ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ಶಿಕ್ಷೆ ಪ್ರಕಟವಾಗಬೇಕು ಶಾಸಕ ಅಭಯ್ ಪಾಟೀಲ್ ಆಕ್ರೋಶ

ಬೆಳಗಾವಿ; ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಖಂಡಿಸಿರುವ ಶಾಸಕ ಅಭಯ್ ಪಾಟೀಲ್, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳುವುದು ತಪ್ಪು. ಈಗಾಗಲೇ ಆರೋಪಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ್, ಸರ್ಕಾರ ಏನು ಮಾಡ್ತಾ ಇಲ್ಲ ಅನ್ನೋ ಭಾವನೆ ತಪ್ಪು. ಸಿಎಂ ಹಾಗೂ ಗೃಹ ಸಚಿವರಲ್ಲಿ ವಿನಂತಿ ಮಾಡುತ್ತೇನೆ.
ಭಾರತ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟ ನಿಟ್ಟಿನ ಕ್ರಮ ಕೈಗೊಳ್ಳಬೇಕು ಇದು ಅನಿವಾರ್ಯ ಎಂದರು.
ವಿಶೇಷ ಕೋರ್ಟ್ ಸ್ಥಾಪಿಸಿ ಇಂತಹ ಆರೋಪಿಗಳಿಗೆ ಶೀಘ್ರದಲ್ಲೇ ಶಿಕ್ಷೆ ಪ್ರಕಟ ಮಾಡಬೇಕು. ಎನ್ ಕೌಂಟರ್ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ನಾನು 32 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ. ಇಷ್ಟೊಂದು ಆಕ್ರೋಶ ಎಂದು ವ್ಯಕ್ತವಾಗಿರಲಿಲ್ಲ. ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು ಇದೆ. ಪಕ್ಷಕ್ಕಾಗಿ ಶ್ರಮ ವಹಿಸುತ್ತಾರೆ. ಕುಟುಂಬ, ಅವರ ಜವಾಬ್ದಾರಿ ಪಕ್ಷದ ಮೇಲೆ ಇದೆ. ಸಿಎಂ ಕಾರ್ಯಕ್ರಮ ರದ್ದು ಮಾಡಿ ಕಾರ್ಯಕರ್ತ ಭಾವನೆಗೆ ಸ್ಪಂಧನೆ ಮಾಡಿದ್ದಾರೆ. ಕಾನೂನು ಪ್ರಕಾರ ಕ್ರಮ ವಹಿಸಬೇಕು ಎಂದು ನನ್ನ ವೈಯಕ್ತಿಕ ಆಗ್ರಹ. ತಪ್ಪಿಸ್ಥರ ಮೇಲೆ ಉಗ್ರ ಕ್ರಮ ಕೈಗೊಂಡರೇ ಘಟನೆ ಮರುಕಳಿಸಲ್ಲ. ಎಸ್ ಡಿ ಪಿ ಐ, ಪಿ ಎಫ್ ಐ ಬ್ಯಾನ್ ಮಾಡಲು ಬಹಳಷ್ಟು ಜನರ ಬೇಡಿಕೆ. ಯಾರ ಮರ್ಜಿಗೆ ಕಾಯುವ ಪ್ರಶ್ನೆ ಇಲ್ಲ. ಕಟ್ಟುನಿಟ್ಟಿನ ಕ್ರಮ ವಹಿಸಿದ್ರೇ ಯಾವ ಸಂಘಟನೆ ಬೆಳೆಯಲ್ಲ ಎಂದರು.