fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Feature articlesInternationalKarnataka NewsLatestStories

ಭಾರತೀಯರು ಹೆಚ್ಚು ಬಳಸೋ ಪಾಸ್​ವರ್ಡ್​ ಇವೆಯಂತೆ! ಇದರಲ್ಲಿ ನಿಮ್ಮ ಪಾಸ್​ವರ್ಡ್​​ ಕೂಡ ಇದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಇಂದು ಆನ್ಲೈನ್ ಹಾಗೂ ಇಂಟರ್ನೆಟ್ (Internet) ಅಕ್ಷರಶಃ ನಮ್ಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯವಾಗಿವೆ ಎಂಬುದರಲ್ಲಿ ಸಂಶಯವೇ ಇಲ್ಲ. ಎಟಿಎಂನಿಂದ (ATM) ಹಣ ಪಡೆಯುವುದರಿಂದ ಹಿಡಿದು ಮೊಬೈಲ್ (Mobile) ಮೂಲಕ ಹಣ ಪಾವತಿಸುವವರೆಗೆ ಜನರು ಪಾಸ್​ವರ್ಡ್ ಅನ್ನು ಬಳಸದೆ ಇರುವುದು ಸಾಧ್ಯವೇ ಇಲ್ಲ.
ಹಾಗಾಗಿ ಪಾಸ್​ವರ್ಡ್ (Password) ಎಂಬುದು ಬಲು ಮಹತ್ವವಾಗಿದ್ದು ಇದು ಎಷ್ಟು ಗೌಪ್ಯ/ಕಠಿಣ ಹಾಗೂ ಸರಳವಾಗಿ ಇರದಂತೆ ಇರುತ್ತದೆಯೋ ಅಷ್ಟು ಸುರಕ್ಷಿತವಾಗಿರುತ್ತದೆ ನಮ್ಮ ಆನ್ಲೈನ್ ವ್ಯವಹಾರ. ಅದಕ್ಕಾಗಿಯೇ ಸೈಬರ್ ಸುರಕ್ಷತಾ ಪ್ರಾಧಿಕಾರಗಳು ಬಲು ಕಠಿಣವಾದ, ಸರಳವಲ್ಲದ ಪಾಸ್ವರ್ಡ್ ಗಳನ್ನು ಹೊಂದುವಂತೆ ವಿನಂತಿಸುತ್ತಲೇ ಇರುತ್ತಾರೆ.

ಆದರೆ, ಜನರು ಮರೆತು ಬಿಡುತ್ತೇವೇನೋ ಎಂಬ ಭಯದಿಂದ ತಮಗೆ ಸುಲಭವಾದಂತಹ ಯಾವಾಗಲೂ ನೆನಪಿರುವಂತಹ ಅಕ್ಷರಗಳನ್ನೇ ಪಾಸ್​ವರ್ಡ್ ಗಳನ್ನಾಗಿ ಹೊಂದಿರುತ್ತಾರೆ. ಇದು ಅವರಿಗೆ ಸುಲಭ ಎನಿಸಿದರೂ ಇದನ್ನು ಆನ್ಲೈನ್ ಖದೀಮರು ಬೇಗ ಕ್ರ್ಯಾಕ್ ಅಥವಾ ಹ್ಯಾಕ್ ಮಾಡಬಲ್ಲರು. ಹಾಗಾಗಿ ಕಠಿಣವಾದಂತಹ ಪಾಸ್​ವರ್ಡ್ ಇರುವುದು ಅವಶ್ಯಕ. ಆದಾಗ್ಯೂ ಸೈಬರ್ ಚಟುವಟಿಕೆಗಳ ಬಗ್ಗೆ ಗಮನವಿರಿಸುವ ನಾರ್ಡ್ ಪಾಸ್ ಎಂಬ ಸೈಬರ್ ಸುರಕ್ಷತಾ ಸಂಸ್ಥೆಯು ಭಾರತದಲ್ಲಿ 2022 ರಲ್ಲಿ ಬಲು ಸಾಮಾನ್ಯವಾಗಿ ಬಳಸಲ್ಪಡುತ್ತಿದ್ದ ಕೆಲ ಪಾಸ್​ವರ್ಡ್ ಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಬಳಸುವ ಪಾಸ್​ವರ್ಡ್​ಗಳಿವು:

ನಾರ್ಡ್ ಪಾಸ್ ವರದಿ ಹೇಳುವಂತೆ, ಭಾರತದಲ್ಲಿ ಅದರಲ್ಲೂ ವಿಶೇಷವಾಗಿ 2022 ರಲ್ಲಿ ಬಹು ಜನರು ಬಳಸಿರುವ ಪಾಸ್​ವರ್ಡ್ “password” ಎಂಬ ಪದವೇ ಆಗಿದೆಯಂತೆ. ಇದನ್ನು ಏನಿಲ್ಲವೆಂದರೂ 3.4 ಮಿಲಿಯನ್ ಗಳಷ್ಟು ಸಲ ಬಳಸಲಾಗಿದೆ ಎಂದು ನಾರ್ಡ್ ಪಾಸ್ ಹೇಳಿದೆ. ಇದರ ನಂತರ ಹೆಚ್ಚಾಗಿ ಬಳಸಲ್ಪಟ್ಟಿರುವ ಪಾಸ್​ವರ್ಡ್ ಗಳೆಂದರೆ “123456” ಹಾಗೂ “12345678” ಎಂಬುದಾಗಿದೆ ಎಂದು ತಿಳಿದುಬಂದಿದೆ. ನಾರ್ಡ್ ಪಾಸ್ ಹೇಳಿರುವಂತೆ ಈ ಎಲ್ಲ ಪಾಸ್​ವರ್ಡ್ ಗಳು ಬಲು ದುರ್ಬಲವಾಗಿದ್ದು ಕೇವಲ ಒಂದೇ ನಿಮಿಷದಲ್ಲಿ ಹ್ಯಾಕ್ ಮಾಡಬಹುದಾಗಿದೆ.

 

ಆದರೆ, ಈ ಪಟ್ಟಿಯಲ್ಲಿ ನಾಲ್ಕನೇಯ ಅತಿ ಹೆಚ್ಚು ಬಳಸಲ್ಪಟ್ಟ ಪಾಸ್​ವರ್ಡ್ ಕೊಂಚ ವಿಭಿನ್ನವಾಗಿದ್ದು ಊಹಿಸಲು ಕಷ್ಟವೇ ಆಗಿದೆ ಎಂದು ಹೇಳಬಹುದು ಹಾಗೂ ಆ ಪಾಸ್​ವರ್ಡ್ ಎಂದರೆ “bigbasket”. ಈ ಪಾಸ್​ವರ್ಡ್ ಅನ್ನು ಕ್ರ್ಯಾಕ್ ಮಾಡಲು ಸುಮಾರು ಐದು ನಿಮಿಷಗಳವರೆಗೆ ಸಮಯ ಬೇಕಾಗಿದ್ದು ಇದು 75,000 ಸಲ ಬಳಸಲ್ಪಟ್ಟಿರುವುದಾಗಿ ನಾರ್ಡ್ ತನ್ನ ವರದಿಯಲ್ಲಿ ಹೇಳಿದೆ.

ಪಟ್ಟಿಯಲ್ಲಿರುವ ಪಾಸ್ವರ್ಡ್ ಗಳು

ಈ ಮಧ್ಯೆ ನಾರ್ಡ್ ಹೆಚ್ಚು ಬಳಸಲ್ಪಟ್ಟ ಪಾಸ್​ವರ್ಡ್ ಗಳನ್ನು ಕ್ರಮಾಂಕದಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ “123456789” ಐದನೇ ಕ್ರಮಾಂಕದಲ್ಲಿದ್ದರೆ ಅದರ ಹಿಂದೆ “[email protected]” ಹಾಗೂ “1234567890” ಸ್ಥಾನ ಪಡೆದಿವೆ. ಇನ್ನು, ಭಾರತದಲ್ಲಿ ಎಂಟನೇಯ ಸ್ಥಾನದಲ್ಲಿ “anmol123” ಎಂಬ ಪಾಸ್​ವರ್ಡ್ ಬಳಸಲ್ಪಟ್ಟಿದ್ದು ಇದನ್ನು ಹತ್ತು ಸಾವಿರಕ್ಕೂ ಹೆಚ್ಚು ಬಾರಿ ಬಳಸಲಾಗಿದೆ. ಇದರ ವಿಶೇಷತೆ ಎಂದರೆ ಲಿಸ್ಟಿನಲ್ಲಿ ಈ ಪಾಸ್​ವರ್ಡ್ ಕಠಿಣ ಪಾಸ್ವರ್ಡ್ ಎಂಬ ಮನ್ನಣೆಗೆ ಪಾತ್ರವಾಗಿದ್ದು ಇದನ್ನು ಭೇದಿಸಲು ಸುಮಾರು 17 ನಿಮಿಷಗಳ ಅವಶ್ಯಕತೆಯಿದೆ ಎನ್ನಲಾಗಿದೆ.

