Belagavi NewsKarnataka NewsNationalPolitics
Trending
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದಿದ್ದ 145 ಮಹಾರಾಷ್ಟ್ರ ಬಸ್ಗಳು ವಾಪಸ್

ಬೆಳಗಾವಿ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಜಾತ್ರೆಗೆಂದು ಸವದತ್ತಿಗೆ ಬಂದಿದ್ದ 145 ಮಹಾರಾಷ್ಟ್ರ ಬಸ್ಗಳು ವಾಪಸ್ ರಾಜ್ಯಕ್ಕೆ ಸುರಕ್ಷಿತವಾಗಿ ಹೋಗಿವೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲಕ್ಕೆ ಮಹಾರಾಷ್ಟ್ರದಲ್ಲಿನ ಭಕ್ತರು ಆಗಮಿಸಿದ್ದರು. ಮಹಾರಾಷ್ಟ್ರದಿಂದ ಬಂದ ಬಸ್ಗಳನ್ನು ಒಂದೆಡೆ ಪಾರ್ಕ್ ಮಾಡಿ ಪೊಲೀಸ್ ಭದ್ರತೆ ನೀಡಲಾಗಿತ್ತು.
ಆ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಸುರಕ್ಷಿತವಾಗಿ ಅಷ್ಟೂ ಬಸ್ಗಳನ್ನು ರಾಜ್ಯಕ್ಕೆ ವಾಪಸ್ ಕಳುಹಿಸಲಾಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸರಿಗೆ ಎಂಎಸ್ ಆರ್ ಟಿಸಿ ಅಧಿಕಾರಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ. ಕೊಲ್ಲಾಪುರ ವಿಭಾಗದ 145 ಬಸ್ಗಳು ಸುರಕ್ಷಿತವಾಗಿ ವಾಪಸ್ ಆಗಿವೆ.