fbpx
Karnataka News

Gruha Jyothi: ಉಚಿತ ವಿದ್ಯುತ್ ಸ್ಕೀಮ್​​ಗೆ ಅರ್ಜಿ ಹಾಕಿದ್ದೀರಾ? ಹಾಗಾದ್ರೆ ಮಿಸ್ ಮಾಡದೇ ಈ ವರದಿ ಓದಿ, ಇಲ್ಲವಾದ್ರೆ ಆಗಸ್ಟ್ ನಲ್ಲಿ ಕರೆಂಟ್ ಬಿಲ್ ಕಟ್ಟಬೇಕು

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಿಮ್ಮ ಗೃಹ ಜ್ಯೋತಿ ಅರ್ಜಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿಕೊಡಲಾಗುತ್ತದೆ. ಒಂದು ವೇಳೆ ನಿಮ್ಮ ಅರ್ಜಿ Submit ಆಗಿರದೆ ಇದ್ದರೆ ಮತ್ತೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಗೃಹ ಜ್ಯೋತಿ ಅರ್ಜಿ :

ಗೃಹಜ್ಯೋತಿ ಯೋಜನೆಗೆ ನೀವು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ ಪ್ರತಿಯೊಬ್ಬ ಗ್ರಾಹಕರು ತಪ್ಪದೆ ತಮ್ಮ ತಮ್ಮ ಅರ್ಜಿಯ ಸ್ಥಿತಿಯನ್ನು (status) ಮಾಡಿಕೊಳ್ಳುವುದು ಕಡ್ಡಾಯ. ಜೂನ್ 18 ಮತ್ತು 19ರ ನಂತರ ಎರಡು ದಿನದಲ್ಲೂ ಶೇ.50ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳಲಾಗ್ತಿದೆ. ಜೂ 20, 21ರಂದು ಅರ್ಜಿ ಸಲ್ಲಿಕೆ ಮಾಡಿದ್ರೆ ಒಮ್ಮೆ ಸ್ಟೇಟಸ್ ಪರಿಶೀಲಿಸಿಕೊಳ್ಳಿ.

ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಮೊದಲ ಎರಡು ದಿನ 1.61 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಕೆ ಮಾಡಿದ್ದರು. ಆರಂಭಿಕ ಹಂತದಲ್ಲಿ ಅರ್ಜಿ ಸಲ್ಲಿಸಲು ಬಹಳಷ್ಟು ಸಮಯ ತೆಗೆದುಕೊಂಡಿತ್ತು.ಮೊದಲ ವಾರ ಸರ್ವರ್ ಡೌನ್ ಕೂಡ ಆಗಿತ್ತು. ಈ ವೇಳೆ ಹಾಕಿದ ಅರ್ಜಿಗಳು ಲಿಂಕ್ ಆಗದೇ ಉಳಿದಿರೋ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ತಾಂತ್ರಿಕ ಲೋಪದಿಂದಾಗಿ ಅರ್ಜಿ ಸ್ವೀಕಾರ ಆಗಿದರೂ ಟ್ರ್ಯಾಕಿಂಗ್​ನಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಎಂದು ಸಂದೇಶ ಬರುತ್ತಿದೆ.ಹಾಗಾಗಿ ಜೂನ್ 18, 19ರಂದು ಎರಡು ದಿನ ಸಲ್ಲಿಸಿದವರು ಒಮ್ಮೆ ಸ್ಟೇಟಸ್​ ಚೆಕ್​ ಮಾಡಿಕೊಳ್ಳೋದು ಉತ್ತಮ.

ಒಂದು ವೇಳೆ ನಿಮ್ಮ ಅರ್ಜಿಗಳು ಸ್ವೀಕೃತಗೊಳ್ಳದಿದ್ರೆ ಆಗಸ್ಟ್ ತಿಂಗಳಲ್ಲಿ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ. ಇಲ್ಲಿಯವರೆಗೆ 1.02 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲಿ ಒಟ್ಟು 2.14 ಕೋಟಿ ಫಲಾನುಭವಿಗಳಿದ್ದಾರೆ.

