Belagavi NewsKarnataka NewsLatestPolitics
BIGG NEWS : ಇಂದಿನಿಂದ `ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ’ ಆರಂಭ : 10 ದಿನ 20 ಜಿಲ್ಲೆಗಳಲ್ಲಿ ಸಂಚಾರ

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷವು ಇಂದಿನಿಂದ ಬೆಳಗಾವಿಯ ಗಾಂಧಿಬಾವಿಯಲ್ಲಿ ಪ್ರಜಾಧ್ವನಿ ರಥಯಾತ್ರೆಗೆ ಚಾಲನೆ ನೀಡಲಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್ ನೇತೃತ್ವದಲ್ಲಿ 20 ಜಿಲ್ಲೆಗಳಲ್ಲಿ 10 ದಿನಗಳ ಕಾಲ ಜಂಟಿಯಾಗಿ ಪ್ರಜಾಧ್ವನಿ ಬಸ್ ಯಾತ್ರೆ ನಡೆಯಲಿದೆ.ಜನವರಿ 11 ರಿಂದ 28 ರವರೆಗೆ 20 ಜಿಲ್ಲೆಗಳಲ್ಲಿ ಉಭಯ ನಾಯಕರು ಒಟ್ಟಿಗೇ ಬಸ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ಕೇಂದ್ರ, ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಹಾಗೂ ಜ.18 ರಂದು ಬಾಗಲಕೋಟೆಯ ಕಾಳಿದಾಸ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ ಚಿಕ್ಕೋಡಿ ಮತ್ತು ಮಧ್ಯಾಹ್ನ ಬೆಳಗಾವಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಸಭೆ ನಡೆಯಲಿದೆ. ಜ.28 ರವರೆಗೆ 20 ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದೆ.