Karnataka NewsPolitics
ಭಾರತದ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು. ಶಾಸಕ ಅಭಯ್ ಪಾಟೀಲ

ಬೆಳಗಾವಿ: ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತಿಲ್ಲ ಅನೋ ಭಾವನೆ ತಪ್ಪು. ಭಾರತದ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು. ಈ ರೀತಿಯ ಮಾಡುವವರನ್ನು ಎನ್ಕೌಂಟರ್ ಮಾಡಬೇಕೆಂದು ಬಿಜೆಪಿ ಶಾಸಕ ಅಭಯ್ ಪಾಟೀಲ ಆಗ್ರಹಿಸಿದರು.
ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ಶಿಕ್ಷೆ ಪ್ರಕಟವಾಗಬೇಕು ಶಾಸಕ ಅಭಯ್ ಪಾಟೀಲ್ ಆಕ್ರೋಶ
ನಾನು 32 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈವರೆಗೆ ಪಕ್ಷದ ವಿರುದ್ಧ ಇಷ್ಟೊಂದು ಆಕ್ರೋಶ ಎಂದೂ ವ್ಯಕ್ತವಾಗಿರಲಿಲ್ಲ. ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು ಇದೆ. ಪಕ್ಷಕ್ಕಾಗಿ ಶ್ರಮ ವಹಿಸುತ್ತಾರೆ. ಕುಟುಂಬ, ಅವರ ಜವಾಬ್ದಾರಿ ಪಕ್ಷದ ಮೇಲೆ ಇದೆ. ಈಗಲಾದರೂ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ. ಅಂದಾಗ ಇಂತಹ ಘಟನೆಗಳು ನಿಲ್ಲುತ್ತವೆ ಎಂದರು.ಕಾನೂನು ಪ್ರಕಾರ ಕ್ರಮ ವಹಿಸಬೇಕು. ತಪ್ಪಿಸ್ಥರ ಮೇಲೆ ಉಗ್ರ ಕ್ರಮ ಕೈಗೊಂಡರೇ ಘಟನೆ ಮರುಕಳಿಸಲ್ಲ.