Feature articlesKarnataka NewsLatestPolitics
ಶುಭ ಸುದ್ದಿ: ಇಂದಿನಿಂದ ಖಾತೆಗೆ 5000 ರೂ. ಜಮಾ: ‘ನೇಕಾರ ಸಮ್ಮಾನ್ ಯೋಜನೆ’ಗೆ ಸಿಎಂ ಚಾಲನೆ

ಬೆಂಗಳೂರು: ನೇಕಾರರಿಗೆ 5000 ರೂ. ನೀಡುವ ಯೋಜನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಮಗ್ಗ ನೇಕಾರರಿಗೆ, ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವಿನ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಮತ್ತು ಕಾರ್ಮಿಕರಿಗೆ 2022 -23ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯ 5,000 ರೂ. ಆರ್ಥಿಕ ನೆರವನ್ನು ಡಿಬಿಟಿ ಮೂಲಕ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.