ಬೆಳಗಾವಿಯ ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷ: ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ.ಸಾರ್ವಜನಿಕರ ಆತಂಕ
ಬೆಳಗಾವಿಯ ಜಾಧವ ನಗರದಲ್ಲಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಆರಂಭ

ಬೆಳಗಾವಿಯ ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿದ್ದು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿಯ ಜಾಧವ್ ನಗರದಲ್ಲಿ ಇದ್ದಕ್ಕಿದ್ದಂತೆ ಚಿತರೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇನ್ನು ಜಾಧವ್ ನಗರದ ಕುಟ್ರೆ ಬಿಲ್ಡಿಂಗ್ ಮುಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವರ ಮೇಲೆರಗಿದೆ. ಇದನ್ನು ನೋಡಿ ಕಟ್ಟದ ಕಾರ್ಮಿಕರು ಭಯಗೊಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇಷ್ಟರಲ್ಲಿಯೇ ಚಿತರೆ ಖನಗಾಂವ್ ಮೂಲದ ಕಟ್ಟಡ ಕಾರ್ಮಿಕ ಸಿದ್ದರಾಯಿ ಲಕ್ಷ್ಮಣ್ ನಿಲಜ್ಕರ್(38) ಮೇಲೆ ದಾಳಿ ಮಾಡಿದ್ದು ಬೆನ್ನ ಮೇಲೆ ಚೂರಿದ ಗಾಯವಾಗಿದೆ. ಅದೃಷ್ಟವಶಾತ್ ಚಿತರೆ ಜನರನ್ನು ಕಂಡು ಕಾಬರಿಯಾಗಿ ಓಡಿದ್ದರಿಂದ ಕಟ್ಟಡ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಡಿಆರ್ಎಫ್ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿ, ಹಾಗೂ ಎಪಿಎಂಸಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಹಿರೇಮಠ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಮನೆಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಚಿರತೆ ದಾಟಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇನ್ನು ಇದೇ ವೇಳೆ ಚಿರತೆ ದಾಳಿಗೆ ಒಳಗಾದ ಕಟ್ಟಡ ಕಾರ್ಮಿಕ ಸಿದ್ರಾಯಿ ಮಾತನಾಡಿ, ಜಾಧವ್ ನಗರದ ಕುಟ್ರೆ ಬಿಲ್ಡಿಂಗ್ ಮುಂದೆ ನಾವು ಕೆಲಸ ಮಾಡುತ್ತಿದ್ದೆವು. ವೇಳೆ ಚಿತರೆ ಹಿಂದಿನಿಂದ ಬಂದು ನನ್ನ ಮೇಲೆರಗಿದೆ. ಈ ವೇಳೆ ನಾನು ಕೆಳಗೆ ಬಿದ್ದೆ. ನನ್ನೊಂದಿಗಿದ್ದ ಅನೇಕ ಕಾರ್ಮಿಕರು ಈ ಚಿರತೆಯನ್ನು ನೋಡಿದ್ದಾರೆ. ನನ್ನ ಬೆನ್ನ ಮೇಲೆ ಚಿರತೆ ಚೂರಿದ ಗಾಯವಾಗಿದೆ ಎಂದು ಘಟನೆಯ ಕುರಿತಂತೆ ವಿವರಿಸಿದ್ದಾರೆ.
ಇನ್ನು ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯ ನಿವಾಸಿಗಳು ಭಯಗೊಂಡಿದ್ದಾರೆ. ಚಿರತೆ ನೋಡೋಕೆ ದೊಡ್ಡದಾಗಿತ್ತು. ಭಯಾನಕವಾದ ಶಬ್ಧ ಮಾಡುತ್ತಾ ಈ ಕಡೆಗೆ ಓಡಿ ಹೋಯಿತು. ನಾನು ನೋಡುತ್ತಿದ್ದ ವೇಳೆ ಆಕಡೆಯಿಂದ ಜಿಗಿದು ಬಂತು. ಚಿರತೆಯ ಬೆನ್ನ ಮೇಲೆ ಹಳದಿ ಹಾಗೂ ಕಪ್ಪು ಬಣ್ಣದ ಪಟ್ಟಿಗಳಿದ್ದವು. ನೋಡುವುದಕ್ಕೆ ತುಂಬಾ ಭಯಾನಕವಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳೋದು ಹೀಗೆ
ಇನ್ನು ಈಗಾಲೇ ಅರಣ್ಯ ಇಲಾಖೆ, ಎಸ್ಡಿಆರ್ಎಫ್ ತಂಡ, ಹಾಗೂ ಪೊಲೀಸ್ ಇಲಾಖೆ ಸ್ಥಳದಲ್ಲಿ ಪರಿಶೀಲನೆಯನ್ನು ನಡೆಸುತ್ತಿದೆ. ಆದಷ್ಟು ಬೇಗನೇ ಚಿರತೆ ಸೆರೆಯಾಗಿ ಸಾರ್ವಜನಿಕರಿಗೆ ನಿರ್ಭಯದ ವಾತಾವರಣ ನಿರ್ಮಾಣವಾಗಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.