Belagavi News
ಬಸ್ ಗಳಲ್ಲಿ ಪ್ರಯಾಣಿಕರ ಒತ್ತಡ; ಕಳ್ಳತನದಿಂದ ಪಾರಾಗಲು ಪೊಲೀಸರಿಂದ ಮುನ್ನೆಚ್ಚರಿಕೆ ಜಾಗೃತಿ

ಬೆಳಗಾವಿ: ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರು ಜಾಸ್ತಿಯಾಗಿರುವುದರಿಂದ ಕಳ್ಳತನ ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಸ್ ಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರಯಾಣಿಕರು ತುಂಬಿರುವಾಗ ಚಿನ್ನ ಬೆಳ್ಳಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಂಡು ಜಾಗೃತರಾಗಿರುವಂತೆ ಮತ್ತು ತುರ್ತು ಸಹಾಯವಾಣಿ 112 ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪ್ರಯಾಣಿಸುವ ಸಂದರ್ಭದಲ್ಲಿ ಸಾಲಾಗಿ ಬಸ್ ಹತ್ತಬೇಕು, ನಿರ್ವಾಹಕರ ಜತೆ ಸಹಕರಿಸಬೇಕು, ಬಸ್ ತುಂಬಿದರೆ ಇನ್ನೊಂದು ಬಸ್ ಗಾಗಿ ಕಾಯುಬೇಕು. ವಿದ್ಯಾರ್ಥಿಗಳು ಮತ್ತು ವಯೋವೃದ್ಧರಿಗೆ ಬಸ್ ನಲ್ಲಿ ಅವಕಾಶ ಕೊಡುವ ಕುರಿತು, ಸುಖಮಯವಾಗಿ ಪ್ರಯಾಣಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು.
ಬೆಳಗಾವಿ ಪೊಲೀಸ್ ಕಮಿಷನರೇಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.