fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
All Categories AdvertisementEducationFeature articlesKarnataka NewsLatestNationalScienceStories

ನಿಮ್ಮ ಇಷ್ಟದ ಸಂಖ್ಯೆ ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿದುಕೊಳ್ಳಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಒಬ್ಬೊಬ್ಬರದು ಒಂದೊಂದು ರೀತಿಯ ವ್ಯಕ್ತಿತ್ವ. ಕೆಲವರಿಗೆ ತಮ್ಮದೇ ವ್ಯಕ್ತಿತ್ವ ಹೇಗೆ ಎಂದು ತಿಳಿಯುವ ಕಾತುರ. ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯಬೇಕಾದರೆ ಕೆಳಗಿನ 1ರಿಂದ 10ರಲ್ಲಿ ನಿಮ್ಮ ನೆಚ್ಚಿನ ಸಂಖ್ಯೆ ಆಯ್ಕೆ ಮಾಡಿ ವ್ಯಕ್ತಿತ್ವ ತಿಳಿಯಿರಿ. ಸಾಮಾನ್ಯವಾಗಿ ಇದು 1ರಿಂದ 0 ಆಗಿರುತ್ತದೆ.

 

ನಿಮಗೆ ಇಷ್ಟವಾದ ಸಂಖ್ಯೆ ಯಾವುದು? ಯಾವ ಸಂಖ್ಯೆ ಆಯ್ಕೆ ಮಾಡಿದರೆ ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯುತ್ತದೆ ಎಂಬ ಕುತೂಹಲವೇ? ಹಾಗಾದರೆ ನಿಮ್ಮೆ ನೆಚ್ಚಿನ ಸಂಖ್ಯೆ ಆಯ್ಕೆ ಮಾಡಿ ಆ ಸಂಖ್ಯೆ ಕೆಳಗೆ ನೀಡಿದ ನಿಮ್ಮ ವ್ಯಕ್ತಿತ್ವದ ವಿವರ ತಿಳಿದುಕೊಳ್ಳಬಹುದು.

ಸಂಖ್ಯೆ 1: ನಿಮ್ಮ ನೆಚ್ಚಿನ ಸಂಖ್ಯೆ 1 ಆಗಿದ್ದರೆ ನೀವು ನಾಯಕತ್ವ ಗುಣ ಹೊಂದಿದವರಾಗಿರುತ್ತಾರೆ. ನೀವು ಸ್ವತಂತ್ರ ಮತ್ತು ಸ್ವಶಕ್ತಿ ಮೇಲೆ ನಂಬಿದರಾಗಿರುತ್ತಾರೆ. ನೀವು ತುಂಬಾ ಆಶಾವಾದಿಗಳಾಗಿದ್ದು, ದೊಡ್ಡ ಸಾಧನೆಯ ಉತ್ಸುಕರಾಗಿದ್ದಾರೆ. ನಿಮಗೆ ಸ್ವಂತ ಆಲೋಚನಾ ಶಕ್ತಿ ಹೊಂದಿದವರು. ಅದ್ಭುತ ಹಾಗೂ ಪರಿಣಾಮಕಾರಿ ಪರಿಹಾರಗಳ ಮೂಲಕ ನೀವು ಯಾವುದೇ ಸಮಸ್ಯೆ ಬಗೆಹರಿಸಬಲ್ಲಿರಿ. ಜನಸಮುದಾಯದ ನಡುವೆ ನೀವು ಎತ್ತರದಲ್ಲಿ ಇರಲು ಬಯಸುತ್ತೀರಿ. ನಿಮ್ಮ ಗುರಿ ಸಾಧನೆ ಆಗುವವರೆಗೂ ನೀವು ನಿಲ್ಲಲಾರಿರಿ. ಜನ ಸಮುದಾಯ ಗಮನಿಸದ ವಿಷಯಗಳನ್ನು ನೀವು ಗಮನಿಸಿ ವಿಶೇಷವಾಗಿ ಅವಕಾಶಗಳನ್ನು ಬಳಸಿಕೊಳ್ಳುತ್ತೀರಿ. ನೀವು ಯಾರನ್ನೂ ಹಿಂಬಾಲಿಸುವುದಿಲ್ಲ. ತಮ್ಮ ವ್ಯಕ್ತಿತ್ವದಿಂದಲೇ ನೀವು ನಾಯಕರಾಗಿ ಹೊರಹೊಮ್ಮುತ್ತೀರಿ. ನೀವು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತೀರಿ ಮತ್ತು ಅದಕ್ಕಾಗಿ ಉತ್ತಮ ಸಂಬಂಧ ಕಾಪಾಡಿಕೊಳ್ಳುತ್ತೀರಿ. ನೀವು ಎಲ್ಲಾ ವಿಷಯದಲ್ಲೂ ಅತ್ಯಂತ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುತ್ತೀರಿ. ನೈಪುಣ್ಯತೆ ಪಡೆಯುವ ವಿಷಯದಲ್ಲಿ ಕೆಲವೊಮ್ಮೆ ನೀವು ಏಕಾಂಗಿ ಎಂದು ಭಾವಿಸುತ್ತೀರಿ. ನೀವು ಎಲ್ಲರನ್ನೂ ಇಷ್ಟಪಡುತ್ತೀರಿ. ಆದರೆ ನಿಮ್ಮ ಮೇಲೆ ಯಾರೇ ಪ್ರಭುತ್ವ ಸಾಧಿಸುವುದನ್ನು ಸಹಿಸಲಾರಿರಿ.

ಸಂಖ್ಯೆ 2 ನಿಮ್ಮ ಆಯ್ಕೆಯಾದರೆ ನೀವು ವೈಯಕ್ತಿಕವಾಗಿ ಭಾವನಾತ್ಮಕ ವ್ಯಕ್ತಿಯಾಗಿರುತ್ತೀರಿ. ನೀವು ಭಾವನೆಗಳ ಲೋಕದಲ್ಲಿ ಮುಳುಗಿರುತ್ತೀರಿ. ನೀವು ಬುದ್ದಿವಂತಿಕೆಗಿಂತ ಮನಸ್ಸಿನಿಂದ ಜೀವನ ನಡೆಸಲು ಬಯಸುತ್ತೀರಿ. ನಿಮ್ಮ ಬಗ್ಗೆ ನಕರಾತ್ಮಕ ಮಾತುಗಳು ಕೇಳಿದರೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತೀರಿ. ನೀವು ಯಾರ ಜೊತೆ ತುಂಬಾ ಬೆರೆಯುತ್ತೀರಿ ಅವರನ್ನು ಹೊರತುಪಡಿಸಿ ಹೊಸಬರ ಜೊತೆ ತುಂಬಾ ಬೆರೆಯಲು ನಾಚಿಕೆ ಸ್ವಭಾವದವರಾಗಿರುತ್ತೀರಿ. ನೀವು ಸಾಮಾನ್ಯವಾಗಿ ಶಾಂತಿಧೂತರಾಗಿರುತ್ತೀರಿ. ನೀವು ಎಲ್ಲವೂ ನಿಖರ ಮತ್ತು ಶಾಂತಿ ಬಯಸುತ್ತೀರಿ. ನೀವು ಯಾರ ಜೊತೆ ಸುದೀರ್ಘವಾಗಿ ಇರಲಾರಿರಿ. ನೀವು ಅಕ್ಕಪಕ್ಕದಲ್ಲೇ ಇರುವ ಕುಟುಂಬ, ಸ್ನೇಹಿತರು ಹಾಗೂ ಜನರ ಜೊತೆ ಇರಲು ಬಯಸುತ್ತೀರಿ. ಯಾವುದೇ ಒಂದು ವಿಷಯದ ಎರಡೂ ಮಗ್ಗುಲುಗಳ ಕಡೆ ನೋಡುವ ಮನೋಭಾವ ನಿಮ್ಮದು. ನೀವು ಕ್ರಿಯಶೀಲ, ಕಲ್ಪನಾ, ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದೀರಿ.

ಸಂಖ್ಯೆ 3: ಮೂರನ್ನು ನೀವು ಆಯ್ಕೆ ಮಾಡಿಕೊಂಡರೆ ನೀವು ತೆರೆದ ಮನಸ್ಸಿನವರು, ಜೀವನವನ್ನು ಪಾರ್ಟಿ ಅಂತೆ ಬದುಕಲು ಇಷ್ಟಪಡುತ್ತೀರಿ. ನಿಮ್ಮ ಸ್ನೇಹಿತರ ಗುಂಪಿನಲ್ಲಿ ನೀವು ಖ್ಯಾತಿ ಪಡೆದವರಾಗಿರುತ್ತೀರಿ. ನೀವು ನಿಮ್ಮ ಸುತ್ತಿಲಿನ ಸಮಾಜವನ್ನು ನೀವು ಬೇಕಾದಂತೆ ಮಾಡಬಲ್ಲಂತೆ ರೂಪಿಸಿಕೊಳ್ಳುವ ಚಾಣಕ್ಯರು. ನಿಮ್ಮ ಅಭಿಪ್ರಾಯ ಮುಕ್ತವಾಗಿ ಹಂಚಿಕೊಳ್ಳುತ್ತೀರಿ. ಮತ್ತು ಭಿನ್ನ ಸಂಸ್ಕೃತಿ ಹಾಗೂ ಜನರ ಜೊತೆ ಬೆರೆಯಲು ಇಷ್ಟಪಡುತ್ತೀರಿ. ನೀವು ಒಳ್ಳೆಯ ಮಾತುಗಾರ. ನೀವು ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ ನೀವು ರಂಜಿಸುವ ವ್ಯಕ್ತಿ. ನೀವು ಜೀವನದ ಬಗ್ಗೆ ಭವ್ಯ ಕಲ್ಪನೆ ಹೊಂದಿರುತ್ತೀರಿ. ಅದನ್ನು ನಿಜ ಮಾಡುವ ಶಕ್ತಿಯೂ ನಿಮಗಿದೆ.

ಸಂಖ್ಯೆ 4: ಈ ಸಂಖ್ಯೆಯ ವ್ಯಕ್ತಿಗಳು ಪ್ರಾಮಾಣಿಕರು. ಆಶ್ರಯದಾತರೂ ಸುಲಭವಾಗಿ ಕೈಗೆಟುಕಬಲ್ಲವರು ಆಗಿರುತ್ತಾರೆ. ನೀವು ಯಾವುದೇ ಪರಿಸ್ಥಿತಿಯಲ್ಲೂ ಗರಿಷ್ಠ ಕೊಡುಗೆ ನೀಡಲು ಬಯಸುತ್ತೀರಿ. ನಿಮ್ಮ ಕುಟುಂಬ ಹಾಗೂ ಸ್ನೇಹಿತರಲ್ಲಿ ನೀವು ಅತ್ಯಂತ ನಂಬಿಕಸ್ತನಾಗಿ ಗುರುತಿಸಿಕೊಳ್ಳುತ್ತೀರಿ. ನಿಮ್ಮ ಆತ್ಮ ಸೌಂದರ್ಯ ಹೊರಗೆ ಕಾಣುವಷ್ಟು ಸ್ಪಷ್ಟವಾಗಿರುತ್ತೀರಿ. ನೀವು ಧೈರ್ಯವಂತರಾಗಿದ್ದು, ಸದಾ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ನೆರವಾಗಲು ಬಯಸುತ್ತೀರಿ. ಜೀವನದಲ್ಲಿ ನೀವು ಏನು ಬಯಸುತ್ತೀರಿ ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ನೀವು ಸ್ಪಷ್ಟ ಗುರಿ ಹೊಂದಿದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೀರಿ. ನಿಮಗೆ ಇಷ್ಟವಾಗದೇ ಇರುವರರ ಮೇಲೆ ನೀವು ಮೇಲುಗೈ ಸಾಧಿಸಬಲ್ಲಿರಿ. ಆದರೆ ಅವರ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ಮೌನಕ್ಕೆ ಶರಣಾಗುತ್ತೀರಿ.

ಸಂಖ್ಯೆ 5: ಈ ಸಂಖ್ಯೆ ನಿಮಗೆ ಇಷ್ಟವಾಗಿದೆ ಅಂದರೆ ನೀವು ಅತ್ಯಂತ ಉತ್ಸಾಹಿ, ಆಶಾವಾದಿ. ನೀವು ಯಾವುದೇ ಸವಾಲು ಎದುರಿಸಲು ಸಜ್ಜಾಗಿರುತ್ತೀರಿ. ನೀವು ಸ್ಪರ್ಧಾತ್ಮಕವಾಗಿ ಮುಂದೆ ಹೋಗಲು ಬಯಸುತ್ತೀರಿ. ದೀರ್ಘಕಾಲ ಒಂದೇ ಕಡೆ ನಿಲ್ಲಲು ಬಯಸುತ್ತಿರಿ. ನೀವು ಸಾಹಸಪ್ರಿಯರಾಗಿದ್ದು, ಜೀವನ ಸಾಹಸ, ರೋಮಾಂಚಕಾರಿ ಹಾಗೂ ಸ್ವಾತಂತ್ರವಾಗಿ ಇರುವುದನ್ನು ಬಯಸುತ್ತೀರಿ. ನೀವು ಡ್ರಾಮ ಮಾಡಲ್ಲ, ಸಮಸ್ಯೆ ಎದುರಿಸಲ್ಲ ಅಂತಲ್ಲ. ಆದರೆ ಅದನ್ನು ಕೂಡ ಎಂಜಾಯ್‌ ಮಾಡುವ ಮನಸ್ಥಿತಿ ನಿಮ್ಮದು. ಕೆಲವೊಮ್ಮೆ ನಿಮ್ಮ ಜೊತೆಗಿರುವವರು ನಿಮ್ಮಷ್ಟು ಉತ್ಸಾಹಿ ಅಥವಾ ಮುನ್ನುಗ್ಗುವ ಸ್ವಭಾವದವರು ಅಲ್ಲ ಎಂದು ನಿಮಗೆ ಅನಿಸುತ್ತಿರುತ್ತದೆ.

ಸಂಖ್ಯೆ 6: ನೀವು ಸಂಬಂಧಗಳಿಗೆ ಬೆಲೆ ಕೊಡುತ್ತೀರಿ. ಆದ್ದರಿಂದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತೀರಿ. ನಿಮ್ಮ ಜೊತೆ ಕೆಲವರನ್ನು ಸೇರಿಸಿಕೊಂಡು ತಮಾಷೆ ಮಾಡಿ ನಗಿಸುವ ಪ್ರಯತ್ನ ಮಾಡುತ್ತೀರಿ. ನೀವು ಆತ್ಮೀಯ ಮತ್ತು ಪ್ರೀತಿಪಾತ್ರರಾಗಿ ಜೊತೆಯಲ್ಲಿ ಇದ್ದವರನ್ನು ನೋಡಿಕೊಳ್ಳುತ್ತೀರಿ. ನೀವು ವೃತ್ತಿಯಲ್ಲಿ, ಸಂಬಂಧದಲ್ಲಿ, ಸ್ನೇಹಿತರಲ್ಲಿ ಗಾಢ ಸಂಬಂಧ ಇರಿಸಿಕೊಂಡು ಜೊತೆಗಿದ್ದವರು ಯಾವಾಗಲೂ ಸಂತೋಷವಾಗಿ ಇರುವುದನ್ನು ಬಯಸುತ್ತೀರಿ. ನಿಮ್ಮ ಇಷ್ಟ, ಹವ್ಯಾಸ, ಆಸಕ್ತಿಗಳ ಬಗ್ಗೆ ಗಮನ ಹರಿಸುತ್ತೀರಿ. ನಿಮ್ಮ ಬಗ್ಗೆ ನೀವು ಹೆಚ್ಚು ಜಾಗೃತರಾಗಿರುತ್ತೀರಿ. ನೀವು ಬಾಹ್ಯಾಕಾಶ ಮುಂತಾದ ವೈಜ್ಞಾನಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುತ್ತೀರಿ. ನೀವು ಕಲಾತ್ಮಕವಾಗಿ ಬದುಕಲು ಬಯಸುತ್ತೀರಿ. ಜಗಳ-ಕದನದ ಮೇಲೆ ಆಸಕ್ತಿ ಕಡಿಮೆ.

ಸಂಖ್ಯೆ 7: ಈ ಸಂಖ್ಯೆ ನಿಮಗೆ ಇಷ್ಟವಾಗಿದ್ದರೆ ಅದರರ್ಥ ನೀವು ತಾಳ್ಮೆಯ ಹಾಗೂ ಶಾಂತ ಸ್ವಭಾವದ ವ್ಯಕ್ತಿ ಎಂದರ್ಥ. ನೀವು ಸದಾ ಕಲಿಕೆಯತ್ತ ಆಸಕ್ತಿ ಹೊಂದಿದವರಾಗಿರುತ್ತೀರಿ. ಸಾಮಾನ್ಯವಾಗಿ ನಿಮ್ಮ ಆಲೋಚನೆಗಳು ಆಕಾಶದ ಮೇಲಿರುತ್ತವೆ. ನಿಮ್ಮ ಹೆತ್ತವರಿಗೆ ನೀವು ಪ್ರಾಮಾಣಿಕ ಹಾಗೂ ವಿಧೇಯರಾಗಿರುತ್ತೀರಿ. ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೀರಿ. ಸಂಪರ್ಕ ಹೊಂದಲು ನೀವು ಷರತ್ತು ರಹಿತವಾಗಿ ಇರಲು ಬಯಸುತ್ತೀರಿ. ನೀವು ಮುಕ್ತ ಮನಸ್ಸಿನವರಾಗಿದ್ದು, ಸದಾ ಮತ್ತೊಬ್ಬರಿಗೆ ನೆರವಾಗಲು ಬಯಸುವ ಸಹ ಆಟಗಾರನಂತೆ ಇರುತ್ತೀರಿ. ನಿಮ್ಮ ಜೊತೆಗಿರುವವರು ಯಾವಾಗಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೀರಿ. ಇದರಿಂದ ಅವರಿಗೆ ಸುರಕ್ಷಿತ ಭಾವ ಬರುವಂತೆ ನೋಡಿಕೊಳ್ಳುತ್ತೀರಿ. ಬೇರೆಯವರಿಗೆ ನೆರವಾಗಲು ನಿಮ್ಮ ಸಮಯವನ್ನು ಕೂಡ ಬದಲಿಸಿಕೊಳ್ಳುತ್ತೀರಿ. ಇದೆಲ್ಲದರ ನಡುವೆ ಜೀವನದಲ್ಲಿ ವಾಸ್ತವವಾಗಿ ಇರುತ್ತೀರಿ.

ಸಂಖ್ಯೆ 8: ಈ ಸಂಖ್ಯೆ ಇಷ್ಟವಾಗಿದ್ದರೆ ನೀವು ಸ್ಥಿರತೆ ಬಗ್ಗೆ ಹೆಚ್ಚು ಓಲವು ಹೊಂದಿದವರು ಅಲ್ಲದೇ ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದವರಾಗಿರುತ್ತೀರಿ. ನೀವು ಏರುಧ್ವನಿಯಲ್ಲಿ ಮಾತನಾಡುವವರಲ್ಲ. ಆದರೆ ನೀವು ಇದ್ದೀರಿ ಅಂತಾದರೆ ನಿಮ್ಮ ಉಪಸ್ಥಿತಿಯೇ ಬೇರೆಯವರಿಗೆ ಹೀಂಜರಿಯುವಂತೆ ಮಾಡುತ್ತದೆ. ನೀವು ವೈಯಕ್ತಿಕವಾಗಿ ಸ್ವಯಂ ನಿಯಂತ್ರಣ ಹೊಂದಿದ, ಪ್ರಭಾವಶಾಲಿ, ಸಂಪರ್ಕ ಹೊಂದಿದವರಾಗಿರುತ್ತೀರಿ. ನಿಮ್ಮ ಈ ಗುಣವೇ ನೀವು ಏನು ಮಾಡದೇ ಇದ್ದರೂ ವ್ಯಕ್ತಿತ್ವದಿಂದ ಸಾಧಿಸುತ್ತಿರುತ್ತೀರಿ. ಯಶಸ್ಸಿಗೆ ಅಡ್ಡ ದಾರಿ ಹಿಡಿಯುವವರಲ್ಲ. ಸ್ವಯಂ ಬಲದಿಂದ ಸಾಧನೆ ಮಾಡಿದ ಹೆಮ್ಮೆಗೆ ಪಾತ್ರರಾಗಲು ಬಯಸುತ್ತೀರಿ. ನೀವು ಚಿಕ್ಕ ವಯಸ್ಸಿನಿಂದಲೇ ಮಾನಸಿಕ ನಿಯಂತ್ರಣ ಮತ್ತು ಬುದ್ಧಿ ಸ್ಥಿಮಿತ ಸಾಧಿಸಿರುತ್ತೀರಿ. ನೀವು ಸುಲಭವಾಗಿ ಯಾರೊಂದಿಗೂ ಹೊಂದಿಕೊಳ್ಳುವುದಿಲ್ಲ. ಆದರೆ ಪರಿಸ್ಥಿತಿಯನ್ನು ನಿಭಾಯಿಸಬಲ್ಲವರಾಗಿರುತ್ತೀರಿ.

ಸಂಖ್ಯೆ 9: ಈ ಸಂಖ್ಯೆ ಇಷ್ಟ ಎಂದಾದರೆ ನೀವು ವರ್ಚಸ್ಸು ಹೊಂದಿದ, ಆತ್ಮವಿಶ್ವಾಸಿ, ಸ್ನೇಹಪರ ಹಾಗೂ ವೈಯಕ್ತಿಕವಾಗಿ ಕಾಳಜಿ ಹೊಂದಿದ ವ್ಯಕ್ತಿಯಾಗಿರುತ್ತೀರಿ. ಸರಳ ಹಾಗೂ ಸಜ್ಜಿನಿಕೆ ಜೊತೆಗೆ ಮಾನವೀಯತೆ ಹೆಚ್ಚಾಗಿ ಹೊಂದಿರುತ್ತೀರಿ. ನೀವು ಜೀವನದಲ್ಲಿ ಸಾವು ಮತ್ತು ಬದುಕು ಎರಡನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡವರಾಗಿರುತ್ತೀರಿ. ನೀವು ಮಾಂತ್ರಿಕ ವ್ಯಕ್ತಿತ್ವ ಹೊಂದಿರುತ್ತೀರಿ. ನೀವು ಯಾವುದೇ ಸಂಘಟನೆ ಹಾಗೂ ಸಂಸ್ಥೆ ನಡೆಸುವ ಸಾಮರ್ಥ್ಯ ಹೊಂದಿರುತ್ತೀರಿ. ಸಂಬಂಧಗಳ ಗುಣಮಟ್ಟದ ಬಗ್ಗೆ ಸ್ಪಷ್ಟನೆ ಹೊಂದಿರುತ್ತೀರಿ. ಕ್ರೀಡೆ ಮತ್ತು ಸೇನೆಯಂತಹ ದೈಹಿಕ ಸಾಮರ್ಥ್ಯ ಬಯಸುವ ಕ್ಷೇತ್ರಗಳಿಗೆ ನೀವು ಹೇಳಿ ಮಾಡಿಸಿದ ವ್ಯಕ್ತಿ. ನಿಮಗೆ ಇಷ್ಟವಾಗದ ಅಥವಾ ಸಮಸ್ಯೆಗಳು ಬಂದಾಗ ನೀವು ಆಕ್ರಮಣಕಾರಿ ಆಗುತ್ತಿರ.

ಸಂಖ್ಯೆ 0: ನಿಮಗೆ ಈ ಸಂಖ್ಯೆ ಇಷ್ಟವಾಗಿದೆ ಅಂದರೆ ನೀವು ಹಾಸ್ಯ ಮನೋಭಾವದರಾಗಿರುತ್ತೀರಿ. ನಿಮ್ಮ ಸುತ್ತಲಿನವರು ಯಾವಾಗಲೂ ಸಂತೋಷ ಹಾಗೂ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತೀರಿ. ಎಲ್ಲರೂ ಒಂದೆಡೆ ಸೇರಿದಾಗ ಬೋರ್‌ ಆಗದಂತೆ ನೋಡಿಕೊಳ್ಳುತ್ತೀರಿ. ಆದರೆ ಸಾಮಾನ್ಯವಾಗಿ ಸೊನ್ನೆ ಸಂಖ್ಯೆಯನ್ನು ಬಹುತೇಕ ಮಂದಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ನೀವು ಯಾವುದೇ ಕೆಲಸದಲ್ಲಿ ಉತ್ಕೃಷ್ಟತೆ ಸಾಧಿಸುವುದನ್ನು ಬಯಸುತ್ತೀರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: