Feature articlesLatestNationalPolitics
BREAKING NEWS : ‘BHIM UPI’ ವಹಿವಾಟುಗಳಿಗೆ ‘ಪ್ರೋತ್ಸಾಹಧನ’ ನೀಡಲು ‘ಕೇಂದ್ರ ಸಚಿವ ಸಂಪುಟ’ ಅನುಮೋದನೆ |BHIM UPI Transaction Incentive

ನವದೆಹಲಿ : ಸಣ್ಣ ಮೊತ್ತದ ಡಿಜಿಟಲ್ ವಹಿವಾಟಿಗೆ 2600 ಕೋಟಿ ರೂ.ಗಳ ಪ್ರೋತ್ಸಾಹಧನ ನೀಡಲು ಮೋದಿ ಸಂಪುಟ ಅನುಮೋದನೆ ನೀಡಿದೆ. BHIM UPI ನಿಂದ ವಹಿವಾಟುಗಳ ಮೇಲೆ ಪ್ರೋತ್ಸಾಹ ಲಭ್ಯವಿರುತ್ತದೆ. ಇದರೊಂದಿಗೆ ಮೂರು ಬಹುಹಂತದ ಸಹಕಾರಿ ಸಂಘಗಳನ್ನ ರಚಿಸಲು ಸಂಪುಟ ಸಭೆ ನಿರ್ಧರಿಸಿದೆ.
ಇದರೊಂದಿಗೆ ಪ್ರಧಾನಿ ಉಚಿತ ಆಹಾರ ಯೋಜನೆಯ ಹೆಸರನ್ನ ಬದಲಾಯಿಸಲು ಮೋದಿ ಸಂಪುಟ ನಿರ್ಧರಿಸಿದೆ. ಇನ್ನು ಮುಂದೆ ಕಾರ್ಯಕ್ರಮದ ಹೆಸರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಾಗಿದೆ. ಅದ್ರಂತೆ, ಈ ಹಿಂದಿನ ಸಚಿವ ಸಂಪುಟದಲ್ಲಿ ಉಚಿತ ಆಹಾರ ಯೋಜನೆಯನ್ನ ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು.
ಆಹಾರ ಯೋಜನೆ ಡಿಸೆಂಬರ್ 31ರಂದು ಕೊನೆಗೊಳ್ಳುತ್ತಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಏಪ್ರಿಲ್ 2020ರಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನ ಪ್ರಾರಂಭಿಸಲಾಯಿತು. ಇದನ್ನ ಒಂದು ವರ್ಷದವರೆಗೆ ವಿಸ್ತರಿಸಲಾಯಿತು.