fbpx
All Categories AdvertisementBelagavi NewsEducationFeature articlesKarnataka NewsScienceSports

ಪತ್ರಕರ್ತರು ಆರೋಗ್ಯವಾಗಿರಿ ಎಂದು ಕಾಳಜಿ ವಹಿಸಿದ ಬೆಳಗಾವಿಯ ವಿಜಯಾ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ರವಿ ಪಾಟೀಲ

ಬೆಳಗಾವಿ:  ಶನಿವಾರ ನಗರದ ಖಾಸಗಿ ಸ್ಥಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿಯ ವಿಜಯಾ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ರವಿ ಪಾಟೀಲ ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ, ದಯವಿಟ್ಟು ಎಲ್ಲರೂ ತಮ್ಮ ಆರೋಗ್ಯದ ಕಡೆ ಸ್ವಲ್ಪ್ ಗಮನ ನೀಡಬೇಕು ಎಂಬ ಕಾಳಜಿಪೂರ್ವಕ ಮನವಿ ಮಾಡಿದರು..

ಪತ್ರಿಕಾ ಮಾಧ್ಯಮದವರ ಕೆಲಸ ಏಷ್ಟು ಇರುತ್ತೆ ಮತ್ತು ಯಾವ ವೇಗದಲ್ಲಿ ಇರುತ್ತೆ ಅಂತ ನಮಗೆ ಗೊತ್ತಿದೆ, ಒಂದು ಕಾರ್ಯಕ್ರಮ ಚಾಲ್ತಿಯಲ್ಲಿ ಇದ್ದಾಗಲೇ, ಮತ್ತೊಂದು ಕಾರ್ಯಕ್ರಮಕ್ಕೆ ತಮಗೆ ಕರೆ ಬಂದಿರುತ್ತದೆ, ಹಗಲು ರಾತ್ರಿ ಎನ್ನದೇ, ಒಳ್ಳೆಯದು, ಕೆಟ್ಟದ್ದು ಯಾವುದೇ ಇದ್ದರೂ ತಾವು ಹೋಗಿ ವರದಿ ಮಾರುತ್ತಿರಿ..

ಬಿಡುವಿಲ್ಲದ ಕೆಲಸ ನಿಮ್ಮದು, ನಾವು ನಮ್ಮಲ್ಲಿ ಬರುವ ರೋಗಿಗಳನ್ನ ಮಾತ್ರ ನೋಡಿದರೆ, ನೀವು ಸಮಾಜದ ಎಲ್ಲಾ ರಂಗಗಳ ಸುದ್ದಿ ವರದಿ ಮಾಡಬೇಕು, ಸಾಮಾಜಿಕ, ರಾಜಕೀಯ, ಆಡಳಿತ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಸಾರ್ವಜನಿಕ ಸಮಸ್ಯ, ಪ್ರತಿಭಟನೆ, ಹೋರಾಟ, ಕಾನೂನು ಮತ್ತು ಸುವ್ಯವಸ್ಥೆ, ಹೀಗೆ ಹತ್ತು ಹಲವಾರು ಕ್ಷೇತ್ರಗಳ ಕುರಿತು ತಮ್ಮ ಕೆಲಸ ಇರುತ್ತೆ ಎಂದರು..

ಹೀಗಿರುವಾಗ ತಮ್ಮ ಊಟೋಪಚಾರ, ವಿಶ್ರಾಂತಿ, ಸರಿಯಾಗಿ ಆಗದೇ ಇರಬಹುದು, ಅದಕ್ಕಾಗಿ ನಾವು ತಮ್ಮ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆ ನೀಡುತ್ತೇವೆ ಎಂದು, ಆಹಾರ ಪದ್ಧತಿ, ಕೆಲಸದ ರೀತಿ, ವಿಶ್ರಾಂತಿ ಹಾಗೂ ನಿದ್ದೆಯ ಮಹತ್ವದ ಬಗ್ಗೆ ಹಲವಾರು ಸಲಹೆಗಳನ್ನು ನೀಡಿದರು….

ಹೊಣಗಾ ಗ್ರಾಮದಲ್ಲಿ ಇರುವ ತಮ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುತ್ತೇವೆ ಎಲ್ಲರೂ ಬಂದು ತಪಾಸಣೆ ಮಾಡಿಕೊಂಡು ಆರೋಗ್ಯವಾಗಿರಿ, ಮುಂದು ಚುನಾವಣೆ ಬರುತ್ತಿದ್ದು, ಎಲ್ಲರಿಗೂ ಕೆಲಸದ ಒತ್ತಡ ಆಗುತ್ತದೆ, ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬದನ್ನು ನಾವು ತಿಳಿಸುತ್ತೇವೆ ಎಂದು ಪತ್ರಕರ್ತರ ಮೇಲಿನ ಕಳಕಳಿಯ ಮನವಿ ಮಾಡಿದರು..

ಡಾಕ್ಟರ್ ರವಿ ಪಾಟೀಲ ಅವರ ಆದಿಯಾಗಿ ಇನ್ನು ಹಲವು ವೈದ್ಯರು ಪತ್ರಕರ್ತರಿಗೆ ಹಲವಾರು ಆರೋಗ್ಯಕರ ಸಲಹೆ ನೀಡಿದರು,, ಆರೋಗ್ಯಕ್ಕೆ ಸಂಭದಿಸಿದ ಪತ್ರಕರ್ತರ ಕೆಲವು ಪ್ರಶ್ನೆಗಳಿಗೂ ವೈದ್ಯರು ಉತ್ತರಿಸಿದರು..

ಈ ಪತ್ರಿಕಾಗೋಷ್ಠಿಯಲ್ಲಿ ವಿಜಯಾ ಆಸ್ಪತ್ರೆಯ ಪ್ರಮುಖ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: