Salaar Prabhas Remuneration: ‘ಸಲಾರ್’ ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು? ಇತರ ನಟರ ಸಂಭಾವನೆ ಎಷ್ಟಿರಬಹುದು?

‘ಸಲಾರ್’ ಟೀಸರ್ ಅಂದುಕೊಂಡಂತೆ ಇಂದು ಮುಂಜಾನೆ 5.12ಕ್ಕೆ ಜಗತ್ತಿನಾದ್ಯಂತ ಭಾರಿ ಸದ್ದು, ಗದ್ದಲದ ಇಲ್ಲದೆ ರಿಲೀಸ್ ಆಗಿದೆ. ಕೋಟ್ಯಂತರ ಫ್ಯಾನ್ಸ್ ಉಸಿರು ಬಿಗಿಹಿಡಿದು ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಟೀಸರ್ ಬಿಡುಗಡೆ ಆಗಿ ಕೇವಲ 11 ಗಂಟೆ ಕಳೆಯುವ ಒಳಗಾಗಿ ಭರ್ಜರಿ 30 ಮಿಲಿಯನ್ ವೀವ್ಸ್ ಹಾಗೂ 12 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿದೆ.
ಹಾಗಾದ್ರೆ ಈ ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಭಾಸ್ ಅಂದ್ರೆ ಮಾಸ್, ಪ್ರಭಾಸ್ ಅಂದ್ರೆ ಕ್ಲಾಸ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ನಟ ಪ್ರಭಾಸ್ ಹೊಂದಿಕೊಳ್ಳುತ್ತಾರೆ. ಆದರೆ ಏಕೋ ಬಾಹುಬಲಿ ಬಳಿಕ ಸಾಲು ಸಾಲು ಸೋಲು ನಟ ಪ್ರಭಾಸ್ ಬೆನ್ನುಹತ್ತಿದ್ದವು. ಅದರಲ್ಲೂ ‘ರಾಧೆ ಶ್ಯಾಮ್’ & ‘ಆದಿಪುರುಷ್’ ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿವೆ. ಈ ಕಾರಣಕ್ಕೆ ಸಲಾರ್ ಸಿನಿಮಾ ಮೇಲೆ ಕೋಟ್ಯಂತರ ಅಭಿಮಾನಿಗಳು ನಂಬಿಕೆ ಇಟ್ಟು ಕಾಯುತ್ತಿದ್ದರು. ಇದೀಗ ಸಲಾರ್ ಟೀಸರ್ ರಿಲೀಸ್ ಆಗಿ, ಅಭಿಮಾನಿಗಳ ನಿರೀಕ್ಷೆ ಮೀರಿಸುವ ಮುನ್ಸೂಚನೆ ಕೊಟ್ಟಿದೆ. ಅದರ ಜೊತೆಗೆ ಪ್ರಭಾಸ್ ಈ ಸಿನಿಮಾಗೆ ಪಡೆದ ಸಂಭಾವನೆ ಅಥವಾ ಸ್ಯಾಲರಿ ಎಷ್ಟು? ಎಂಬ ಕುತೂಹಲ ಕಾಡುತ್ತಿದೆ. ಆ ಬಗ್ಗೆ ಮಾಹಿತಿಗೆ ಮುಂದೆ ತಿಳಿಯೋಣ ಬನ್ನಿ (Salaar Prabhas Salary).
‘ಸಲಾರ್’ಗೆ ಪ್ರಭಾಸ್ ಪಡೆದಿದ್ದು ಎಷ್ಟು?
ಎಷ್ಟೇ ಸೋಲು ಕಾಣಲಿ ಎಷ್ಟೇ ಅಡ್ಡಿಗಳು ಎದುರಾಗಲಿ. ಪ್ರಭಾಸ್‌ಗೆ ಇರುವ ಡಿಮ್ಯಾಂಡ್ ಮಾತ್ರ ಕಡಿಮೆ ಆಗಲ್ಲ. ಇದಕ್ಕೆ ಸಾಕ್ಷಿ ‘ಸಲಾರ್’ ಸಿನಿಮಾ ಎನ್ನಬಹುದು. ಏಕೆಂದರೆ ಈ ಸಿನಿಮಾಗೆ ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 100 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಅರೆರೆ ಇದರಲ್ಲಿ ಸ್ಪೆಷಲ್ ಏನು ಅಂದ್ರಾ? ಇದನ್ನೂ ಮೀರಿ ಇನ್ನಷ್ಟು ದುಡ್ಡು ಸಂಭಾವನೆ ರೂಪದಲ್ಲಿ ಪ್ರಭಾಸ್ ಕೈಸೇರುತ್ತದೆ. ಆ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
₹100 ಕೋಟಿ + 10 ಪರ್ಸೆಂಟ್ ಶೇರ್?
ಹೌದು ಈಗಾಗಲೇ ‘ಆದಿಪುರುಷ್’ ಚಿತ್ರಕ್ಕೂ ಪ್ರಭಾಸ್ ₹100 ಕೋಟಿ ಪಡೆದಿದ್ದಾರೆ ಎಂಬ ಮಾತು ಎಲ್ಲೆಲ್ಲೂ ಹರಿದಾಡಿತ್ತು. ಆದರೆ ಹೊಸ ವಿಷಯ ಏನಪ್ಪಾ ಅಂದ್ರೆ, ‘ಸಲಾರ್’ ಸಿನಿಮಾಗೆ ಭರ್ಜರಿ ₹100 ಕೋಟಿ ರೂಪಾಯಿ ಪಡೆಯುವ ಜೊತೆಗೆ ಈ ಚಿತ್ರದ ಲಾಭದಲ್ಲಿ 10 ಪರ್ಸೆಂಟ್‌ನಷ್ಟು ಲಾಭವನ್ನೂ ಪ್ರಭಾಸ್ ಪಡೆಯಲಿದ್ದಾರಂತೆ. ಇದು ಪ್ರಭಾಸ್ ಅವರ ಸಂಭಾವನೆ ಲೆಕ್ಕಾಚಾರವಾಗಿದ್ದರೆ, ಇನ್ನುಳಿದ ಸ್ಟಾರ್‌ಗಳಿಗೂ ಭರ್ಜರಿ ಸಂಭಾವನೆ ಕೊಟ್ಟಿದೆ ಹೊಂಬಾಳೆ ಸಂಸ್ಥೆ. ಹಾಗಾದ್ರೆ ಮಿಕ್ಕ ಸ್ಟಾರ್‌ಗಳಿಗೆ ಸಲಾರ್ ಚಿತ್ರ ಎಷ್ಟು ಕೊಟ್ಟಿದೆ? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
‘ಸಲಾರ್’ ಸಿನಿಮಾಗೆ ಹಣದ ಹೊಳೆ!
ಹೌದು, ಕೆಜಿಎಫ್-2 ಬಳಿಕ ಪ್ರಶಾಂತ್ ನೀಲ್ ಕೈಗೊಂಡಿರುವ ಬಿಗ್ ಪ್ರಾಜೆಕ್ಟ್ ಇದಾಗಿದೆ. ಹೀಗಾಗಿಯೇ ಇಡೀ ಜಗತ್ತು ‘ಸಲಾರ್’ ಸಿನಿಮಾಗಾಗಿ ಕಾಯುತ್ತಿದೆ. ಅದರಲ್ಲೂ ಪ್ರಭಾಸ್ ಜೊತೆ ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಹಾಗಾದರೆ ‘ಸಲಾರ್’ ಸಿನಿಮಾಗೆ ಶೃತಿ ಹಾಸನ್ ಪಡೆದ ಸಂಭಾವನೆ ಎಷ್ಟು? ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅಷ್ಟಕ್ಕೂ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆಯನ್ನ ಶೃತಿ ಹಾಸನ್ ಈ ಸಿನಿಮಾಗಾಗಿ ಪಡೆದಿದ್ದಾರೆ ಎನ್ನಲಾಗಿದೆ. ‘ಸಲಾರ್’ ಸಿನಿಮಾ ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದೆ.
ಈಗಾಗಲೇ ಕೋಟಿ ಕೋಟಿ ವಸೂಲಿ?
ಅಷ್ಟಕ್ಕೂ ‘ಸಲಾರ್’ ರಿಲೀಸ್ ಆಗುವುದಕ್ಕೆ ಮೊದಲೇ ಕೋಟಿ ಕೋಟಿ ಬಿಸಿನೆಸ್ ಮಾಡಿರುವ ಮಾತು ಓಡಾಡುತ್ತಿದೆ. ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್, ಕನ್ನಡ ನಟ ಪ್ರಮೋದ್ ಮತ್ತು ಮಧು ಗುರುಸ್ವಾಮಿ ನಟಿಸಿದ್ದಾರೆ. ದೊಡ್ಡ ತಾರಾಬಳಗವೇ ‘ಸಲಾರ್’ ಸಿನಿಮಾ ತಂಡಕ್ಕೆ ಸಾಥ್ ನೀಡಿದೆ. ಈ ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ ಸಲಾರ್ ಸಿನಿಮಾ ನೋಡಲು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಈಗ ರಿಲೀಸ್ ಆಗಿರುವ ಸಲಾರ್ ಟೀಸರ್ ಫ್ಯಾನ್ಸ್ ಕುತೂಹಲಕ್ಕೆ ನೀರೆರದಿದೆ. ಹೀಗಾಗಿಯೇ ಜನ ಉಸಿರು ಬಿಗಿಹಿಡಿದು ಸಿನಿಮಾ ನೋಡಲು ಕಾಯುತ್ತಿದ್ದಾರೆ. 2023 ಸೆಪ್ಟೆಂಬರ್ 28ರಂದು ಸಲಾರ್ ಜಗತ್ತಿನಾದ್ಯಂತಅದ್ಧೂರಿಯಾಗಿ ರಿಲೀಸ್ ಆಗಲಿದೆ.
ಡೈನೋಸಾರ್ ಕಥೆ ಹೇಳ್ತಿದ್ದಾರೆ ನೀಲ್!
ಅಂದಹಾಗೆ ಪ್ರಶಾಂತ್ ನೀಲ್ ಈಗ ಹೇಳುತ್ತಿರುವುದು ಅಂತಿಂಥ ಕಥೆ ಅಲ್ಲ, ಇದು ಕೇವಲ ಸಿನಿಮಾ ಅಂತಾ ಹೇಳೋಕೆ ಆಗೋದೆ ಇಲ್ಲ. ಯಾಕಂದ್ರೆ ಇದು ‘ಜುರಾಸಿಕ್ ಪಾರ್ಕ್’ ಕಥೆ ಆಗಿದೆ. ಹೌದು ಸಲಾರ್ ಟೀಸರ್‌ನಲ್ಲಿ ಪ್ರಭಾಸ್ ಎಷ್ಟು ವೈಲೆಂಟ್ ಅನ್ನೋದನ್ನ ತಿಳಿಸಲು ಪ್ರಶಾಂತ್ ನೀಲ್ ‘ಜುರಾಸಿಕ್ ಪಾರ್ಕ್’ ಉದಾಹರಣೆ ಕೊಟ್ಟಿದ್ದಾರೆ. ಸಿಂಹ, ಚಿರತೆ, ಹುಲಿ ಹಾಗೂ ಆನೆ ತುಂಬಾನೆ ಡೇಂಜರಸ್, ಆದ್ರೆ ‘ಜುರಾಸಿಕ್ ಪಾರ್ಕ್’ನಲ್ಲಿ ಅಲ್ಲ ಎಂದಿದ್ದಾರೆ. ಈ ಮೂಲಕ ಕಾಡಿನಲ್ಲಿ ಸಿಂಹ, ಚಿರತೆ, ಹುಲಿ ಹಾಗೂ ಆನೆಗಳು ಅಬ್ಬರಿಸಿದರೂ ಅವೆಲ್ಲ ಜುರಾಸಿಕ್ ಪಾರ್ಕ್‌ಗೆ ಬಂದ್ರೆ ಬೆಚ್ಚಿಬೀಳುವುದು ಪಕ್ಕಾ ಅಂತಾ ಅರ್ಥ. ಹೀಗಾಗಿಯೇ ನೀಲ್ ದೊಡ್ಡದಾಗಿ ಸದ್ದು ಮಾಡೋಕೆ ಬಂದಿರುವುದು ಗ್ಯಾರಂಟಿ ಆಗಿದೆ (Salaar Teaser).
ಡೈಲಾಗ್ ಕೇಳಿ ಫ್ಯಾನ್ಸ್ ಶಾಕ್!
ಸಲಾರ್ ಸಿನಿಮಾ ಟೀಸರ್ ಶುರುವಾಗೋದೆ ‘ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್..’ ಅನ್ನೋ ಡೈಲಾಗ್‌ನಿಂದ. ನಂತ್ರ ಮಾತು ಮುಂದುವರಿಸುವ ಟಿನ್ನು ಆನಂದ್, ‘ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ..’ ಎಂದು ಡೈಲಾಗ್ ಹೊಡೆಯುತ್ತಾರೆ. ಆ ಬಳಿಕ ಪ್ರಭಾಸ್ ಪೂರ್ತಿ ಮುಖ ತೋರಿಸದೆ ಮುಖದ ಅರ್ಧ ಭಾಗಕ್ಕೆ ಶೇಡ್ ಲೈಟ್ ಬಿಟ್ಟು ಕುತೂಹಲ ಉಳಿಸುವ ಮೂಲಕ ಟೀಸರ್ ಎಂಡ್ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಇಡೀ ಜಗತ್ತು ದಕ್ಷಿಣ ಭಾರತದ ಸಿನಿಮಾಗಳ ಕಡೆ ಮತ್ತೆ ತಿರುಗಿ ನೋಡುವಂತಾಗಿದೆ.
ಒಟ್ನಲ್ಲಿ ದಕ್ಷಿಣ ಭಾರತದಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸಜ್ಜಾಗಿದ್ದು, ಈ ಸಿನಿಮಾ ಮೂಲಕ ಮತ್ತೆ ಇಡೀ ಜಗತ್ತಿನ ಸಿನಿಮಾ ಕ್ಷೇತ್ರದಲ್ಲಿ ಭರ್ಜರಿ ಸೌಂಡ್ ಮಾಡಲು ಪ್ರಶಾಂತ್ ನೀಲ್ ಸಜ್ಜಾಗಿದ್ದಾರೆ. ಅಲ್ಲದೆ ‘ಸಲಾರ್’ ಸಿನಿಮಾ ‘ಕೆಜಿಎಫ್’ ರೀತಿಯಲ್ಲೇ ಹಾಲಿವುಡ್ ಫೀಲ್ ಕೊಡುತ್ತಿದೆ. ಹಾಗೇ ಕೆಜಿಎಫ್ & ಸಲಾರ್ ಸಿನಿಮಾಗಳು ಒಂದಾಗಲಿವೆ ಅಂದ್ರೆ ವೆರ್ಸ್ ಕ್ರಿಯೇಟ್ ಆಗೋದು ಪಕ್ಕಾ ಅನ್ನೋ ಮಾತು ಕೇಳಿಬಂದಿತ್ತು. ಈ ಮಾತಿಗೆ ಬಲ ನೀಡುವಂತೆ ಈಗ ‘ಸಲಾರ್’ ಟೀಸರ್ ಮೂಡಿಬಂದಿದೆ. ಅದಕ್ಕೆ ಪೂರಕವಾಗಿ ಕೆಲವು ಮಾಹಿತಿ ಟೀಸರ್‌ನಲ್ಲಿ ಕಂಡುಬಂದಿದೆ ಅಂತಿದ್ದಾರೆ ಫ್ಯಾನ್ಸ್. ಇಕ್ಕೆಲ್ಲಾ ಉತ್ತರ ಸೆಪ್ಟೆಂಬರ್ 28ರಂದು ಸಿಗಲಿದೆ.