ಕಿತ್ತೂರು ಲೋಕ್ ಸಭಾ ಕ್ಷೇತ್ರ ವಾಗಲಿ ಆಡಳಿತದ ಅನುಕೂಲಕ್ಕಾಗಿ

*ಕಿತ್ತೂರು ಲೋಕ್ ಸಭಾ ಕ್ಷೇತ್ರ ವಾಗಲಿ*
ಆಡಳಿತದ ಅನುಕೂಲಕ್ಕಾಗಿ
ಐತಿಹಾಸಿಕ ಚೆನ್ನಮ್ಮನ ಕಿತ್ತೂರು ಜಿಲ್ಲೆಯಾಗಿ ರಚನೆ ಆಗಬೇಕು. ಕಿತ್ತೂರು ಲೋಕ್ ಸಭಾ ಕ್ಷೇತ್ರವಾಗಿ ರಚನೆ ಆಗಬೇಕು ಆಗ ಮಾತ್ರ ರಾಣಿ ಚನ್ನಮಾಜಿಯ ಹೋರಾಟಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನಕೆ ಈಗಿನ ರಾಜಕಾರಣಿಗಳು ಗೌರವ ಸಲ್ಲಿಸಿದಂತಾಗುತ್ತದೆ
ಎಂದು ಸಮಾಜ ಸೇವಕ ಎಂ ಎಂ ರಾಜಿ ಭಾಯಿ ರಾಜ್ಯ ಹಾಗು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಿತ್ತೂರಿಗೆ ಆಗಮಿಸುವ ರಾಜಕಾರಣಿಗಳು ರಾಣಿ ಚೆನ್ನಮ್ಮಾಜ್ಜಿಯ ಪುತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ ಆದರೆ ಅವರು ಇದುವರೆಗೂ ಸಮಗ್ರ ಕಿತ್ತೂರಿನ ಪ್ರದೇಶದ ಅಭಿವೃದ್ಧಿಗೆ ತೆಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವದಿಲ್ಲ ಇಲ್ಲಿನ ತ್ಯಾಗ ಬಲಿದಾನ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ.
ಕಾರಣ ಪ್ರಸ್ತುತ ಎರಡನೇ ಬಾರಿಗೆ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಹಾಗೂ ಬೆಳಗಾವಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ
ಈಗಿರುವ ಕಾರವಾರ್ , ಧಾರವಾಡ, ಬೆಳಗಾವಿ ಲೋಕ್ ಸಭಾ ಕ್ಷೇತ್ರ ಗಳ ಪ್ರದೇಶವನ್ನು ವಿಭಜಿಸಿ ನೂತನವಾಗಿ ಕಿತ್ತೂರು ಲೋಕ್ ಸಭಾ ಕ್ಷೇತ್ರವನು ರಚನೆ ಮಾಡಬೇಕು ಹಾಗೂ ಕಿತ್ತೂರನ್ನು ಜಿಲ್ಲಾ ಕೇಂದ್ರವನಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕೆಂದು ಎಂ ಎಂ ರಾಜಿ ಭಾಯಿ ಆಗ್ರಹಿಸಿದಾರೆ.
ಇದೆ ಸಂದರ್ಭದಲ್ಲಿ ಮಾತನಾಡಿ ಈ ಕುರಿತು ಸಮಾನಮನಸ್ಕ ಪ್ರಗತಿಪರ ಸಂಘಟನೆಗಳನ್ನು ಸೇರಿಸಿ ಜನಾ ಆಂದೋಲನ ರೂಪಿಸಿ ಹೋರಾಟ ನಡೆಸುವುದಾಗಿ ಗಡಿ ನಾಡು ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಭಂಗಿ ಎಚ್ಚರಿಸಿದಾರೆ.
ಈ ಕುರಿತು ಕಿತ್ತೂರಿನ ಜನ್ ಪ್ರಿಯ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಅವರು ಪ್ರಸ್ತುತ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಪ್ರಸ್ತಾವನೆಯನ್ನು ಸಲ್ಲಿಸ್ಬೇಕೆಂದು ಶಾಸಕರಲ್ಲಿ ಈ ಮೂಲಕ ಎಂ ಎಂ ರಾಜಿ ಭಾಯಿ ಮನವಿ ಮಾಡಿಕೊಂಡಿರುತ್ತಾರೆ
ಈ ಸಂದರ್ಭದಲ್ಲಿ ಬಾಬು ಮೂಲಿಮನಿ, ಜ್ಯೋತಿಬಾ ಬೆಂಡಿಗೇರಿ,ಭೀಮಪ್ಪ ಬೋಕಡೆಕರ್, ಬಸವರಾಜ್ ತುರಮುರಿ, ಮಹಾವೀರ್ ಗೌಡ್ರ, ಶಬ್ಬೀರ ಸಾಹೇಬ ಖಾನ್ , ಆರಿಫ್ ಬೆಳವಡಿ,ಮುಂತಾದವರು ಉಪಸ್ಥಿತರಿದ್ದರು.
ವರದಿ: ಜ್ಯೋತಿಬಾ ಬೆಂಡಿಗೇರಿ