fbpx
EntertainmentFeature articlesNational

ಆಗಸ್ಟ್​​ನಲ್ಲಿ ಸ್ಮಾರ್ಟ್ ಫೋನ್​ಗಳ ಸುರಿಮಳೆ ಯಾವ ಕಂಪನಿ ಯಾವ ಮಾಡೆಲ್​ಗಳನ್ನು ಬಿಡುಗಡೆ ಮಾಡುತ್ತಿವೆ ಎಂಬುದರ ಬಗ್ಗೆ ತಿಳಿಯೋಣಾ ಬನ್ನಿ..

ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ಟಾಪ್ ಕಂಪನಿಗಳು ಸಾಲುಗಟ್ಟಿ ನಿಂತಿವೆ. ಆಗಸ್ಟ್​ನಲ್ಲಿ ಯಾವ ಕಂಪನಿ ಯಾವ ಮಾಡೆಲ್​ಗಳನ್ನು ಬಿಡುಗಡೆ ಮಾಡುತ್ತಿವೆ ಎಂಬುದರ ಬಗ್ಗೆ ತಿಳಿಯೋಣಾ ಬನ್ನಿ..

Oneplus ಓಪನ್: ಬಹುನಿರೀಕ್ಷಿತ OnePlus ಫೋಲ್ಡಿಂಗ್ ಫೋನ್ ಅಂತಿಮವಾಗಿ ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. OnePlus ಆಗಸ್ಟ್ 29 ರಂದು ಫೋಲ್ಡಿಂಗ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. OnePlus Open ಅಥವಾ OnePlus 11 Fold ಎಂಬ ಹೆಸರಿನಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಫೋನ್ ತೆರೆದಾಗ 7.8 ಇಂಚಿನ AMOLED ಡಿಸ್ಪ್ಲೇ ಮತ್ತು ಮುಚ್ಚಿದಾಗ 6.3 ಇಂಚಿನ ಡಿಸ್ಪ್ಲೇ ನೀಡುತ್ತಿದ್ದಾರೆ. Snapdragon 8 Gen 2 ಪ್ರೊಸೆಸರ್ ಅನ್ನು ಬಳಸಲಾಗಿದೆ. ಹಿಂಭಾಗದಲ್ಲಿ 64 MP ಟ್ರಿಪಲ್ ಕ್ಯಾಮರಾಗಳನ್ನು ನೀಡಲಾಗಿದೆ. 4,800 mAh ಬ್ಯಾಟರಿ ಇದೆ. ಇದರ ಬೆಲೆ ಸುಮಾರು ಲಕ್ಷ ರೂಪಾಯಿ ಇರುಬಹುದೆಂದು ಮಾರುಕಟ್ಟೆ ಮೂಲಗಳು ಅಂದಾಜಿಸುತ್ತವೆ.

ಆಗಸ್ಟ್​​ನಲ್ಲಿ ಸ್ಮಾರ್ಟ್ ಫೋನ್​ಗಳ ಸುರಿಮಳೆ
Realme GT Neo 6: 144 Hz ರಿಫ್ರೆಶ್ ರೇಟ್ ಜೊತೆ 6.7 ಇಂಚಿನ AMOLED ಡಿಸ್ಪ್ಲೇ, Snapdragon 8 Gen 2 ಪ್ರೊಸೆಸರ್, ಇದಲ್ಲದೇ ಮೀಡಿಯಾ ಟೆಕ್ ಡೈಮೆನ್ಶನ್ 9000 ಪ್ರೊಸೆಸರ್‌ನೊಂದಿಗೆ Realme GT Neo 6 ಫೋನ್ ಬಿಡುಗಡೆಯಾಗಲಿದೆ. ಹಿಂಭಾಗದಲ್ಲಿ 50 MP ಟ್ರಿಪಲ್ ಕ್ಯಾಮೆರಾಗಳಿವೆ.240W ಚಾರ್ಜಿಂಗ್ ಜೊತೆ 4,600mAh ಬ್ಯಾಟರಿಯು ಹೊಂದಿದೆ. ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಇದರ ಹಿಂಭಾಗ ನಥಿಂಗ್​ ಪೋನ್​ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Tecno Pova 5 ಸೀರಿಸ್​: ನಥಿಂಗ್ ಫೋನ್ ವಿನ್ಯಾಸದಿಂದ ಸ್ಫೂರ್ತಿ ಪಡೆದ ಮತ್ತೊಂದು ಮಾದರಿಯು Tecno Pova 5 ಸೀರಿಸ್​ಯಾಗಿದೆ. ಎರಡು ರೂಪಾಂತರಗಳಲ್ಲಿ ತರಲಾಗುತ್ತಿದೆ. ಟೆಕ್ನೋ Poa 5, Techno Poa 5 Pro. ಇದು 6,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 45W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. MediaTek Helio G99 ಪ್ರೊಸೆಸರ್ ಅನ್ನು ಬಳಸಲಾಗಿದೆ. ಕ್ಯಾಮರಾ, ಡಿಸ್‌ಪ್ಲೇ ಮತ್ತಿತರ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ನಥಿಂಗ್​ ಫೋನ್‌ನಂತೆ ಈ ಫೋನ್‌ನ ಹಿಂಭಾಗದಲ್ಲಿ LED ದೀಪಗಳನ್ನು ನೀಡಲಾಗಿದೆ. ಟೆಕ್ನೋ ಪೊವಾ 5 ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

Infinix GT 10 ಸೀರಿಸ್​: ಈ ಸರಣಿಯ ಫೋನ್​ಗಳು ಎರಡೂ ರೂಪಾಂತರಗಳಲ್ಲಿ ಆಗಸ್ಟ್ 3 ರಂದು ಬಿಡುಗಡೆಯಾಗುತ್ತಿದೆ. Infinix GT 10 Pro, Infinix GT 10 Pro ಪ್ಲಸ್. ಇವುಗಳ ಬೆಲೆ ರೂ.20,000 ಒಳಗಿರುತ್ತದೆ ಎಂದು ಮಾರುಕಟ್ಟೆ ವಲಯಗಳು ಅಂದಾಜಿಸುತ್ತವೆ. ಇದು 6.74 ಇಂಚಿನ AMOLED ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್​ ಅನ್ನು ಹೊಂದಿದೆ. ವೈಶಿಷ್ಟ್ಯಗಳು 5,000 mAh ಬ್ಯಾಟರಿ ಮತ್ತು 108 MP ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಒಳಗೊಂಡಿವೆ. GT 10 Pro ಮೀಡಿಯಾ ಟೆಕ್ ಡೈಮೆನ್ಶನ್ 1300 ಪ್ರೊಸೆಸರ್ ಅನ್ನು ಬಳಸುತ್ತದೆ. ಆದರೆ GT 10 Pro ಪ್ಲಸ್ ಮೀಡಿಯಾ ಟೆಕ್ ಡೈಮೆನ್ಶನ್ 8050 ಪ್ರೊಸೆಸರ್ ಅನ್ನು ಬಳಸಲಾಗುತ್ತದೆ.

Redmi 12 5G: ಬಜೆಟ್ ಸ್ನೇಹಿ ಬ್ರ್ಯಾಂಡ್ ರೆಡ್ಮಿ ಮತ್ತೊಂದು ಹೊಸ ಮಾದರಿಯನ್ನು ತರಲಿದೆ. ಫೋನ್ Android 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ರೇಟ್​ದೊಂದಿಗೆ 6.79-ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. Snapdragon 4 Gen 2 ಪ್ರೊಸೆಸರ್ ಅನ್ನು ಬಳಸಲಾಗಿದೆ. ಈ ಫೋನ್ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಫೋಟೋ M6 ಪ್ರೊ ಮಾದರಿಯನ್ನು ಅದೇ ವೈಶಿಷ್ಟ್ಯಗಳೊಂದಿಗೆ ಪೊಕೊ ಬ್ರ್ಯಾಂಡ್ ಅಡಿಯಲ್ಲಿ ತರಲಾಗುತ್ತಿದೆ ಎಂದು ವರದಿಯಾಗಿದೆ.

Motorola G40: ಮೊಟೊರೊಲಾ ಸ್ಲಿಮ್ ವಿನ್ಯಾಸದೊಂದಿಗೆ ಮತ್ತೊಂದು ಮಧ್ಯಮ ಶ್ರೇಣಿಯ ಮಾದರಿಯನ್ನು ತರುತ್ತದೆ. ಇದರ ಬೆಲೆ ರೂ.20,000 ಒಳಗಿರುತ್ತದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸುತ್ತವೆ. ಇದು 6.5-ಇಂಚಿನ FullHD+ ಡಿಸ್ಪ್ಲೇ ಹೊಂದಿದೆ. ಈ ಫೋನ್​ನಲ್ಲಿ ಮೀಡಿಯಾ ಟೆಕ್ ಹೆಲಿಯೊ ಜಿ80 ಪ್ರೊಸೆಸರ್ ಬಳಸಲಾಗಿದೆ. ಈ ಫೋನ್ ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ.

Samsung Galaxy F34 5G: ಜುಲೈನಲ್ಲಿ ಫೋಲ್ಡಿಂಗ್​ ಫೋನ್‌ಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್, ಆಗಸ್ಟ್‌ನಲ್ಲಿ ಮಧ್ಯಮ ಶ್ರೇಣಿಯ ಮಾದರಿಯನ್ನು ಪರಿಚಯಿಸಲಿದೆ. Samsung Galaxy F34 5G 120 Hz ರಿಫ್ರೆಶ್ ರೇಟ್​ದೊಂದಿಗೆ 6.4-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. Exynos 1280 ಪ್ರೊಸೆಸರ್ ಬಳಸಲಾಗಿದೆ. 6,000 mAh ಬ್ಯಾಟರಿ ಇದೆ. ಕ್ಯಾಮರಾ ಮತ್ತು ಇತರ ವಿವರಗಳು ತಿಳಿಯಬೇಕಿದೆ.

Poco F5 ಸೀರಿಸ್​: ಈ ಸೀರಿಸ್​ನಲ್ಲಿ Poco F5 ಮತ್ತು Poco F5 Pro ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹಿಂಭಾಗದಲ್ಲಿ 64 ಎಂಪಿ, 8 ಎಂಪಿ ಮತ್ತು 2 ಎಂಪಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. Poco F5 120Hz ರಿಫ್ರೆಶ್ ರೇಟ್​ದೊಂದಿಗೆ 6.67-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. Snapdragon 7+ Gen 2 ಪ್ರೊಸೆಸರ್ ಅನ್ನು ಬಳಸಲಾಗಿದೆ. 5,000 mAh ಬ್ಯಾಟರಿ, 67 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Poco F5 Pro 6.67-ಇಂಚಿನ WQHD+ AMOLED ಡಿಸ್ಪ್ಲೇಯನ್ನು ಹೊಂದಿದೆ. Snapdragon 8+ Gen 2 ಪ್ರೊಸೆಸರ್ ಅನ್ನು ಬಳಸಲಾಗಿದೆ. 5,160 mAh ಬ್ಯಾಟರಿ ಇದೆ. ಇದು 67 ವ್ಯಾಟ್ ಚಾರ್ಜಿಂಗ್ ಹೊಂದಿದೆ.

IQoo Z7 Pro: ಈ ಫೋನ್ ಕರ್ವಡ್​ ಡಿಸ್ಪ್ಲೇ ಹೊಂದಿದೆ. IQOO Z7 Pro ಆಗಸ್ಟ್ 13 ರಂದು ಬಿಡುಗಡೆಯಾಗಲಿದೆ. ಸ್ನಾಪ್‌ಡ್ರಾಗನ್ 782G ಪ್ರೊಸೆಸರ್ ಬಳಸಲಾಗಿದೆ. 5,000 mAh ಬ್ಯಾಟರಿ, 120 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ಕ್ಯಾಮರಾ ಮತ್ತು ಬೆಲೆ ವಿವರಗಳು ತಿಳಿಯಬೇಕಿದೆ.

Vivo V29 ಸೀರಿಸ್​: Vivo V29 ಮತ್ತು V20 E ರೂಪಾಂತರಗಳು 6.67-ಇಂಚಿನ AMOLED ಡಿಸ್ಪ್ಲೇ ಹೊಂದಿವೆ. ಆಗಸ್ಟ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಬಿಡುಗಡೆಯಾಗಲಿದೆ. V29 ಮಾದರಿಯು MediaTek ಡೈಮೆನ್ಶನ್ 1300 ಪ್ರೊಸೆಸರ್ ಅನ್ನು ಬಳಸುತ್ತದೆ. ಹಿಂಭಾಗವು 50 MP ಪ್ರೈಮರಿ ಕ್ಯಾಮರಾ ಜೊತೆಗೆ 13 MP ಅಲ್ಟ್ರಾ-ವೈಡ್ ಆಂಗಲ್ ಮತ್ತು ಎರಡು 2 MP ಕ್ಯಾಮೆರಾಗಳನ್ನು ಹೊಂದಿದೆ. ಮುಂಭಾಗದಲ್ಲಿ 32 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 5,000mAh ಬ್ಯಾಟರಿಯು 60W ಚಾರ್ಜಿಂಗ್ ಅನ್ನು ಹೊಂದಿದೆ. ಈ ರೂಪಾಂತರದ ಬೆಲೆ ರೂ. 40 ಸಾವಿರದೊಳಗೆ ಇರಲಿದೆ ಎಂದು ಮಾರುಕಟ್ಟೆ ವಲಯಗಳು ಅಂದಾಜಿಸುತ್ತವೆ.

V29 ಈ ರೂಪಾಂತರದಲ್ಲಿ Snapdragon 8+ Gen 1 ಪ್ರೊಸೆಸರ್ ಅನ್ನು ಬಳಸುತ್ತದೆ. 108MP ಹಿಂಬದಿಯ ಕ್ಯಾಮೆರಾ ಜೊತೆಗೆ 8MP ಮತ್ತು ಎರಡು 2MP ಕ್ಯಾಮರಾಗಳಿವೆ. ಮುಂಭಾಗದಲ್ಲಿ 44 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 5,000mAh ಬ್ಯಾಟರಿಯು 80W ಚಾರ್ಜಿಂಗ್ ಅನ್ನು ಹೊಂದಿದೆ. ಈ ಫೋನಿನ ಬೆಲೆ 45 ಸಾವಿರಕ್ಕಿಂತ ಕಡಿಮೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಇದಲ್ಲದೇ OnePlus Ace 2 Pro ಮತ್ತು Xiaomi Fold 3 ಮಾದರಿಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆಯಂತೆ. ಆದ್ರೆ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲ. ಅಲ್ಲದೆ ಮಾಧವ್ ಸೇಠ್ ಅವರ ನೇತೃತ್ವದಲ್ಲಿ ಹಾನರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹೊರಬೀಳುತ್ತಿದೆ. ಇತ್ತೀಚೆಗೆ ಮಾಧವ್ ಸೇಠ್ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಈ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಈ ಹಿಂದೆ ಅವರು ರಿಯಲ್‌ಮಿ ಇಂಡಿಯಾದ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಕೆಲ ತಿಂಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಗೊತ್ತಾಗಿದೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: