡ್ರಮ್‌ಗಳ ಸದ್ದು ಮತ್ತು ಕಹಳೆಗಳ ಊದುವಿಕೆಯ ಮಧ್ಯೆ ಸೆಂಟ್ರಲ್ ಹಾಲ್‌ನಿಂದ ಹೊರಗೆ ಕರೆದೊಯ್ಯಲಾಯಿತು. ದ್ರೌಪದಿ ಮುರ್ಮುಗೆ 21-ಗನ್ ಗಳಿಂದ ಸೆಲ್ಯೂಟ್ ಅನ್ನು ಸಲ್ಲಿಸಲಾಯಿತು.