ಗೃಹ ಜ್ಯೋತಿ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳುವ ವಿಧಾನ :

ಹಂತ 1 : ಮೊದಲನೆಯದಾಗಿ ಈ ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://sevasindhugs.karnataka.gov.in/

Screenshot 2023 07 07 06 07 24 89 40deb401b9ffe8e1df2f1cc5ba480b12

ಹಂತ 2: ಮೇಲೆ ಕಾಣಿಸುತ್ತಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ” ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ” ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ

Screenshot 2023 07 07 06 07 32 81 40deb401b9ffe8e1df2f1cc5ba480b12

ಹಂತ 3: ನಂತರ ನಿಮ್ಮ ESCOM select ಮಾಡಿ,ನಿಮ್ಮ  ವಿದ್ಯುತ್ ಬಿಲ್ ನ Account ID type ಮಾಡಿ,Check status ಮೇಲೆ ಕ್ಲಿಕ್ ಮಾಡಿ.

 

Screenshot 2023 07 07 06 08 13 20 40deb401b9ffe8e1df2f1cc5ba480b12 1ಹಂತ 4: ಈ ಕೆಳಗಿನಂತೆ “Your application for Gruhajyothi scheme is received and sent to ESCOM for processing” ಎಂದು ತೋರಿಸಿದರೆ,ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿದೆ ಎಂದು ಅರ್ಥ

ಈ ರೀತಿಯಾಗಿ ತೋರಿಸದಿದ್ದರೆ, ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ

Screenshot 2023 07 07 06 06 55 28 40deb401b9ffe8e1df2f1cc5ba480b12

ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಹೇಗೆ?

ಗೃಹಜ್ಯೋತಿ ಯೋಜನೆ ಆನ್ಲೈನ್ ಅರ್ಜಿ:

ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು  ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಿರುವ https://sevasindhugs.karnataka.gov.in/ ವಿಳಾಸದಲ್ಲಿ ಲಾಗಿನ್ ಆಗಿ ನೋಂದಾಯಿಸಬೇಕು.

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : https://sevasindhugs.karnataka.gov.in/

ಎರಡನೇ ದಿನವಾದ ನಿನ್ನೆ1,61,958 ಜನರು ನೋಂದಣಿ ಮಾಡಿಕೊಂಡಿದ್ದಾರೆ ಯೋಜನೆ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ. 

ಹಂತ 1: ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

jj01

ಹಂತ 2: ಗೃಹಜೋತಿ ಆಯ್ಕೆ ಮಾಡಿಕೊಂಡು. ಮೇಲೆ ಕೊಟ್ಟಿರುವ ಡಿಕ್ಲರೇಷನ್ ಸರಿಯಾಗಿ ಓದಿ ಚೆಕ್ ಬಾಕ್ಸ್ ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚವನ್ನು ಸರಿಯಾಗಿ ನಮೂದಿಸಿ ಅಗ್ರಿ ಮೇಲೆ ಕ್ಲಿಕ್ ಮಾಡಿ

new1

 

 

ಹಂತ 3: ಎಲ್ಲಾ ಸರಿಯಾದ ಮಾಹಿತಿಯನ್ನ ನಮೂದಿಸಿ  ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

new2 1ಹಂತ 3: ಎಸ್ಕಾಂ ಹೆಸರು, ಖಾತೆ ಸಂಖ್ಯೆ, ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ, ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ, ಎಸ್ಕಾಂ ಹೆಸರು1, ಬಳಕೆದಾರರ ವಿಧ (ಇಲ್ಲಿ 3 ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು/ ಕುಟುಂಬದ ಸದಸ್ಯರು) ಎಂದಿದೆ, ಆಧಾರ್ ಸಂಖ್ಯೆ, ಅರ್ಜಿದಾರರ ಹೆಸರು, ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಅಗತ್ಯವಿರುವ ವಿವರಗಳನ್ನು ಇಲ್ಲಿ ನಮೂದಿಸಿ.

new3new4

ಹಂತ 4: ನಂತರ ಕೆಳಗಡೆ ಈ ರೀತಿಯಾಗಿ ನಿಮಗೆ ಸ್ವೀಕೃತಿ ಪತ್ರ ದೊರೆಯುತ್ತದೆ

new5

ನಿಮಗೆ ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕುವಾಗ ಏನಾದ್ರು ಸಮಸ್ಯೆ ಆದರೆ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು

ಸೂಚನೆ: ಇಂದು ಬಹಳ ಜನ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಹಾಗಾಗಿ ತಾಂತ್ರಿಕ ಕಾರಣಗಳಿಂದ ವೆಬ್ಸೈಟ್ ತೆರೆಯದಿದ್ದರೆ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ, ಅರ್ಜಿ ಸಲ್ಲಿಸಿ

ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಮಹಿಳೆಯರಿಗೂ ಶೇರ್ ಮಾಡಿ, ಧನ್ಯವಾದಗಳು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: