
ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಬೆಳಗಾವಿಯಲ್ಲಿ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಕಿಚ್ಚನ ಅಭಿಮಾನಿಗಳು ಭರ್ಜರಿ ಬೈಕ್ ರ್ಯಾಲಿ ನಡೆಸಿದ್ದು, ಚಿತ್ರ ಮಂದಿರ ಮುಂದೆ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ್ದಾರೆ.
ಹೌದು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ ರೋಣ ಸಿನಿಮಾ ಗುರುವಾರ ವಿಶ್ವದಾಧ್ಯಂತ ರಿಲೀಸ್ ಆಗಿರುವ ಹಿನ್ನೆಲೆ ಬೆಳಗಾವಿ ಚೆನ್ನಮ್ಮ ವೃತ್ತದಿಂದ ಚಿತ್ರಾ ಟಾಕೀಸ್‍ವರೆಗೂ ಕಿಚ್ಚ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಿದರು. ಕಿಚ್ಚ ಸುದೀಪ್ ಸೇನಾ ಸಮಿತಿ ಶಂಕ್ರಣ್ಣ ಜೀ ನೇತೃತ್ವದಲ್ಲಿ ಈ ಬೈಕ್ ರ್ಯಾಲಿ ನಡಿತು. ಈ ವೇಳೆ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ.
ಬೆಳಗಾವಿಯ ಮೂರು ಟಾಕೀಸ್‍ಗಳಲ್ಲಿ ವಿಕ್ರಾಂತ್ ರೋಣ ಚಿತ್ರಪ್ರದರ್ಶನ ಆಗುತ್ತಿದೆ. ಚಿತ್ರಾ, ಐನಾಕ್ಸನಲ್ಲಿ ಟಾಕೀಸ್‍ನಲ್ಲಿ ಬೆಳಿಗ್ಗೆ 8.30ಕ್ಕೆ ಮೊದಲ ಶೋ ಆರಂಭವಾಗಿದ್ದರೆ, ಸ್ವರೂಪ್ ನರ್ತಕಿ ಟಾಕೀಸ್‍ನಲ್ಲಿ 12.30ಕ್ಕೆ ಮೊದಲ ಶೋ ಪ್ರದರ್ಶನ ಆಗಲಿದೆ. ಕಿಚ್ಚನ ಅಭಿನಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.