ಮೆಟ್ರೋ ಪಿಲ್ಲರ್ ದುರಂತ, ಸಾಲು ಸಾಲು ಪ್ರತಿಭಟನೆ: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಜನ ಹೈರಾಣ

ಮೆಜೆಸ್ಟಿಕ್, ಗಾಂಧಿನಗರ, ಮೈಸೂರು ಬ್ಯಾಂಕ್ ವೃತ್ತ, ಬಸವೇಶ್ವರ ವೃತ್ತ, ಸ್ಯಾಂಕಿ ರಸ್ತೆ, ಶಿವಾನಂದ ವೃತ್ತ, ಆನಂದರಾವ್ ವೃತ್ತ, ಓಕಳಿಪುರ, ಶೇಷಾದ್ರಿಪುರ, ಮಲ್ಲೇಶ್ವರ, ರೇಸ್ಕೋರ್ಸ್ ರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕೆಂಪೇಗೌಡ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಭಾರೀ ಸಂಚಾರ ದಟ್ಟಣೆ ಕಂಡು ಬಂದಿತು. ಎಚ್ಬಿಆರ್ ಲೇಔಟ್ ಮತ್ತು ಔಟರ್ ರಿಂಗ್ ರೋಡ್ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗಳ ಮೇಲೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದರೂ, ಈ ಘಟನೆ ಕೂಡ ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿತ್ತು. ಮೆಟ್ರೋ ಪಿಲ್ಲರ್ ದುರಂತ ಬಳಿಕ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಮೆಟ್ರೋ ಪಿಲ್ಲರ್ ದುರಂತ: ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸುವವರೆಗೂ ಶವ ತೆಗೆದುಕೊಳ್ಳಲ್ಲ; ಮೃತ ತೇಜಸ್ವಿನಿ ತಂದೆ ಪಟ್ಟು!ಮ್ಯಾನೇಜ್ಮೆಂಟ್ ವೃತ್ತಿಪರರಾದ ಶ್ರುತಿ ಸೋಮಯ್ಯ ಎಂಬುವವರು ಮಾತನಾಡಿ, ಮೆಜೆಸ್ಟಿಕ್ ಬಳಿ ನಡೆದ ಪ್ರತಿಭಟನೆಯಿಂದಾಗಿ ನನ್ನ ಪ್ರಯಾಣದ ಸಮಯ 1.5 ಗಂಟೆ ತೆಗೆದುಕೊಂಡಿತು. ಬೆಂಗಳೂರು ಗಾಲ್ಫ್ ಕ್ಲಬ್ನಿಂದ ರೈಲ್ವೇ ನಿಲ್ದಾಣದವರೆಗೆ ಹೋಗಲು 1.5 ಗಂಟೆ ಸಮಯ ಬೇಕಾಯಿತು. ಪೀಕ್ ಅವರ್ನಲ್ಲಿ ಯಾವ ಅಧಿಕಾರಿಗಳು ಪ್ರತಿಭಟನೆಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದ್ದಾರೆ. ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ಮಾತನಾಡಿ, ನಗರದ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 450 ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.