National
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ . ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್ ಬೆದರಿಕೆಯೊಂದಿದ್ದು, ಕೊಂದು ಹಾಕ್ತೇನೆ ಎಂದು ಹೇಳಿದ್ದಾನೆ.
ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬೆದರಿಕೆ ಹಾಕಿದ್ದಾನೆ.
ಗೋಲ್ಡಿ ಬ್ರಾರ್ ಕಳೆದ ವರ್ಷ ಮೇ ತಿಂಗಳಲ್ಲಿ ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಾಗುತ್ತಿದೆ.
ನಾವು ಅವನನ್ನು ಖಂಡಿತವಾಗಿ ಕೊಲ್ಲುತ್ತೇವೆ. ಭಾಯಿ ಸಾಹೇಬ್ (ಲಾರೆನ್ಸ್) ಅವರು ಕ್ಷಮೆಯಾಚಿಸುವುದಿಲ್ಲ. ಬಾಬಾ ಕರುಣೆ ತೋರಿದಾಗ ಮಾತ್ರ ಕರುಣೆ ತೋರುತ್ತಾರೆ ಎಂದು ಲಾರೆನ್ಸ್ ಬಿಷ್ಣೋಯ್ ಅವರ ಸಂದರ್ಶನವನ್ನು ಉಲ್ಲೇಖಿಸಿ ಬ್ರಾರ್ ಹೇಳಿದ್ದಾನೆ.