ಸಂಶೋಧನೆ

Nord Pass ಸಂಸ್ಥೆಯು ಈ ವರದಿಯನ್ನು ಪ್ರಕಟಿಸಲು ಸುಮಾರು 3 ಟಿಬಿಗಳಷ್ಟು ದತ್ತಾಂಶವನ್ನು ಇತರೆ ಸ್ವತಂತ್ರ ಸಂಶೋಧಕರ ಸಹಯೋಗದೊಂದಿಗೆ ವಿಶ್ಲೇಶಿಸಿದ್ದಾರೆ. ಈ ಅಧ್ಯಯನದಲ್ಲಿ ಸುಮಾರು 30 ದೇಶಗಳ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು “Password” ಎಂಬ ಪಾಸ್​ವರ್ಡ್ ಜಗತ್ತಿನಾದ್ಯಂತ ಬಳಸಲ್ಪಟ್ಟ ಬಹು ಸಾಮಾನ್ಯ ಪಾಸ್ವರ್ಡ್ ಆಗಿದ್ದು ಇದುವರೆಗೂ 4.9 ಮಿಲಿಯನ್ ಸಲ ಬಳಸಲಾಗಿದೆ. ತದನಂತರದ ಸ್ಥಾನದಲ್ಲಿ “123456” ಹಾಗೂ “12345678” ಪಾಸ್​ವರ್ಡ್ ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ತಿಳಿದುಬರುವ ವಿಷಯ ಏನು?

ಈ ಸಂಶೋಧನಾ ವರದಿಯನ್ನು ಗಮನಿಸಿದರೆ ಇಂದಿಗೂ ಜನರು ಬಲು ದುರ್ಬಲ ಎನ್ನಬಹುದಾದ ಪಾಸ್​ವರ್ಡ್ ಗಳನ್ನು ಬಳಸುತ್ತಿದ್ದಾರೆ ಎಂದು ಸರಳವಾಗಿ ತಿಳಿದುಬರುತ್ತದೆ. ಅತ್ಯಮೂಲ್ಯವಾದ ತಮ್ಮ ಖಾತೆಗಳನ್ನು ಸಂರಕ್ಷಿಸಲೋ ಅಥವಾ ಇನ್ನ್ಯಾವುದೋ ಮೌಲ್ಯಯುತವಾದ ವಿಷಯ/ವಸ್ತು ಸಂರಕ್ಷಿಸಲೋ ಜನರು ತಮಗೆ ಸರಳ ಎನಿಸುವಂತಹ ಪಾಸ್ವರ್ಡ್ ಬಳಸುವ ರೂಢಿಯಲ್ಲಿದ್ದಾರೆ.

ಆದರೆ, ಇಂದು ಜರುಗುತ್ತಿರುವ ಸೈಬರ್ ಅಪರಾಧಗಳನ್ನು ಗಮನಿಸಿದರೆ ಹಾಗೂ ಹ್ಯಾಕರ್ಸ್ ಗಳು ನಿತ್ಯ ಅಬಿವೃದ್ಧಿಗೊಳ್ಳುತ್ತಿರುವುದನ್ನು ನೋಡಿದರೆ ಮುಂದೆ ಜನರ ಬ್ಯಾಂಕ್ ಖಾತೆಗಳಲ್ಲಿರುವ ಹಣ ಸುರಕ್ಷಿತವಾಗಿರುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ. ಹಾಗಾಗಿ, ಕಾಲ ಬದಲಾದಂತೆ ಜನರೂ ಸಹ ತಮ್ಮ ಆನ್ಲೈನ್ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿ ಕಠಿಣವಾದಂತಹ ಪಾಸ್​ವರ್ಡ್ ಹೊಂದುವ ಅಭ್ಯಾಸ ರೂಢಿ ಮಾಡಿಕೊಳ್ಳುವುದು ಮುಖ್ಯ ಎನಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: