Belagavi News
ಬೆಳಗಾವಿ ನಗರ ನೂತನ ಪೊಲೀಸ್ ಆಯುಕ್ತರಾಗಿ ಎಸ್.ಎನ್.ಸಿದ್ದರಾಮಪ್ಪ ನೇಮಕ

ಬೆಂಗಳೂರು: ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ನಾಲ್ಕು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ಎಸ್ ಎನ್ ಸಿದ್ದರಾಮಪ್ಪ ಅವರನ್ನು ನೇಮಿಸಲಾಗಿದೆ. ಇವರು ಬೆಂಗಳೂರಿನಲ್ಲಿರುವ ಪೊಲೀಸ್ ಮುಖ್ಯ ಕಚೇರಿಯಲ್ಲಿ ಐಜಿಪಿ ಆಗಿದ್ದರು.
ವರ್ತಿಕಾ ಕಟಿಯಾರ್-SCRB ಯಿಂದ SP ISDಗೆ ವರ್ಗಾವಣೆ, ಸಿರಿಗೌರಿ-ಎಸ್ಪಿ ISD ಯಿಂದ ಡಿಸಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ ಅನೂಪ್ ಶೆಟ್ಟಿ ಸಿಐಡಿಗೆ ವರ್ಗಾವಣೆ, ಅನೂಪ್ ಶೆಟ್ಟಿ ಅವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿದ್ದಾರೆ. ಕಳೆದ ತಿಂಗಳು ಅಲೋಕ್ ಕುಮಾರ್ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಮತ್ತು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು.