Karnataka NewsScience
ಮುಂಬರುವ ‘ಲೋಕಸಭಾ ಚುನಾವಣಾ ಫಲಿತಾಂಶ’ದ ಕುರಿತು ಕೋಡಿಮಠದ ಶ್ರೀಗಳಿಂದ ಅಚ್ಚರಿಯ ಹೇಳಿಕೆ..!

ನಿಖರ ಭವಿಷ್ಯಕ್ಕೆ ಪ್ರಸಿದ್ಧರಾಗಿರುವ ಕೋಡಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂಬರುವ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶನಿವಾರದಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಇನ್ನೂ ಬಹಳ ದೂರವಿದೆ.
ಒಂದೊಮ್ಮೆ ಈ ಚುನಾವಣೆ ವಿಚಾರವಾಗಿ ನಾನು ಸತ್ಯ ಹೇಳಿದರೆ, ಮಠ ಸೇರುವುದಿಲ್ಲ. ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಪ್ರಿಯ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದ ಅವರು, ಈಗಲೇ ಸತ್ಯ ಹೇಳಿದರೆ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸ್ವಾಮೀಜಿಯವರ ಈ ಹೇಳಿಕೆ ಈಗ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ.