Belagavi NewsKarnataka NewsMake MoneyNational
Trending
ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ: ವಿವಿಧ ಹಾಲುಗಳ ದರ ಏರಿಕೆ ವಿವರ

ಬೆಂಗಳೂರು: ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 2 ರೂ. ಹೆಚ್ಚಳದ ಬಗ್ಗೆ ಮಾಹಿತಿ ನೀಡಿ, ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ ಎರಡು ರೂಪಾಯಿ ಹೆಚ್ಚಳವಾಗಲಿದೆ.
ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿವಿಧ ಹಾಲುಗಳ ದರ ಏರಿಕೆ ವಿವರ
ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37 ರಿಂದ 39 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು ಲೀಟರ್ ಗೆ 38 ರಿಂದ 40 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು 42 ರಿಂದ 44 ರೂ.
ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43 ರಿಂದ 45 ರೂ..
ಹೋಮೋಜಿನೈಸ್ಡ್ ಸ್ಟಾಂಡರ್ಡ್ ಹಾಲು 44 ರಿಂದ 46 ರೂ.
ನಂದಿನಿ ಸಮೃದ್ಧಿ ಹಾಲು ಲೀಟರ್ ಗೆ 48 ರಿಂದ 50 ರೂ.
ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50 ರಿಂದ 52 ರೂ.
ನಂದಿನಿ ಮೊಸರು ಪ್ರತಿ ಕೆಜಿಗೆ 45 ರಿಂದ 47 ರೂ.ಗೆ ಏರಿಕೆಯಾಗಿದೆ.