Vande Bharat Express: ಐದು ಹೊಸ ವಂದೇ ಭಾರತ್ ರೈಲುಗಳು ಏಕಕಾಲದಲ್ಲಿ ಪ್ರಾರಂಭ- ಯಾವ ಮಾರ್ಗಗಳಲ್ಲಿ ತಿಳಿಯಿರಿ

ನವದೆಹಲಿ, ಜೂನ್ 21: ದೇಶದಲ್ಲಿ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಏಕಕಾಲದಲ್ಲಿ ಪ್ರಾರಂಭವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಈ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆ ಕಾರ್ಯಕ್ರಮವನ್ನು ಜೂನ್ 26 ರಂದು ಆಯೋಜಿಸಲಾಗಿದೆ.
ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ವಂದೇ ಭಾರತ್ ಮಾರ್ಗಗಳ ಬಗ್ಗೆ ತಿಳಿಯಿರಿ
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮುಂಬೈನಿಂದ ಗೋವಾ, ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಪಾಟ್ನಾದಿಂದ ರಾಂಚಿ, ಭೋಪಾಲ್‌ನಿಂದ ಇಂದೋರ್ ಮತ್ತು ಭೋಪಾಲ್‌ನಿಂದ ಜಬಲ್‌ಪುರ ಮಾರ್ಗಗಳಲ್ಲಿ ಚಲಿಸುತ್ತದೆ. ಮೊದಲ ಬಾರಿಗೆ, ಭಾರತೀಯ ರೈಲ್ವೆ ಏಕಕಾಲದಲ್ಲಿ 5 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಿದೆ. ಈ ಐದು ರೈಲುಗಳ ಸೇರ್ಪಡೆಯೊಂದಿಗೆ ದೇಶದ ಒಟ್ಟು ರೈಲುಗಳ ಸಂಖ್ಯೆ 23 ಕ್ಕೆ ಏರಲಿದೆ.
ಮುಂಬೈ ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವನ್ನು ಮುಂದೂಡಲಾಗಿದೆ. ಇದು ಐದು ಮಾರ್ಗಗಳಲ್ಲಿ ಒಂದಾಗಿದೆ. ಇದರ ಕಾರ್ಯಾಚರಣೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರೈಲು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು- ಹುಬ್ಬಳ್ಳಿ ಮತ್ತು ಧಾರವಾಡ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲಿ ಓಡುತ್ತಿರುವ ಎರಡನೇ ಮಾರ್ಗವಾಗಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು, ಈ ರೈಲನ್ನು ಎರಡು ನಗರಗಳ ನಡುವೆ ಸಂಪರ್ಕಿಸಲಾಗುತ್ತಿದೆ. ಕರ್ನಾಟಕಕ್ಕೆ ಇದು ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು.
ಪಾಟ್ನಾದಿಂದ ರಾಂಚಿ ರೈಲುಗಳು
ಪಾಟ್ನಾದಿಂದ ರಾಂಚಿಗೆ ಸಂಪರ್ಕ ಕಲ್ಪಿಸಲು ಈ ಸೆಮಿ ಹೈಸ್ಪೀಡ್ ರೈಲು ಈ ಮಾರ್ಗದಲ್ಲಿ ಮೊದಲ ಬಾರಿಗೆ ಓಡಲಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.
ಭೋಪಾಲ್ ಇಂದೋರ್
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧ್ಯಪ್ರದೇಶದ ಎರಡು ಮಹಾನಗರಗಳಾದ ಭೋಪಾಲ್ ಮತ್ತು ಇಂದೋರ್ ಅನ್ನು ಸಂಪರ್ಕಿಸಲು ಪ್ರಾರಂಭಿಸುತ್ತಿದೆ. ಇದು ಸ್ಥಳೀಯ ಪ್ರದೇಶಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಭೋಪಾಲ್ ಮತ್ತು ಜಬಲ್ಪುರ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧ್ಯಪ್ರದೇಶದ ಇನ್ನೂ ಎರಡು ನಗರಗಳನ್ನು ಸಂಪರ್ಕಿಸಲು ಪ್ರಾರಂಭವಾಗಲಿವೆ. ಈ ರೈಲು ಪ್ರಯಾಣಿಕರ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವ್ಯಾಪಾರವನ್ನು ಉತ್ತೇಜಿಸುತ್ತದೆ.