HBD Genelia D’Souza: ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ

ಬಹುಭಾಷಾ ನಟಿ ಜೆನಿಲಿಯಾ ಡಿಸೋಜಗೆ ಇಂದು ಜನ್ಮದಿನದ ಸಂಭ್ರಮ.
ಅವರು ಇಂದು ತಮ್ಮ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದ ನಟಿ ಇದೀಗ ಕೊಂಚ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಜಿನಿಲಿಯಾ ಯಂಗ್ ಆಗಿ ಕಾಣುತ್ತಿದ್ದಾರೆ. ಆಕೆಯ ಗಂಡ ಕೂಡ ಬಾಲಿವುಡ್ನ ಖ್ಯಾತ ನಟ ರಿತೇಶ್ ದೇಶ್ಮುಖ್. 2003ರಲ್ಲಿ ತೆರೆಕಂಡ ‘ತುಜೆ ಮೇರಿ ಕಸಮ್’ ಚಿತ್ರದಲ್ಲಿ ಇಬರು ಒಟ್ಟಿಗೆ ಅಭಿನಯಿಸಿದ್ದ ರಿತೇಶ್ ಹಾಗೂ ಜೆನಿಲಿಯಾ ಹತ್ತಾರು ವರ್ಷಗಳ ಕಾಲ ಪ್ರೇಮಿಗಳಾಗಿ ನಂತರ ವಿವಾಹವಾದರು.
ಜಿನಿಲಿಯಾ ಡಿಸೋಜಾ ಅವರು 5 ಆಗಸ್ಟ್ 1987ರಂದು ಮುಂಬೈನಲ್ಲಿ ಜನಿಸಿದರು. ಇವರು ತನ್ನ ಮೊದಲ ಮಾಡೆಲಿಂಗ್ ಆಗಿ 15ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ ಮಾಡಿದರು. 2003ರಲ್ಲಿ ಜೆನಿಲಿಯಾ ತುಜೆ ಮೇರಿ ಕಸಮ್ ಎಂಬ ಹಿಂದಿ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದರು.
ಇನ್ನು, ಕನ್ನಡದಲ್ಲಿ `ಸತ್ಯ ಇನ್ ಲವ್’ ಚಿತ್ರದಲ್ಲಿ ನಟಿಸುವ ಮೂಲಕ ಜೆನಿಲಿಯಾ ಕನ್ನಡಕ್ಕೂ ಪಾದಾರ್ಪಣೆ ಮಾಡಿದರು. ಜೆನಿಲಿಯಾ ಮರಾಠಿ ಚಿತ್ರ ಮೌಲಿಗೆ ನಿರ್ಮಾಪಕಿ ಆಗಿ ಸಹ ತೊಡಗಿಸಿಕೊಂಡಿದ್ದಾರೆ.
ಜೆನಿಲಿಯಾ ತೆಲುಗಿನಲ್ಲಿ ಸತ್ಯಂ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಪರಿಚಯವಾದರು. ದಿಲ್ ರಾಜು ನಿರ್ಮಾಣದಲ್ಲಿ ಮತ್ತು ಭಾಸ್ಕರ್ ನಿರ್ದೇಶನದಲ್ಲಿ ಸಿದ್ಧಾರ್ಥ್ ಜೊತೆಗಿನ ಬೊಮ್ಮರಿಲ್ಲು ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಆಯಿತು. ಈ ಸಿನಿಮಾದಲ್ಲಿ ಹಾಸಿನಿ ಪಾತ್ರದಲ್ಲಿ ಜೆನಿಲಿಯಾ ಅಭಿನಯವನ್ನು ಯಾರು ಮರೆಯಲು ಸಾಧ್ಯವಿಲ್ಲ.
ಸಾಂಬಾ, ಆರೆಂಜ್, ಸಾಯಿ, ಸುಭಾಷ್ ಚಂದ್ರ ಬೋಸ್ ಹೀಗೆ ಹಲವು ಚಿತ್ರಗಳಲ್ಲಿ ಜೆನಿಲಿಯಾ ನಾಯಕಿಯಾಗಿ ಹೆಸರು ಮಾಡಿದ್ದರು. ಮದುವೆಯ ನಂತರ ಜೆನಿಲಿಯಾ ಸಿನಿಮಾದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಆ ನಂತರ ಎಷ್ಟೇ ಆಫರ್ಗಳು ಬಂದರೂ ಅವರು ಒಪ್ಪಿಕೊಳ್ಳಲಿಲ್ಲ.
ಜೆನಿಲಿಯಾ ಡಿಸೋಜಾ ಅವರು, ಸಂತೋಷ್ ಸುಭ್ರಮಣ್ಯಂ, ಬಾಯ್ಸ್, ಆರೆಂಜ್, ಧಮ್, ಪೋರ್ಸ್, ಸೈ, ರೆಡಿ, ಪೋರ್ಸ್ 2, ಮಸ್ತಿ, ಕನ್ನಡದಲ್ಲಿ ಸತ್ಯಾ ಇನ್ ಲವ್, ಸಾಂಬಾ, ಲೈಫ್ ಪಾರ್ಟ್ನರ್, ನಾ ಇಷ್ಟಂ ಸೇರಿದಮತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಜೆನಿಲಿಯಾ ಚಿತ್ರರಂಗಕ್ಕೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ.