fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentLatestNational

Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ

ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
Ranveer Singh | PETA: ಇಂಥ ಅಭಿಯಾನದಲ್ಲಿ ಈ ಹಿಂದೆ ಕೆಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದುಂಟು. ಈಗ ಬಾಲಿವುಡ್​ ಸ್ಟಾರ್​ ನಟ ರಣವೀರ್​ ಸಿಂಗ್ ಅವರಿಗೆ ಆಹ್ವಾನ ಬಂದಿದೆ.ನಟ ರಣವೀರ್​ ಸಿಂಗ್ (Ranveer Singh) ಅವರಿಗೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಂದ ಗೆಲುವು ಸಿಕ್ಕಿಲ್ಲ.

ಆದರೆ ಅವರು ಅತಿ ಹೆಚ್ಚು ಸುದ್ದಿ ಆಗಿದ್ದು ಬೆತ್ತಲೆ ಫೋಟೋದ ಕಾರಣದಿಂದ. ಪ್ರತಿಷ್ಠಿತ ‘ಪೇಪರ್’​ ಮ್ಯಾಗಜಿನ್​ ಸಲುವಾಗಿ ಅವರು ಸಂಪೂರ್ಣ ನಗ್ನವಾಗಿ ಪೋಸ್​ ನೀಡಿದರು. ಅವರ ಬೆತ್ತಲೆ ಫೋಟೋಗಳು (Ranveer Singh Viral Photo) ಸಿಕ್ಕಾಪಟ್ಟೆ ವೈರಲ್​ ಆದವು. ಈಗಲೂ ಅದರ ಬಗ್ಗೆ ಚರ್ಚೆ ನಿಂತಿಲ್ಲ. ಅನೇಕರಿಂದ ಈ ಫೋಟೋಶೂಟ್​ಗೆ (Ranveer Singh Photoshoot) ವಿರೋಧ ವ್ಯಕ್ತವಾಗಿದೆ. ಆ ಕುರಿತ ಚರ್ಚೆ ಅಂತ್ಯವಾಗುವುದಕ್ಕೂ ಮುನ್ನವೇ ಮತ್ತೆರಣವೀರ್​ ಸಿಂಗ್​ಅವರಿಗೆ ನಗ್ನವಾಗಿ ಪೋಸ್​ ನೀಡುವಂತೆ ಆಹ್ವಾನ ಬಂದಿದೆ. ಆದರೆ ಈ ಬಾರಿ ಅವರಿಗೆ ಬೇಡಿಕೆ ಬಂದಿರುವುದು ಪ್ರಾಣಿಗಳ ಹಿತಕ್ಕೋಸ್ಕರ ಎಂಬುದು ವಿಶೇಷ. ಈ ಮನವಿಯನ್ನು ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ನಿರ್ಮಾಣ ಆಗಿದೆ.

ಪ್ರಾಣಿಗಳ ವಿರುದ್ಧದ ಹಿಂಸೆಯನ್ನು ತಡೆಗಟ್ಟಲು ಮತ್ತು ಸಸ್ಯಾಹಾರವನ್ನು ಉತ್ತೇಜಿಸಲು ‘ಪೆಟಾ’ (People for the Ethical Treatment of Animals) ಪ್ರಾಣಿ ದಯಾ ಸಂಘ ಕಾರ್ಯನಿರತವಾಗಿದೆ. ಇದು ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಒಂದು ಭಾಗವಾಗಿ ವಿಶೇಷ ಫೋಟೋಶೂಟ್​ಗಳನ್ನೂ ಮಾಡಿಸಲಾಗುತ್ತದೆ. ಈ ಹಿಂದೆ ಕೆಲವು ಸೆಲೆಬ್ರಿಟಿಗಳು ಇದರ ಅಭಿಯಾನದಲ್ಲಿ ಭಾಗಿ ಆಗಿದ್ದುಂಟು. ಈಗ ರಣವೀರ್​ ಸಿಂಗ್ ಅವರಿಗೆ ಆಹ್ವಾನ ಬಂದಿದೆ.

‘ಪೆಟಾ’ ಸಂಸ್ಥೆಯಿಂದ ರಣವೀರ್​ ಸಿಂಗ್​ ಅವರಿಗೆ ಪತ್ರ ಬರೆಯಲಾಗಿದೆ. ‘ಪ್ರಾಣಿಗಳಿಗೂ ಕೂಡ ನಮ್ಮ ರೀತಿಯೇ ದೇಹದ ಅಂಗಗಳು ಇವೆ’ ಎಂಬ ಜಾಗೃತಿ ವಾಕ್ಯದೊಂದಿಗೆ ಒಂದು ಅಭಿಯಾನ ಮಾಡಲಾಗುತ್ತಿದೆ. ಅದಕ್ಕಾಗಿ ಸೆಲೆಬ್ರಿಟಿಗಳಿಂದ ಫೋಟೋಶೂಟ್​ ಮಾಡಿಸಲಾಗುತ್ತಿದೆ. ಇದರಲ್ಲಿ ರಣವೀರ್​ ಸಿಂಗ್​ ಅವರು ಬೆತ್ತಲಾಗಿ ಪೋಸ್​ ನೀಡಲಿ ಎಂಬ ವಿನಂತಿಸಿಕೊಳ್ಳಲಾಗಿದೆ. ಸಸ್ಯಾಹಾರವನ್ನು ಉತ್ತೇಚಿಸಲು ರಣವೀರ್​ ಸಿಂಗ್​ ಸೂಕ್ತ ವ್ಯಕ್ತಿ ಎಂದು ‘ಪೆಟಾ’ ಅಭಿಪ್ರಾಯಪಟ್ಟಿದೆ.

‘ಪೆಟಾ’ ಜೊತೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಮೊದಲು ಮಾಂಸಾಹಾರಿ ಆಗಿದ್ದು, ನಂತರ ಸಸ್ಯಾಹಾರವನ್ನು ರೂಢಿಸಿಕೊಂಡವರು ಅನೇಕರಿದ್ದಾರೆ. ಈ ಹಿಂದೆ ಬಿಗ್​ ಬಾಸ್​ ಸ್ಪರ್ಧಿ ಪಮೇಲಾ ಆಯಂಡರ್​ಸನ್​ ಅವರು ‘ಪೆಟಾ’ ಸಲುವಾಗಿ ಬೋಲ್ಡ್​ ಫೋಟೋಶೂಟ್​ ಮಾಡಿಸಿದ್ದರು. ಈಗ ರಣವೀರ್​ ಸಿಂಗ್​ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ರಣವೀರ್​ ಸಿಂಗ್​ ನಟನೆ ’83’ ಸಿನಿಮಾ 2021ರ ಡಿಸೆಂಬರ್​ನಲ್ಲಿ ತೆರೆಕಂಡಿತು. ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡುವಲ್ಲಿ ಈ ಚಿತ್ರ ವಿಫಲವಾಯಿತು. 2022ರ ವರ್ಷ ಕೂಡ ಅವರಿಗೆ ತೃಪ್ತಿದಾಯವಾಗಿಲ್ಲ. ಇತ್ತೀಚೆಗೆ ರಿಲೀಸ್​ ಆದ ‘ಜಯೇಶ್​ಭಾಯ್​ ಜೋರ್ದಾರ್​’ ಚಿತ್ರ ಕೂಡ ಸೋತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: