ಜೈನ ಮುನಿ ಮೃತದೇಹ ಕೊಳವೆ ಬಾವಿಯಲ್ಲಿ ಪತ್ತೆ

ಬೆಳಗಾವಿ: ಕೊಲೆಯಾಗಿದ್ದ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲುಕಿನ ಖಟಕಬಾವಿ ಗದ್ದೆಯಲ್ಲಿರುವ ಕೊಳವೆ ಬಾವಿಯಲ್ಲಿ ಪತ್ತೆಯಾಗಿದೆ. ಜೈನಮುನಿಯ ಮೃತದೇಹವನ್ನು ಹಂತಕರು ಕತ್ತರಿಸಿ ಮೂಟೆಕಟ್ಟಿ ಕೊಳವೆಬಾವಿಗೆ ಎಸೆದಿದ್ದು, ಇದೀಗ 11 ಗಂಟೆ ಕಾರ್ಯಚರಣೆ ಬಳಿಕ ಮೃತದೇಹದ ಭಾಗಗಳಿರುವ ಮೂಟೆ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆಗೈದು ಮೃತದೇಹವನ್ನು ಖಟಕಬಾವಿ ಗದ್ದೆಯಲ್ಲಿ ಹಂತಕರು ಬಿಸಾಕಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಖಟಕಬಾವಿ ಗದ್ದೆ ಹಾಗೂ ಅಲ್ಲಿನ ಕೊಳವೆ ಬಾವಿಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ನಿರಂತರ 10 ಗಂಟೆಗಳ ಕಾರ್ಯಾಚರಣೆಯ ಬಳಿಕ ಕೊಳವೆಬಾವಿಯಲ್ಲಿ ಸ್ವಾಮೀಜಿ ಮೃತದೇಹವಿರುವ ಗಂಟು ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್ ಸಿಬ್ಬಂದಿ, ಎಫ್‌ಎಸ್‌ಎಲ್ ತಂಡದ ಸಹಾಯದೊಂದಿಗೆ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ
.
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಹತ್ಯೆ: ಹೀರೆಕುಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಇನ್ನು ಜೈನಮುನಿಗಳು ಆಶ್ರಮದಿಂದ ಕಾಣೆಯಾಗುತ್ತಿದ್ದಂತೆ ಸ್ಥಳೀಯರು ಸೇರಿದಂತೆ, ಆಶ್ರಮದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಿನ್ನೆ ಅವರ ಜೊತೆ ಸೇರಿ ಪ್ರಮುಖ ಆರೋಪಿ ಶೋಧಕಾರ್ಯದಲ್ಲಿ ಭಾಗವಹಿಸಿದ್ದ. ಪ್ರಮುಖ ಆರೋಪಿಯಾಗಿರುವ ಆತ ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ. ಏನಾದರೂ ಕಷ್ಟವಿದ್ದಾಗ ಸ್ವಾಮೀಜಿಯವರು ಹಣ ನೀಡುತ್ತಿದ್ದರು. ಆದರೆ ಇದೀಗ ಆತನೇ ಅವರ ಅಂತ್ಯಕ್ಕೆ ಕಾರಣವಾಗಿದ್ದಾನೆ.