ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನವ್ಯಶ್ರೀ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ಸಿಕ್ರೇಟ್ ಟಾಸ್ಕ್ ನೀಡಿದ್ದು ನಿಜ : ನವ್ಯಶ್ರೀ

ಬೆಳಗಾವಿ : ರಾಜಕುಮಾರ ಟಾಕಳೆ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಿದ್ದೇನೆ ಎಂದು ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹೇಳಿದ್ದಾರೆ.
ನಗರದಲ್ಲಿ ಎಪಿಎಂಸಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕುಮಾರ ಟಾಕಳೆ ನನಗೆ ಮೋಸ ಮಾಡಿದ್ದಲ್ಲದೇ ನನ್ನಿಂದ ಹಣ ಪಡೆದು ಸುಳ್ಳು ದೂರು ದಾಖಲಿಸಿದ್ದಾನೆ.
ನವ್ಯಶ್ರೀ ರಾವ್ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ ರಾಜಕುಮಾರ ಟಾಕಳೆಗೆ ಶಿಕ್ಷೆಯಾಗುವಂತೆ ಮಾಡುತ್ತೇನೆ-: ನವ್ಯಶ್ರೀ
ಈ ಸಂಬಂಧ ಪ್ರಕರಣ ರದ್ದು ಪಡಿಸುವಂತೆ ಕೋರಿ ನ್ಯಾಯಾಲಯ ಮೊರೆ ಹೋಗಿದ್ದೇನೆ ಎಂದರು. ಇದು ನಾನು ಕೊಟ್ಟ ಕೇಸ್ ನಾನು ಸಂಪೂರ್ಣ ಸಹಕಾರ ಕೊಡುತ್ತಿದ್ದೇನೆ. ಜತೆಗೆ ವೈದ್ಯಕೀಯ ತಪಾಸಣೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಹೊರತು ಆಸ್ಪತ್ರೆಯಲ್ಲಿ ಚಿಕನ್ ಬಿರಿಯಾನಿ ಕೇಳಿದ್ದೇನೆ ಎಂಬುದು ಸುಳ್ಳು, ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಯಂತೆ ವೆಜ್ ಪಲಾವ್ ತಿಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದೆಹಲಿ ಕಾಂಗ್ರೆಸ್ ನಾಯಕರ ಜತೆ ಸಂಪರ್ಕ ವಿಚಾರ ಬೇರೆ ರೀತಿ ಆಯಾಮ ಪಡಿಯುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆ ವೇಳೆ ನಾನು ಪ್ರಚಾರ ಮಾಡಿದ್ದೇನೆ. ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ ಯೋಗಾನಂದಶಾಸ್ತ್ರಿ ಎಂಬುವರು ಸ್ಪೀಕರ ಆಗಿದ್ದರು. ಯೋಗಾನಂದಶಾಸ್ತ್ರಿ ಮಗಳು ಪ್ರಿಯಾಂಕಾ ಸಿಂಗ್ ಪರ ಚುನಾವಣಾ ಪ್ರಚಾರ ಮಾಡಿರುವೆ. ಯಾವುದೇ ನಾಯಕರ ಸಂಪರ್ಕ ಇಲ್ಲದೇ ನಾನು ಪ್ರಚಾರ ಮಾಡಕ್ಕಾಗುತ್ತಾ? ಎಂದ ಅವರು, ದೆಹಲಿ ನಾಯಕರ ಸಂಪರ್ಕ ಬಗ್ಗೆ ಬೇರೆ ಬೇರೆ ಆಯಾಮಗಳ ಚರ್ಚೆ ಬೇಡ ಎಂದರು.
ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ಸಿಕ್ರೇಟ್ ಟಾಸ್ಕ್ ನೀಡಿದ್ದು ನಿಜ. ನಾನು ಅಲ್ಲಿ ಹೋದ ಸಂದರ್ಭದಲ್ಲಿ ಮತದಾರರನ್ನು ಮರೆತು ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಟ್ವೀಟ್ ಸಹ ಮಾಡಿದ್ದೇನೆ. ಇದರಿಂದ ನಾನು ಮುಂಬೈಗೆ ಹೋಗಿರುವ ಗೊತ್ತಾಗುತ್ತದೆ ಎಂದರು.
ವಿಡಿಯೋ ವೈರಲ್ ಪ್ರಕರಣದ ಹಿಂದಿರುವ ಚನ್ನಪಟ್ಟಣದ ಕಾಂಗ್ರೆಸ್ ಮಹಾನಾಯಕ ಯಾರು ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಯಾರಾದರೂ ರಾಜಕಾರಣ ಮಾಡ್ತಾರಾ..? ಅಂತಹ ನಾಲಾಯಕ್ಗಳ ಬಗ್ಗೆ ಯಾವುದೇ ಸಸ್ಪೆನ್ಸ್ ಮೆಂಟೇನ್ ಮಾಡದೇ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.
ನವ್ಯಶ್ರೀ ಬ್ಲ್ಯಾಕ್ ಮೇಲ್ ಪ್ರಕರಣ: ಒಟ್ಟು 10 ಸೆಕ್ಷನ್ ಗಳಡಿ ರಾಜಕುಮಾರ್ ಟಾಕಳೆ ವಿರುದ್ಧ ಕೇಸ್ ದಾಖಲು