ಗೃಹಜ್ಯೋತಿಗೆ ಒಂದು ವಾರದಲ್ಲೇ 51 ಲಕ್ಷಕ್ಕೂ ಅಧಿಕ ಜನರಿಂದ ನೋಂದಣಿ: ಕಡೇ ದಿನಾಂಕ ಯಾವತ್ತು?

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೆ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಆರಂಭಗೊಳ್ಳುವ ಮೊದಲೇ ಭರ್ಜರಿ ಸ್ಪಂದನೆ ಸಿಕ್ಕಿದೆ. ಅರ್ಥಾತ್, ಈ ಯೋಜನೆ ಸಲುವಾಗಿ ನೋಂದಣಿ ಆರಂಭವಾಗಿದ್ದು, ಅದು ಈಗ ಅರ್ಧ ಕೋಟಿಗೂ ಅಧಿಕವಾಗಿದೆ.
#ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಾಯಿಸಲು, ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು.#gruhajyothi #gruhajyothischeme #register #nolastdate #freepower #electricity #freeelectricity @CMofKarnataka @EnergyDeptGoK @siddaramaiah @thekjgeorge @mdbescom pic.twitter.com/Cbyly8qXUo
— Namma BESCOM (ನಮ್ಮ ಬೆಸ್ಕಾಂ) (@NammaBESCOM) June 21, 2023
ಜುಲೈ ತಿಂಗಳ ಬಿಲ್ಗೆ ಅನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಅಂದರೆ, ಆಗಸ್ಟ್ನಲ್ಲಿ ಬರುವ ಬಿಲ್ನಲ್ಲಿ 200 ಯುನಿಟ್ವರೆಗಿನ ವಿದ್ಯುತ್ಗೆ ಶೂನ್ಯ ಬಿಲ್ ಇರಲಿದೆ. ಈ ಯೋಜನೆಯ ಫಲಾನುಭವಿ ಆಗಲು ನೋಂದಣಿ ಅಗತ್ಯವಾಗಿದ್ದು, ಜೂ. 18ರಂದು ಪ್ರಕ್ರಿಯೆ ಆರಂಭವಾಗಿದೆ.
3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!
ಇದೀಗ ಒಂದು ವಾರ ಕಳೆಯುವಷ್ಟರಲ್ಲಿ 51 ಲಕ್ಷಕ್ಕೂ ಅಧಿಕ ಮಂದಿ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಮನೆ ಮಾಲೀಕರು/ಬಾಡಿಗೆದಾರರು ಸೇರಿ ಎಲ್ಲರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕಾಗಿ ಆಧಾರ್ ನಂಬರ್ ಹಾಗೂ ವಿದ್ಯುತ್ ಬಿಲ್ನಲ್ಲಿರುವ ಖಾತೆ ನಂಬರ್ ನಮೂದಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.
ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಆದರೆ ಆರಂಭದಿಂದಲೇ ಯೋಜನೆಯ ಪ್ರಯೋಜನ ಪಡೆಯಲು ಬಳಕೆದಾರರು ಆದಷ್ಟೂ ಬೇಗ ನೋಂದಣಿ ಮಾಡಿಸಿಕೊಳ್ಳುವುದು ಉತ್ತಮ.
ಹ್ಯಾಕರ್ಗಳು ಸೇವಾ ಸಿಂಧು ಹೆಸರಿನಲ್ಲಿ ನಕಲಿ ಆಯಪ್ಗಳನ್ನು ಸೃಷ್ಟಿಸಿದ್ದು, ನೋಂದಣಿ ವೇಳೆ ಎಚ್ಚರಿಕೆ ವಹಿಸಿ. ಸುರಕ್ಷಿತ ನೋಂದಣಿಗಾಗಿ ಅಧಿಕೃತ ಲಿಂಕ್ ಬಳಸಿ.
ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ..
https://sevasindhugs.karnataka.gov.in