20 ಲಕ್ಷ ದಾಟಿದ ಗೃಹ ಜ್ಯೋತಿ ನೋಂದಣಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗೆ ಬಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಲ್ಲಿಯೂ ಕೂಡ ಜನರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಾಕಷ್ಟು ಸರ್ವರ್ ಸಮಸ್ಯೆಗಳ ನಡುವೆಯೂ ಹೆಸ್ಕಾಂ ಇಲಾಖೆಯಲ್ಲಿ 20 ಲಕ್ಷ ಗ್ರಾಹಕರು ನೋಂದಣಿ ಮಾಡಿಸಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿಯೇ 20 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ. ಈಗಾಗಲೇ ಕರ್ನಾಟಕ ಒನ್, ಹುಬ್ಬಳ್ಳಿ ಧಾರವಾಡ ಒನ್ ಮೂಲಕ ಹಾಗೂ ಆನ್ಲೈನ್ ಸೆಂಟರ್ನಲ್ಲಿ ಸರತಿ ಸಾಲಿನಲ್ಲಿ ನಿಂತು 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ನೋಂದಣಿ ಮಾಡಿಸಿದ್ದಾರೆ.
20 ಲಕ್ಷ ದಾಟಿದ ಗೃಹ ಜ್ಯೋತಿ ನೋಂದಣಿಇನ್ನು, 200 ಯುನಿಟ್ ವಿದ್ಯುತ್ ಉಚಿತ ಘೋಷಣೆ ಬೆನ್ನಲ್ಲೇ ಇಂತಹದೊಂದು ನೋಂದಣಿ ಕಾರ್ಯಕ್ಕೆ ಸರ್ಕಾರ ಮುನ್ನುಡಿ ಬರೆದಿದ್ದು, ಜನಸ್ಪಂದನೆ ಕೂಡ ಅಧಿಕವಾಗಿದೆ. ಈಗಾಗಲೇ ಉಚಿತ ಪ್ರಯಾಣದ ಲಾಭ ಪಡೆದಿರುವ ಮಹಿಳೆಯರು ಸರ್ಕಾರದ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈಗ ಗೃಹ ಜ್ಯೋತಿ ಯೋಜನೆ ಲಾಭ ಪಡೆಯಲು ಸಾರ್ವಜನಿಕರು ಮುಂದಾಗಿರುವುದು ವಿಶೇಷವಾಗಿದೆ.
ಶಕ್ತಿ ಯೋಜನೆ : ಜುಲೈ 3ರಂದು ಅತಿ ಹೆಚ್ಚು 15.92 ಲಕ್ಷ ಮಹಿಳೆಯರು ಪ್ರಯಾಣ..”ಶಕ್ತಿ” ಯೋಜನೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜುಲೈ 3ರಂದು ಅತಿ ಹೆಚ್ಚು 15.92 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಟಿಕೆಟ್ ಮೌಲ್ಯ ರೂ.4.36 ಕೋಟಿ ಗಳಾಗಿದೆ. ಇದುವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ 2.99 ಕೋಟಿಗಳಾಗಿದ್ದು, ಪ್ರಯಾಣದ ಟಿಕೆಟ್ ಮೌಲ್ಯ ರೂ. 77.07 ಕೋಟಿಗಳಾಗಿದೆ.