ಹೆಚ್ಚುವರಿ ವಿದ್ಯುತ್ ದರ ಏರಿಕೆಯನ್ನು ಕಡಿತಗೊಳಿಸುವಂತೆ ಸುಳೇಭಾವಿ, ಮಾರಿಹಾಳ, ಮೋದಗಾ, ಸಾಂಬ್ರಾ ಹಾಗೂ ಸಮೀಪದ ಗ್ರಾಮಗಳ ವಿದ್ಯುತ್ ಆಧಾರಿತ ಕೈ ಮಗ್ಗಗಳ ಮಾಲೀಕರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ

ತ್ರಿಫೇಸ್ ಸಿಂಗಲ್ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಸುಳೇಭಾವಿ, ಮಾರಿಹಾಳ, ಮೋದಗಾ, ಸಾಂಬ್ರಾ ಹಾಗೂ ಸಮೀಪದ ಗ್ರಾಮಗಳ ವಿದ್ಯುತ್ ಆಧಾರಿತ ಕೈ ಮಗ್ಗಗಳ ಮಾಲೀಕರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ತೀವ್ರ ಪ್ರತಿಭಟನೆ ನಡೆಸಿದರು.
ಒಂದೆಡೆ ಮಾಸಿಕ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಹಾಗೂ ಹೆಸ್ಕಾಂ ವಿದ್ಯುತ್ ದರವನ್ನು ಭಾರಿ ಹೆಚ್ಚಳ ಮಾಡಿದೆ. ಇದರಿಂದ ನೇಕಾರರು, ಜನಸಾಮಾನ್ಯರು ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಇಂದು ಬೆಳಗಾವಿಯಲ್ಲಿ ನೇಕಾರರು ಸುಮುದಾಯ ಸಂಘಟನೆಯ ಪ್ರತಿಭಟನೆಗೆ ಕರೆನೀಡಿ ವಿದ್ಯುತ್ ದರ ಏರಿಕೆಯನ್ನು ಕೂಡಲೇ ಕಡಿಮೆ ಮಾಡಿ ಹಳೆಯ ದರದಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನೇಕಾರ ಮುಖಂಡರು, ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯಿಂದ ಎಲ್ಲ ಸಮುದಾಯದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ನೇಕಾರ ಸಮುದಾಯ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಈಗಾಗಲೇ ಜವಳಿ ವ್ಯಾಪಾರ ಬಿಕ್ಕಟ್ಟಿನಲ್ಲಿದ್ದು, ಹೆಚ್ಚಿದ ವಿದ್ಯುತ್ ಬಿಲ್ ಪಾವತಿಸಲು ಅಸಾಧ್ಯವಾಗಿದೆ. ಆದ್ದರಿಂದ ಅವರ ಮೇಲಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರು ಮತ್ತು ಅವರ ‘ಮೂರು ಹಂತದ ವಿದ್ಯುತ್ ಬಳಕೆದಾರರು ಮುಂದಿನ ಆದೇಶದವರೆಗೆ ಬಿಲ್ ಪಾವತಿಸದಿರಲು ನಿರ್ಧರಿಸಿದ್ದಾರೆ’ ಈ ಹಿಂದಿನ ಸುಂಕದ ಆಧಾರದ ಮೇಲೆ ಪರಿಷ್ಕೃತ ದರವನ್ನು ನೀಡುವಂತೆ ನಾವು ಅವರನ್ನು ಕೇಳುತ್ತಿದ್ದೇವೆ ಎಂದರು.
ಸುಳೇಭಾವಿಯ ನೇಕಾರ ನಿಂಗಪ್ಪ ಉರಮಟ್ಟಿ ಮಾತನಾಡಿ, ವಿದ್ಯುತ್ ಬೇಡಿಕೆಗೆ 1 ಎಚ್ಪಿಗೆ ಮೂರು ಹಂತದ ಕನಿಷ್ಠ ಶುಲ್ಕ ಈ ಹಿಂದೆ 80 ರೂ.ಗಳಾಗಿದ್ದು, ಈಗ ಅದನ್ನು 140/- ರೂ.ಗೆ ಹೆಚ್ಚಿಸಲಾಗಿದೆ ಮತ್ತು ಇಂಧನ ಮೇಲ್ತೆರಿಗೆ ಈ ಹಿಂದೆ 0-57 ಪೈಸೆ ಇತ್ತು. ಘಟಕ. ಈಗ ಪ್ರತಿ ಯೂನಿಟ್ಗೆ 2.55/- ಆಗಿದೆ. ಹೆಚ್ಚುವರಿ ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು. ಅಲ್ಲದೆ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ವಿದ್ಯುತ್ ಬಿಲ್ ಗಳನ್ನು ರದ್ದುಪಡಿಸಿ ಮೊದಲಿನಂತೆ ಬಿಲ್ ಮಾಡಬೇಕು.
ಒಟ್ಟಿನಲ್ಲಿ ಹೆಸ್ಕಾಂ ಮತ್ತು ಸರಕಾರ ವಿದ್ಯುತ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ. ಇದರಿಂದಾಗಿ ಹಿಂದಿನ ವಿದ್ಯುತ್ ಬಿಲ್ಗಿಂತ ಎರಡು ಮೂರು ಪಟ್ಟು ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ. ವಿದ್ಯುತ್ ಬಿಲ್ ಕಡಿಮೆಯಾಗುವವರೆಗೆ ನಾವು ಪಾವತಿಸುವುದಿಲ್ಲ ಎಂಬ ನಿಲುವನ್ನು ವಿದ್ಯುತ್ ನೇಕಾರರು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.