ಡಾ.ಪ್ರಭಾಕರ ಕೋರೆ ತಮ್ಮ ೭೫ನೇ ಹುಟ್ಟುಹಬ್ಬದ ನಿಮಿತ್ತವಾಗಿ ಬಡ ಮಕ್ಕಳಿಗೆ ಬೈಸಿಕಲ್ ವಿತರಿಸಿದ ಡಾ.ಪ್ರಭಾಕರ ಕೋರೆ ; ಇನ್ನೂ ಹಲವು ಕಾರ್ಯಕ್ರಮ

ಬೆಳಗಾವಿ – ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಮ್ಮ ೭೫ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ನಿಮಿತ್ತವಾಗಿ ಬೆಳಗಾವಿಯ ಸ್ವಗೃಹದಲ್ಲಿ ಬಡ ವಿದ್ಯಾರ್ಥಿಗಳಿಗೆ ಬೈಸಿಕಲ್ಗಳನ್ನು ವಿತರಿಸಿದರು.
ಇಂದಿನ ಮಕ್ಕಳು ಭವಿಷ್ಯತ್ತಿನ ನಾಗರಿಕರು, ಜೀವನದಲ್ಲಿ ಉತ್ತಮವಾದ ಶಿಕ್ಷಣವನ್ನು ಪಡೆದು ತಂದೆತಾಯಿಗಳ ಹಾಗೂ ದೇಶ ಸೇವೆಯನ್ನು ಮಾಡಬೇಕೆಂದು ಕರೆನೀಡಿದರು. ಈ ಸಂದರ್ಭದಲ್ಲಿ ಆಶಾತಾಯಿ ಕೋರೆಯವರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ವಿವಿಧ ಕಾರ್ಯಕ್ರಮ
ಆರ್.ಎಲ್.ವಿಜ್ಞಾನ ಕಾಲೇಜಿನಿಂದ ವೃದ್ಧಾಶ್ರಮದಲ್ಲಿ ಅನ್ನಪ್ರಸಾದ ಎಲ್ಇಡಿ ಬಲ್ಬಸ್ ವಿತರಣೆ
ಬೆಳಗಾವಿ ೧ ಅಗಸ್ಟ್ : ಡಾ.ಪ್ರಭಾಕರ ಕೋರೆಯವರ ೭೫ನೇ ಹುಟ್ಟುಹಬ್ಬದ ನಿಮಿತ್ತವಾಗಿ ಆರ್.ಎಲ್.ವಿಜ್ಞಾನ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ಸಿಬ್ಬಂದಿವರ್ಗದವರು ಬಸವನ ಕುಡಚಿ ದೇವರಾಜ ಅರಸ ಕಾಲನಿಯಲ್ಲಿರುವ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅನ್ನಪ್ರಸಾದ, ಎಲ್ಇಡಿ ಬಲ್ಬಗಳ ವಿತರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ, ಪಪೂ ಪ್ರಾಚಾರ್ಯ ಪ್ರೊ. ವಿಶ್ವನಾಥ ಕಾಮಗೋಳ, ಪ್ರೊ.ಎ.ಎಸ್. ಪೂಜಾರ, ಪ್ರೊ.ಎಸ್.ಬಿ.ಬನ್ನಿಮಟ್ಟಿ, ಪ್ರೊ.ಸಂದೀಪ ಜವಳಿ, ವಿ.ಕೆ.ಗಾಣಗೇರಿ, ಪುರುಷೋತ್ತಮ ಆಯ್. ವಿನಾಯಕ ಹುಕ್ಕೇರಿ, ಬಿ.ಎನ್.ಬನ್ನೂರ ಉಪಸ್ಥಿತರಿದ್ದರು.
ಲಿಂಗರಾಜ ಕಾಲೇಜಿನಲ್ಲಿ ೭೫ ಸಸಿಗಳನ್ನು ನೆಡಲಾಯಿತು
ಡಾ.ಪ್ರಭಾಕರ ಕೋರೆಯವರ ೭೫ನೇ ಹುಟ್ಟುಹಬ್ಬದ ನಿಮಿತ್ತವಾಗಿ ಲಿಂಗರಾಜ ಕಾಲೇಜಿನಲ್ಲಿ ೭೫ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯನ್ನುಂಟುಮಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಬಿ.ಎಂ.ತೇಜಸ್ವಿಯವರು ಮಾತನಾಡಿ ಡಾ.ಪ್ರಭಾಕರ ಕೋರೆಯವರು ಸಮಾಜಮುಖಿಯಾಗಿ ಸೇವೆಯನ್ನು ಮಾಡಿದವರು. ಅವರು ಸೇವೆಗೈಯದ ಕ್ಷೇತ್ರಗಳಿಲ್ಲ. ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಹಾಗೂ ಪ್ರೇರಕರಾಗಿದ್ದಾರೆ ಎಂದು ಹೇಳಿದರು. ಡಾ.ಜಿ.ಎನ್.ಶೀಲಿ, ಡಾ.ಎಚ್.ಎಂ.ಮೇಲಿನಮನಿ, ಡಾ.ಸಿ.ರಾಮರಾವ್, ಪ್ರೊ.ಆರ್.ಡಿ.ಬಡಿಗೇರ, ಎನ್ಸಿಸಿ ಅಧಿಕಾರಿಗಳಾದ ಕ್ಯಾಫ್ಟನ್ ಮಹೇಶ ಗುರನಗೌಡರ ಉಪಸ್ಥಿತರಿದ್ದರು.
ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಣ್ಣುಹಂಪಲ ವಿತರಣೆ
ಬೈಲಹೊಂಗಲದ ಚಾರಿಟೇಬಲ್ ಟ್ರಸ್ಟ್ ಹಾಗೂ ಲಿಂಗರಾಜ ಕಾಲೇಜಿನ ಎನ್ಸಿಸಿ ಘಟಕದ ವತಿಯಿಂದ ಬಸವನ ಕುಡಚಿ ದೇವರಾಜ ಅರಸ ಕಾಲನಿಯಲ್ಲಿರುವ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣುಹಂಪಲವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ರಾಮಣ್ಣವರು ಅವರು, ಡಾ.ಪ್ರಭಾಕರ ಕೋರೆಯವರು ಈ ನಾಡಿಗೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಶಿಕ್ಷಣ ಆರೋಗ್ಯ ಕ್ಷೇತ್ರಗಳನ್ನು ಅಗಾಧವಾಗಿ ವಿಸ್ತರಿಸುವ ಮೂಲಕ ಜಾಗತಿಕ ಮನ್ನಣೆಗೆ ಪಾತ್ರರಾಗಿದ್ದಾರೆ. ಕೃಷಿ, ಸಹಕಾರ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿ ಅನನ್ಯವಾದ ಸಾಧನೆಯನ್ನು ಮಾಡಿದವರು ಡಾ.ಪ್ರಭಾಕರ ಕೋರೆಯವರು. ಅವರ ಇಚ್ಛಾಶಕ್ತಿ ಬಹುದೊಡ್ಡದು ತಾವು ಕಂಡ ಕನಸನ್ನು ಸಾಕಾರಗೊಳಿಸಿದ ಧೀಮಂತ ನಾಯಕರು. ಅವರು ಶತಾಯುಷಿಗಳಾಗಿ ಸಮಾಜವನ್ನು ಮುನ್ನಡೆಸಲೆಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಆಶ್ರಮದ ಅಧಿಕಾರಿಗಳಾದ ಶ್ರೀ ಚೌಗಲೆ, ಎನ್ಜಿಓ ಕುಮಾರಿ ಸೌಮ್ಯಾ, ಎನ್ಸಿಸಿ ಅಧಿಕಾರಿಗಳಾದ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಉಪಸ್ಥಿತರಿದ್ದರು.
ಕೆಎಲ್ಇ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ವನಮಹೋತ್ಸವ
ಬೆಳಗಾವಿ ಕೆಎಲ್ಇ ಬಿವ್ಹಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ವನಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ.ಬಿ. ಜಯಸಿಂಹ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ, ಡಾ.ಪ್ರಭಾಕರ ಕೋರೆಯವರು ಸಮಾಜಮುಖಿ ಚಿಂತಕರು, ಅವರು ಕೆಎಲ್ಇ ಸಂಸ್ಥೆಯನ್ನು ಮಾತ್ರ ವಿಸ್ತರಿಸಲಿಲ್ಲ, ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಬಹುಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಡೀ ಭಾರತದಲ್ಲಿ ಖಾಸಗಿ ವಲಯದಲ್ಲಿ ೪೦೦೦ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಿದ ಕೀರ್ತಿ ಡಾ.ಪ್ರಭಾಕರ ಕೋರೆಯವರಿಗೆ ಸಲ್ಲುತ್ತದೆ. ಕೃಷಿ ಕ್ಷೇತ್ರದಲ್ಲಿ ಅವರು ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ಸಾವಿರಾರು ರೈತರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಜಿಯಿಂದ ಪಿಜಿ ವರೆಗೆ ಶಿಕ್ಷಣದ ಎಲ್ಲ ಬೇಕು ಬೇಡಿಕೆಯನ್ನು ಪೂರೈಸಿದ ಪ್ರತಿಫಲವೇ ಇಂದು ಕೆಎಲ್ಇ ವಿದ್ಯಾರ್ಥಿಗಳು ಜಾಗತಿಕ ನೆಲೆಗಳಲ್ಲಿ ಸೇವೆ ಸಲ್ಲಿಸುವಂತಾಗಿದೆ. ಅವರ ಕೊಡುಗೆ ರಾಷ್ಟ್ರಕ್ಕೆ ಅದ್ವಿತೀಯ ಹಾಗೂ ಅನುಪಮವೆಂದು ಹೇಳಿದರು. ಈ ಸಂದರ್ಭದಲ್ಲಿ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.