fbpx
Belagavi NewsFeature articlesKarnataka NewsNationalPoliticsStories
Trending

ವಿರೋಧಿಗಳಿಗೆ ಪಾಠ ಕಲಿಸಲು ರಾಜಕೀಯ ಚಾಣಕ್ಯ ಶಿಷ್ಯನಿಗೆ, ಮತ್ತೆ ಬಲೆ ಬೀಸಿದ ಗುರು: ಖಾನಾಪುರ ವಿಧಾನಸಭಾ ಕ್ಷೇತ್ರ: ಮತ್ತೆ..!! ಒಂದಾಗ್ತಾರಾ..? ಗುರು ಶಿಷ್ಯರು

ವಿರೋಧಿಗಳಿಗೆ ಪಾಠ ಕಲಿಸಲು ರಾಜಕೀಯ ಚಾಣಕ್ಯ ಶಿಷ್ಯನಿಗೆ, ಮತ್ತೆ ಬಲೆ ಬೀಸಿದ ಗುರು:

 

ಖಾನಾಪುರ ವಿಧಾನಸಭಾ ಕ್ಷೇತ್ರ:

*ಮತ್ತೆ..!! ಒಂದಾಗ್ತಾರಾ..? ಗುರು ಶಿಷ್ಯರು:*

 

*ಗುರು ನಾಶೀರ ಅಣ್ಣಾ ಹುಟ್ಟುಹಬ್ಬದಂದೇ, ಶಿಷ್ಯ ಕಾಶೀಮ ತೆನೆ ಹೊರುತ್ತಾರಾ..??*

 

 

 

ಖಾನಾಪುರ: 2018ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಜೆಡಿಎಸ್ ಪಕ್ಷದ ಅಭ್ಯರ್ಥಿ, ನೂರಾರು ದೇವಸ್ಥಾನಗಳ ಜೀರ್ಣೋದ್ಧಾರಕ, ನೀರಾವರಿಯ ಚಿಂತಕ, ನೊಂದವರ ಪಾಲಿನ ದೇವರು, ಶಿವಾಜಿ-ಬಸವೇಶ್ವರ-ಅಂಬೇಡ್ಕರ್ ಮೂರ್ತಿಗಳ ಸ್ಥಾಪಕ ಖಾನಾಪುರ ತಾಲೂಕಿನ ಗಂದಿಗವಾಡದ ಹೆಮ್ಮೆಯ ಸುಪುತ್ರ ಖ್ಯಾತ ಉದ್ಯಮಿ ನಾಶೀರ ಅಣ್ಣಾ ಬಾಗವಾನ ಹಾಗೂ ಅವರ ದತ್ತಕ ಪುತ್ರನಂದೇ ಖ್ಯಾತಿ ಪಡೆದಿರುವ, ಪ್ರಾಮಾಣಿಕ, ನಿಷ್ಪಕ್ಷಪಾತ ಸಣ್ಣ ವಯಸ್ಸಿನಲ್ಲಿಯೇ ಚುನಾವಣಾ ಚಾಣಾಕ್ಷ ಎಂದು ಪ್ರಖ್ಯಾತಿ ಪಡೆದಿರುವ ಯುವ ರಾಜಕಾರಣಿ ಹಾಗೂ ಪತ್ರಕರ್ತರಾದ ಕಾಶೀಮ ಹಟ್ಟಿಹೋಳಿ ಅವರ ಕಥೆ ಇದು.

ಕಳೆದ 2016ರ ಸಂದರ್ಭದಲ್ಲಿ ಲಿಂಗನಮಠ ಗ್ರಾಮದ ಹಿರಿಯ ಅನುಭವಿ ರಾಜಕಾರಣಿ ಹಾಗೂ ಮರಾಠಾ ಸಮಾಜದ ಮುಖಂಡ ಪಾಂಡುರಂಗ ಮೀಟಗಾರ ಅವರ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ ಲಿಂಗನಮಠ ಗ್ರಾಮದ ಹೆಮ್ಮೆಯ ಸುಪುತ್ರ ಯುವ ರಾಜಕಾರಣಿ ಮತ್ತು ಪತ್ರಕರ್ತರಾದ ಕಾಶೀಮ ಹಟ್ಟಿಹೋಳಿ ಅವರು ತಾಲೂಕಿನಾದ್ಯಂತ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಹಾಗೂ ಎಲ್ಲ ಜನರ “ಭಗವಾನ್” ಎಂದೆ ಹೆಸರುಗಳಿಸಿರುವ ನಾಶೀರ ಅಣ್ಣಾ ಬಾಗವಾನ ಅವರ ಪರಿಚಯವಾಗಿ ದಿನ ಕಳೆದಂತೆ ಸಂಬಂಧವು ಉತ್ತಮವಾಗಿ ಬೆಳೆಯುತ್ತೆ. ತದನಂತರ ಕೆಲವೇ ತಿಂಗಳೊಳಗೆ ಗುರು ನಾಶೀರ ಅಣ್ಣಾ ಬಾಗವಾನ ಅವರು ಶಿಷ್ಯ ಕಾಶೀಮ ಹಟ್ಟಿಹೊಳಿ ಅವರ ರಾಜಕೀಯ ಚಾಣಾಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಗಮನಿಸಿ ಶಿಷ್ಯನಿಗೆ ತಮ್ಮ ರಾಜಕೀಯ ಆಪ್ತ ಸಹಾಯಕನಾಗಿ ಇರಲು ಸೂಚಿಸುತ್ತಾರೆ. ಗುರುವಿನ ಆಜ್ಞೆಯಂತೆಯೇ ಶಿಷ್ಯ ಮುಂದಿನ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿ ಕಳೆದ ಸುಮಾರು ವರ್ಷಗಳಿಂದ ಗುರು ಯಾವುದೇ ಅಧಿಕಾರ ಇಲ್ಲದೆ ಸ್ವತಃ ತಮ್ಮ ದುಡ್ಡಿನಿಂದ ಜನ ಸೇವೆ ಮಾಡಿರುವುದನ್ನು ಮಾಹಿತಿಯನ್ನು ಸಂಗ್ರಹಿಸಿ ಇಡೀ ತಾಲೂಕಿನ ಜನತೆಗೆ ಜಾತ್ಯಾತೀತ ಜನನಾಯಕನ ಅವಶ್ಯಕತೆ ಇದೆ ಇಂತಹವರನ್ನು ನೀವು ಶಾಸಕರನ್ನಾಗಿ ಆಯ್ಕೆ ಮಾಡಿರಿ ಎಂದು ಪ್ರಚಾರ ಮಾಡಲು ಶುರು ಮಾಡುತ್ತಾನೆ.

 

ಶಿಷ್ಯನ ರಾಜಕೀಯ ಚಾಣಾಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಗುರು ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಭರವಸೆ ಹಾಗೂ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ಮಾಡಲು ಜವಾಬ್ದಾರಿಯನ್ನು ಶಿಷ್ಯನ ಹೆಗಲಿಗೆ ಏರಿಸುತ್ತಾರೆ. ಆ ಸಂದರ್ಭದಲ್ಲಿ ಹೇಳಿಕೊಳ್ಳುವಷ್ಟು ಜೆಡಿಎಸ್ ಪಕ್ಷದ ಪ್ರಚಾರ ಹಾಗೂ ಕಾರ್ಯಕರ್ತರು ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿರಲಿಲ್ಲ. ಆದರೂ ಸಹ ನಾಶೀರ ಅಣ್ಣಾ ಬಾಗವಾನ ಅವರ ಅಭಿಮಾನಿ ಬಳಗವನ್ನು ಪ್ರತಿ ಗ್ರಾಮದಲ್ಲಿಯೂ ಕಟ್ಟಿ ಬೆಳೆಸಿ ಎಲ್ಲ ಅಭಿಮಾನಿ ಬಳಗದಲ್ಲಿ ಗುರುವಿನ ಬಗ್ಗೆ ಅಭಿಮಾನವನ್ನು ಹೆಚ್ಚಿಸುತ್ತಾರೆ. ಆದರೆ 2018ರ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ನಾಶೀರ ಬಾಗವಾನ ಅವರ ಮನೆ ಮತ್ತು ಕಚೇರಿಯ ಮೇಲೆ ಐಟಿ ರೇಡ್ ಆಗಿ ಮಾನಸಿಕ ನೆಮ್ಮದಿ ಹಾಳು ಮಾಡುವುದರ ಜೊತೆಗೆ ಸ್ವಲ್ಪ ಚುನಾವಣೆಯಲ್ಲಿ ಆರ್ಥಿಕತೆ ಹೊಂದಿಸುವುದರಲ್ಲಿ ಅರ್ಥವ್ಯಸ್ತವಾಯಿತು. ಹೀಗಿದ್ದರೂ ಸಹ ಗುರು ನಾಶೀರ ಅಣ್ಣಾ ಮಾನಸಿಕ ಒತ್ತಡದಿಂದ ಅಭಿಮಾನಿಗಳಿಗೆ ಸಂಪರ್ಕ ಮಾಡಲು ಆಗದೆ ಇದ್ದರೂ ಸಹ, ಅವರ ಶಿಷ್ಯ ಕಾಶೀಮ ಹಟ್ಟಿಹೋಳಿ ಚಾಚು ತಪ್ಪದೇ ಪ್ರತಿಯೊಬ್ಬ ಅಭಿಮಾನಿ ಮತ್ತು ಕಾರ್ಯಕರ್ತರಿಗೆ ಸಂಪರ್ಕ ಮಾಡಿ ತಮ್ಮ ಗುರುವಿಗೆ ತಮ್ಮೆಲ್ಲರ ಆಶೀರ್ವಾದ ಮಾಡಿರಿ ಎಂದು ಮನವಿ ಮಾಡಿಕೊಳ್ಳುತ್ತಾರೆ.

 

ನಾಶೀರ ಅಣ್ಣಾ ಬಾಗವಾನ ಅವರ ಜನಪರ ಸೇವೆಗೆ ಮೆಚ್ಚಿ ಹಾಗೂ ಶಿಷ್ಯ ಕಾಶೀಮ ಹಟ್ಟಿಹೋಳಿ ಅವರ ಮನವಿಗೆ ಸ್ಪಂದಿಸಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ 28000ಸಾವಿರ(ಇಪ್ಪಟೆಂಟು ಸಾವಿರ) ಮತದಾರರು ಮತದಾನ ಚಲಾಯಿಸಿ ಆಶೀರ್ವಾದ ಮಾಡಿರುತ್ತಾರೆ. ಆದರೂ ಸಹ ಕೆಲವೇ ಮತಗಳ ಅಂತರದಿಂದ ಪರಾಭವಗೊಳ್ಳುತ್ತಾರೆ.

 

ಆದರೆ ಕಳೆದ ಎರಡು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಿಷ್ಯ ಕಾಶೀಮ ಹಟ್ಟಿಹೋಳಿ ಅವರು ಲಿಂಗನಮಠ ಗ್ರಾಮ ಪಂಚಾಯಿತಿಯಲ್ಲಿ ತಮ್ಮ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿ, ಎರಡು ವಾರ್ಡ್ ಗಳಿಂದ 7 ಜನ ಸದಸ್ಯರಲ್ಲಿ, ಕಾಶೀಮ ಹಟ್ಟಿಹೋಳಿ ಫೇನಲ್ ನ 5ಜನ ಸದಸ್ಯರು ವಿಜಯ್ ಶಾಲಿಯಾಗುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿ, ಪ್ರಸ್ತುತ ಲಿಂಗನಮಠ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಆದರೆ ಕಳೆದ 2021ರ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಶಾಸಕಿ ಅಂಜಲಿ ನಿಂಬಾಳಕರ ಅವರ ಸಂಪರ್ಕದೊಂದಿಗೆ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಚೆನ್ನರಾಜ ಹಟ್ಟಿಹೊಳಿ ಅವರಿಗೆ ಬೆಂಬಲ ಸೂಚಿಸಿ ಮತ ಚಲಾಯಿಸುತ್ತಾರೆ. ಅಂದಿನಿಂದ ಸತತವಾಗಿ ಸ್ಥಳೀಯ ಶಾಸಕಿ ಅಂಜಲಿ ನಿಂಬಾಳಕರ ಅವರ ಸಂಪರ್ಕದಲ್ಲಿದ್ದು ರಾಜಕೀಯ ಚಾಣಕ್ಯ, ಯುವ ರಾಜಕಾರಣಿ ಕಾಶೀಮ ಹಟ್ಟಿಹೋಳಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಸ್ಥಳೀಯ ಶಾಸಕೀಯವರಾದ ಅಂಜಲಿ ನಿಂಬಾಳ್ಕರ್ ಅವರು ತಾಲೂಕಿನ ಹೆಸರಾಂತ ರಾಜಕಾರಣಿ ಗುರು ನಾಶೀರ ಅಣ್ಣಾ ಬಾಗವಾನ ಅವರ ಶಿಷ್ಯ ಕಾಶೀಮ ಹಟ್ಟಿಹೊಳಿ ಅವರ ಮೂಲಕ ಮುಸ್ಲಿಂ ಸಮಾಜದ ಹಿರಿಯ ನಾಯಕರ ಜೊತೆಗೆ ನೂರಾರು ಮುಖಂಡರನ್ನು ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ತದನಂತರ ಗುರು-ಶಿಷ್ಯರ ನಡುವೆ ಕಳೆದೊಂದು ವರ್ಷದಿಂದ ಯಾವುದೇ ಸಂಪರ್ಕ ಹಾಗೂ ಮಾತುಕತೆ ನಡೆದಿರಲಿಲ್ಲ. ಆದರೆ ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಿಷ್ಯನ ಪ್ರಾಮಾಣಿಕತೆ ಮತ್ತು ರಾಜಕೀಯ ಚಾಣಾಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಗುರು ಮತ್ತೆ ಈಗ ಶಿಷ್ಯನ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆಸಿ ಬರುವ ಫೆಬ್ರುವರಿ 2ರಂದು ನಡೆಯುವ ತಮ್ಮ ಹುಟ್ಟು ಹಬ್ಬದಂದೇ, ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಸಾಹೇಬರ ಸಮ್ಮುಖದಲ್ಲಿ ಮತ್ತೆ ಜೆಡಿಎಸ್ ಪಕ್ಷದ ಶಾಲು ಹಾಕುವುದರ ಜೊತೆಗೆ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದಲ್ಲಿ ಮಹತ್ತ್ವವಾದ ಜವಾಬ್ದಾರಿಯನ್ನು ನೀಡಲು ಸಜ್ಜಾಗಿದ್ದಾರೆ ಎಂದು ತಾಲೂಕಿನಾದ್ಯಂತ ಸಾರ್ವಜನಿಕರಲ್ಲಿ ಗುಸು-ಗುಸು ಚರ್ಚೆ ನಡೆಯುತ್ತಿದೆ.

 

ಒಟ್ಟಾರೆಯಾಗಿ ಹೇಳಬೇಕೆಂದರೆ ಈಗಿನ ಸ್ಥಳೀಯ ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೂ ಆತ್ಮೀಯರಾದ ಶಿಷ್ಯ ಕಾಶೀಮ ಹಟ್ಟಿಹೋಳಿ ಅವರು ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗೂ ಸ್ಥಳೀಯ ಶಾಸಕಿ ಅಂಜಲಿತಾಯಿ ಅವರು ಸಹ ಇವರ ಮೇಲೆ ಹೆಚ್ಚಿನ ಭರವಸೆಯನ್ನು ಸಹ ಇಟ್ಟುಕೊಂಡಿದ್ದಾರೆ. ಆದರೆ ಬರುವ ದಿನಗಳಲ್ಲಿ ಗುರು-ಶಿಷ್ಯರು ಮತ್ತೆ..!! ಒಂದಾಗ್ತಾರಾ.?? ಎಂಬುದು ಕಾದು ನೋಡೋಣ ವೀಕ್ಷಕರೆ.

 

ವರದಿ: ಜ್ಯೋತಿಭಾ ಬೆಂಡಿಗೇರಿ

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: