ಸರ್ಕಾರದ ನಿಯಮ ಮೀರಿ ಅಕ್ರಮ ಕಾಮಗಾರಿ ನಡೆಸಿರುವ ಗ್ರಾಮ ಪಂಚಾಯತ ಸದಸ್ಯ ಮತ್ತು ಪಿಡಿಓ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ
ಬೆಳಗಾವಿ ವರದಿ ಜ್ಯೋತಿಬಾ ಬೆಂಡಿಗೇರಿ

ಬೆಳಗಾವಿ ವರದಿ ಜ್ಯೋತಿಬಾ ಬೆಂಡಿಗೇರಿ
ಸರ್ಕಾರದ ನಿಯಮ ಮೀರಿ ಅಕ್ರಮ ಕಾಮಗಾರಿ ನಡೆಸಿರುವ ಗ್ರಾಮ ಪಂಚಾಯತ ಸದಸ್ಯ ಮತ್ತು ಪಿಡಿಓ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ
ಬೈಟ್ ರಾಜು ಬಾಗೇವಾಡಿ
ಹಿರಿಯ ವಕೀಲರು ಬೆಳಗಾವಿ
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾ ಪಂ ಸದಸ್ಯ ಮತ್ತು ಪಿಡಿಓ ಸೇರಿ ಗ್ರಾ ಪಂ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ ಸದಸ್ಯರಾಗಲಿ ಅಧ್ಯಕ್ಷರಾಗಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ ಎಂಬ ಸರ್ಕಾರದ ನಿಯಮ ಮೀರಿ ಕಾಮಗಾರಿ ಮಾಡುತ್ತಿದ್ದು ಇದಕ್ಕೆ ಸಾಥ್ ನೀಡುತ್ತಿರುವ ಪಿಡಿಓ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದು ಈ ಕುರಿತು ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಜನಸಾಮಾನ್ಯರು , ಸಮಾಜ ಸೇವಕರು ತಾಲ್ಲೂಕು ಪಂಚಾಯತ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವೊಬ್ಬ ಅಧಿಕಾರಿಯೂ ತನಿಖೆಗೆ ಮುಂದಾಗದ ಕಾರಣ ಗ್ರಾಮ ಪಂಚಾಯತ ಅಧ್ಯಕ್ಷ ಮುಬಾರಕ ಕಿತ್ತೂರ,ಮತ್ತು ಹಿರಿಯ ವಕೀಲರಾದ ರಾಜು ಬಾಗೇವಾಡಿ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಮ್ ಎಮ್ ಸಾವಕಾರ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ, ACB ಅಧಿಕಾರಿಗಳಿಗೆ ಕೂಡಾ ದೂರು ಸಲ್ಲಿಸಿದರು.
ಆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಬಾರಕ್ ಕಿತ್ತೂರ್ ಗ್ರಾಮ ಪಂಚಾಯತಿ ಸದಸ್ಯ ರುದ್ರಪ್ಪ ಬೆಂಡಿಗೇರಿ, ಮತ್ತು ಹಿರಿಯ ವಕೀಲರಾದ ರಾಜು ಬಾಗೆವಾಡಿ, ರವಿ ಮಾದಾರ , ಶಂಕರ ಬಾಗವಡಕರ್, ಪ್ರಸನಾ ಕುಂಭಾರ್, ರಾಜಶೇಖರ್ , ಜ್ಯೋತಿಬಾ ಬೆಂಡಿಗೇರಿ ಉಪಸ್ಥಿತರಿದ್ದರು ,