Vikrant Rona: ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಮೊದಲ ದಿನವೇ ದಾಖಲೆಗಳನ್ನು ಮುರಿಯುತ್ತಿದ್ದಾನೆ ವಿಕ್ರಾಂತ್ ರೋಣ

ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು?:
ವಿಕ್ರಾಂತ್ ರೋಣ’ ಕರ್ನಾಟಕದಲ್ಲಿ ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಟ್ರೇಡ್ ಅನಲಿಸ್ಟ್ ಗಳ ಲೆಕ್ಕಾಚಾರದ ಪ್ರಕಾರ ಚಿತ್ರವು ಮೊದಲ ದಿನದ ಕಲೆಕ್ಷನ್ ನಲ್ಲಿ ಕನ್ನಡದಲ್ಲಿ 16ರಿಂದ 20 ಕೋಟಿ ಆಗಬಹುದು ಎಂದು ಹೇಳಿದ್ದಾರೆ. ಅದೇ ರೀತಿ ಟ್ರೇಡ್ ಅನಲಿಸ್ಟ್ ಅಭಿಷೇಕ್ ಪರಿಹಾರ್ aವರ ಪ್ರಕಾರ, ಕರ್ನಾಟಕದಲ್ಲಿ, 14.85 ಕೋಟಿ, ಆಂದ್ರ ಮತ್ತು ತೆಲಂಗಾಣದಲ್ಲಿ 2.2ಕೋಟಿ, ತಮಿಳುನಾಡು 1 ಕೋಟಿ, ಕೇರಳ 0.15 ಕೋಟಿ ಮತ್ತು ಸಾಗರೋತ್ತರ ದೇಶಗಳಲ್ಲಿ 3 ಕೋಟಿ ಸೇರಿ ಒಟ್ಟು ವಿಕ್ರಾಂತ್ ರೋಣ ಮೊದಲ ದಿನ 21.2 ಕೋಟಿ ಕಲೆಕ್ಷನ್ ಮಾಡಬುದು ಎಂದು ಅಂದಾಜಿಸಿದ್ದಾರೆ.
#VikrantRona Day 1 (Thursday) Early Estimates.#Karnataka – 14.85 Cr#AP #Telangana – 2.2 Cr#TamilNadu – 1 Cr#Kerala – 0.15 Cr#RestofIndia – 3 Cr
Total – 21.2 Cr#Hindi Belts should start firing over the weekend as there is good demand for tickets building up.@KicchaSudeep— Abhishek Parihar (@BlogDrive) July 28, 2022
ಕುಂದಾನಗರಿಯಲ್ಲಿ ಕಿಚ್ಚ ಸುದೀಪ್ “ವಿಕ್ರಾಂತ ರೋಣ”ನ ಅಬ್ಬರ:
ಒರ್ಮ್ಯಾಕ್ಸ್ ವರದಿ ಏನು ಹೇಳುತ್ತದೆ?:
ಇನ್ನು, ಸಿನಿಮಾಗಳ ರೇಟಿಂಗ್ ಹಾಗೂ ಕಲೆಕ್ಷನ್ ಗಳ ಬಗ್ಗೆ ಮಾಹಿತಿ ನೀಡುವ ಒರ್ಮ್ಯಾಕ್ಸ್ ಮೀಡಿಯಾ ಸಹ ಒಂದು ವರದಿಯನ್ನು ನೀಡಿದ್ದು, ಇದು ಕೇವಲ ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಸಿನಿಮಾ 16.2 ಕೋಟಿ ಗಳಿಕೆ ಮಾಡಲಿದೆ ಎಂದು ತಿಳಿಸಿದೆ. ಒಟ್ಟಾರೆಯಾಗಿ ಚಿತ್ರವು ಭರ್ಜರಿ ಓಫನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಮೊದಲ ದಿನವೇ ದಾಖಲೆಗಳನ್ನು ಮುರಿಯುತ್ತಿದ್ದಾನೆ ವಿಕ್ರಾಂತ್ ರೋಣ:
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು ಸರಿಸುಮಾರು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ ಎಂದು ತಿಳಿದುಬಂದಿದೆ. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ.
ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್-2 ದಾಖಲೆಯನ್ನು ಮುರಿದಿದೆ. ಹೌದು, ವಿಕ್ರಾಂತ್ ರೋಣ ಚಿತ್ರವು ದೇಶಾದ್ಯಂತ 1047 ಕನ್ನಡ ಶೋಗಳು ದೊರಕಿವೆ. KGF 2 ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು.