ಗೃಹ ಜ್ಯೋತಿ ಅರ್ಜಿ ತುಂಬಲು ಸರ್ವರ್ ಕಣ್ಣಾಮುಚ್ಚಾಲೆ ಆಟ: ಸಾರ್ವಜನಿಕರು ಹೈರಾಣು

ಬೆಳಗಾವಿ ರಾಜ್ಯಾದ್ಯಂತ ನಿನ್ನೆಯಿಂದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅರ್ಜಿ ಸ್ವೀಕಾರ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಭರದಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ.
ಉಚಿತ ವಿದ್ಯುತ್ ಪಡೆಯಲು ಸರಕಾರ ಹಾಕಿರುವ ಷರತ್ತುಗಳನ್ನು ಹಿಡಿದು ಸಾರ್ವಜನಿಕರು ದಾಖಲಾತಿ ಗಳನ್ನು ಹಿಡಿದು ಕರ್ನಾಟಕ ಒನ್ ನಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ನಿನ್ನೆಯಿಂದ ಒಂದು ತಿಂಗಳುಗಳ ಕಾಲ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಇದೆ. ಕೇವಲ ಕರ್ನಾಟಕ ಒನ್ ನಲ್ಲಿ ಮಾತ್ರವಲ್ಲದೆ, ಆಯಾ ನೆಟ್ ಸೆಂಟರ್, ಮೊಬೈಲ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಸರ್ವರ್ ಪ್ರಾಬ್ಲಂನಿಂದ ಜನರು ಕರ್ನಾಟಕ ಒನ್ ನಲ್ಲಿ ದಾಖಲಾತಿ ಹಿಡಿದು ನಿಂತಿದ್ದಾರೆ.
ಅಶೋಕ ನಗರದ ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ತುಂಬಲು ಮುಗಿಬಿದ್ದ ಜನ. ಬೆಳಿಗ್ಗೆ 10 ಗಂಟೆಯಿಂದ ಕ್ಯೂನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ.
ದಾಖಲಾತಿಗಾಗಿ ಆಧಾರ ಕಾರ್ಡ್, ವಿದ್ಯುತ್ ಬಿಲ್ ರಸೀದಿ ಕೈಯಲ್ಲಿ ಹಿಡಿದ ಜನ. ಆಗಾಗ ಸರ್ವರ್ ಬ್ಯುಸಿಯಾಗುವ ಕಾರಣ ಹೆಚ್ಚಾಗುತ್ತಿರುವ ಜನದಟ್ಟಣೆ ಹಿನ್ನೆಲೆಯಲ್ಲಿ ಕರ್ನಾಟಕ ಒನ್ ಜಿಲ್ಲಾ ಸಂಯೋಜಕ ನಂಜುಂಡೇಶ್ವರ ಮಾಹಿತಿ ನೀಡಿದ್ದಾರೆ.
ಅರ್ಜಿ ಹಾಕಲು ಇಂದಿನಿಂದ ಜನ ದಟ್ಟಣೆ ಹೆಚ್ಚಾಗುತ್ತಿದೆ.
ದಾಖಲಾತಿಗಾಗಿ ಆಧಾರ್, ವಿದ್ಯುತ್ ಬಿಲ್ ರಸೀದಿ ಬಳಕೆ. ಅರ್ಜಿ ಶುಲ್ಕ 20 ರೂ. ಪಡೆದು ಅರ್ಜಿ ಸಲ್ಲಿಕೆ ಮಾಡುತ್ತಿದ್ದೇವೆ.
ಸದ್ಯಕ್ಕೆ ಬಾಡಿಗೆದಾರಿಗೆ ಕರೆಂಟ್ ಬಿಲ್ ಪಾವತಿ ಮತ್ತು ಆಧಾರ್ ಕಾರ್ಡ್ ಅಷ್ಟೇ ಇದೆ. ಮುಂದಿನ ದಿನಗಳಲ್ಲಿ ಬಡಿಗೆದಾರರ ಅಗ್ರಿಮೆಂಟ್ ದಾಖಲೆ ಪರಿಶೀಲಿಸಬಹುದು ಎಂದರು.