EntertainmentFeature articlesInternationalNational
Urfi Javed: ಸೌಂದರ್ಯ ಮರೆ ಮಾಚಿಕೊಂಡ ಸುಂದರಿ ಉರ್ಫಿ, ಹೊಸ ಅವತಾರ ಫುಲ್ ಧಗ ಧಗ

ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಪ್ರಸಿದ್ದರಾಗಿದ್ದಾರೆ. ಹೇಳಬೇಕು ಎಂದರೆ ಹೆಚ್ಚು ಟ್ರೋಲ್ ಆಗುವ ಸೆಲೆಬ್ರಿಟಿ ಎಂದು ಹೆಸರು ಪಡೆದಿದ್ದಾರೆ. ಅವರು ಹಾಕುವ ಬಟ್ಟೆಗಳನ್ನು ನೋಡಿದರೆ ಅವರ ಮೈ ಮೇಲೆ ಬಟ್ಟೆ ನಿಲ್ಲುವುದಿಲ್ಲ ಅನಿಸುತ್ತದೆ.
ಅಷ್ಟು ಕಡಿಮೆ ಬಟ್ಟೆಯನ್ನು ಇವರು ಧರಿಸುವುದು. ಯಾವಾಗಲೂ ವಿಚಿತ್ರ ಅವತಾರದಿಂದ ಸುದ್ದಿಯಾಗುತ್ತಾರೆ. ಅವರನ್ನು ಪೂರ್ತಿ ಮೈ ಮುಚ್ಚುವ ಬಟ್ಟೆಯಲ್ಲಿ ನೋಡಿರುವುದು ಬಲು ಅಪರೂಪ. ಇವತ್ತೂ ಸಹ ಮತ್ತೊಂದು ಫೋಟೋವನ್ನು ಹಂಚಿಕೊಂಡು, ಫ್ಯಾನ್ಸ್ ನಿಮಗೆ ಡ್ರೆಸ್ ಬೇಡವೇ ಬೇಡಾ ಅಲ್ವಾ ಎಂದು ಕೇಳುತ್ತಿದ್ದಾರೆ.
ಕೂದಲಿನಿಂದ ಮೈ ಮುಚ್ಚಿಕೊಂಡು ಬಂದ ಉರ್ಫಿ
ಇತ್ತೀಚೆಗೆ ಕೇವಲ ವೈರ್ ಅನ್ನು ಸುತ್ತಿಕೊಂಡು ಸುದ್ದಿಯಾಗಿದ್ದ ಸುಂದರಿ ಈಗ ಕೇವಲ ಕೂದಲಿನಿಂದ ತನ್ನ ದೇಹದ ಮೇಲಿನ ಭಾಗವನ್ನು ಮುಚ್ಚಿಕೊಂಡು ಪೋಸ್ ನೀಡಿದ್ದಾರೆ. ಹೌದು, ಜೀನ್ಸ್ ಪ್ಯಾಂಟ್ ಹಾಕಿರುವ ಉರ್ಫಿ ಮೇಲೆ ಯಾವುದೇ ಬಟ್ಟೆ ಧರಿಸಿಲ್ಲ. ಅದರ ಬದಲು ಎರಡು ಬದಿಗೆ ಉದ್ದ ಕೂದಲನ್ನು ಇಳಿ ಬಿಟ್ಟಿದ್ದಾರೆ. ಇನ್ನು ನೀವು ಅವರ ಹಳೆಯ ಫೋಟೋಗಳನ್ನು ಗಮನಿಸಿ ನೋಡಿ ಅಷ್ಟೆಲ್ಲಾ ಉದ್ದ ಕೂದಲು ಅವರಿಗಿಲ್ಲ. ಹೇರ್ extension ಬಳಸಿದ್ದು, ಕೂದಲನ್ನು ಬಟ್ಟೆಯಾಗಿಸಿಕೊಂಡಿದ್ದಾರೆ.
ಎಂದಿನಂತೆ, ಕೆಲವು ಇಂಟರ್ನೆಟ್ ಬಳಕೆದಾರರು ಅವರ ಲುಕ್ ಅನ್ನು ಹೊಗಳಿದ್ದಾರೆ. ಅಲ್ಲದೇ, ಉರ್ಫಿ ಮಾತ್ರ ಇಂತಹ ಲುಕ್ ನೀಡಲು ಸಾಧ್ಯ ಎಂದು ಹೇಳಿದರು. ಮತ್ತೊಬ್ಬರು “ರಣವೀರ್ ಬಿ ಲೈಕ್ – ಮೇ ಕರು ತೋ ಸಾಲಾ ಕ್ಯಾರೆಕ್ಟರ್ ಡೀಲಾ ಹೈ” ಎಂದು ತಮಾಷೆ ಮಾಡಿದ್ದಾರೆ.