ಕಾಂಗ್ರೆಸ್ ಯೋಜನೆ ಫಲಾನುಭವಿಗಳಾಗಲು ಹಣ ನೀಡಬೇಕಿಲ್ಲ: ಕಾಂಗ್ರೆಸ್ ಮುಖಂಡೆ ಪ್ರಭಾವತಿ ಮಾಸ್ತಮರಡಿ

ಬೆಳಗಾವಿ: ಕಾಂಗ್ರೆಸ್ ಯೋಜನೆ ಅರ್ಜಿ ಹಾಕಲು ಯಾವುದೇ ಹಣ ನೀಡಬೇಕಾಗಿಲ್ಲ. ಸರ್ಕಾರದ ಯೋಜನೆಗಳು ಸಂಪೂರ್ಣವಾಗಿ ಉಚಿತವಾಗಿದ್ದು ಯೋಜನೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡೆ ಪ್ರಭಾವತಿ ಮಾಸ್ತಮರಡಿ ಹೇಳಿದರು.
ನಗರದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದಅವರು, ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಯೋಜನೆಗಳಲ್ಲಿ ಈಗಾಗಲೇ ನಾರಿ ಶಕ್ತಿ ಯೋಜನೆಯನ್ನು ಲೋಕಾರ್ಪಣಿ ಮಾಡಲಾಗಿದೆ. ಸಾರ್ವಜನಿಕರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕವಾಗಿ ಯಾವುದೆ ಹಣ ಪಡೆಯದೆ ಮಾಡಿಕೊಡಲಾಗುತ್ತದೆ. ಯಾರಾದರು ಯೋಜನೆಗಳನ್ನು ಮಾಡಿಕೊಡುತ್ತೇವೆ ಎಂದು ಹಣ ಕೇಳಿದರೆ ಜನರು ದೂರು ನೀಡಬಹುದು ಎಂದು ಸ್ಪಷ್ಟಿಕರಣ ನೀಡಿದರು.
ಯಾವ ಯೋಜನೆಗಳಿಗೂ ಸರ್ಕಾರ ಯಾವುದೇ ಏಜೆಂಟರುಗಳ ಮೂಲಕ ಹಣ ಪಡೆಯುತ್ತಿಲ್ಲ. ಈ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ತಿಳಿಯದೆ ಹೋದರೆ ಕಾಂಗ್ರೆಸ್ ಕಚೇರಿಗೆ ಬಂದು ಮಾಹಿತಿ ತಿಳಿಯಬಹುದು. ಅಲ್ಲದೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ಹಂಚಿಕೊಂಡರು.