ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಿಡುಗಡೆಯಾದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಿಡುಗಡೆಯಾದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್ ಸೇರಿದೆ.
‘ಜೈಲರ್’.. ಸೂಪರ್ ಹಿಟ್ ಸೌತ್ ಸಿನಿಮಾ. ಆಗಸ್ಟ್ 10ರಂದು ಬಿಡುಗಡೆಯಾಗಿ, ಮೂರು ವಾರ ಕಳೆದರೂ ನಾನ್ ಸ್ಟಾಪ್ ಇಲ್ಲದೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯನ್ನು ಕಣ್ತುಂಬಿಕೊಳ್ಳಲು ಜನರು ಥಿಯೇಟರ್ಗೆ ಮುಗಿಬೀಳುತ್ತಿದ್ದಾರೆ. ಈ ಕಾರಣಕ್ಕಾಗಿ ಚಿತ್ರವು ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ದಕ್ಷಿಣ ಭಾರತದ ಹಲವು ಬ್ಲಾಕ್ಬಸ್ಟರ್ ಚಿತ್ರಗಳ ಸಾಲಿನಲ್ಲಿ ‘ಜೈಲರ್’ ಸ್ಥಾನ ಪಡೆದುಕೊಂಡಿದೆ.
#Jailer WW Box Office#600CrJailer – HOUSE FULL shows even on 3rd Sunday helps the film to go past the magical ₹600 cr mark on the 18th day.
||#Rajinikanth #ShivaRajKumar | #Mohanlal|| #2Point0 was the FIRST film to enter this club from Tamil Cinema on the 10th day of its… pic.twitter.com/zVhTidnzbw
— Manobala Vijayabalan (@ManobalaV) August 28, 2023
‘ಜೈಲರ್’ ಕಲೆಕ್ಷನ್: ‘ಜೈಲರ್’ ಈ ಹಿಂದಿನ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿದಿದೆ. ರಜನಿ ಮುಖ್ಯಭೂಮಿಕೆಯ ಈ ಸಿನಿಮಾ ಜಗತ್ತಿನಾದ್ಯಂತ 600 ಕೋಟಿಗೂ ಹೆಚ್ಚು ಸಂಪಾದನೆ ಮಾಡುವಲ್ಲಿ ಯಶ ಕಂಡಿದೆ. ದೇಶೀಯ ಬಾಕ್ಸ್ ಆಫೀಸ್ನಲ್ಲಿ 315.95 ಕೋಟಿ ರೂಪಾಯಿ ಸೇರಿ ವಿಶ್ವದಾದ್ಯಂತ 607.29 ಕೋಟಿ ರೂಪಾಯಿ ಸಂಗ್ರಹಿಸಿದೆ. ಚಿತ್ರವು ಭಾನುವಾರ ಅಂದರೆ 18ನೇ ದಿನದಂದು ಭಾರತದ ಎಲ್ಲಾ ಭಾಷೆಗಳಲ್ಲಿ 7.5 ಕೋಟಿ ರೂ. ಗಳಿಸಿದೆ. ಜೈಲರ್ 600 ಕೋಟಿ ಕ್ಲಬ್ ಪ್ರವೇಶಿಸಿದ ಎರಡನೇ ತಮಿಳು ಚಿತ್ರವಾಗಿದೆ. ಇದಕ್ಕೂ ಮೊದಲು ರೋಬೋಟ್ 2 ಚಿತ್ರ 600 ಕೋಟಿ ಕ್ಲಬ್ ಪ್ರವೇಶಿಸಿತ್ತು. ಅದರಲ್ಲೂ ಈ ಎರಡೂ ಚಿತ್ರಗಳು ಕೂಡ ರಜನಿ ಅವರದ್ದೇ ಅನ್ನೋದು ವಿಶೇಷ.
‘ಜೈಲರ್’ ಸಿನಿಮಾ ಮೊದಲ ವಾರದಲ್ಲಿ 450 ಕೋಟಿ ರೂ., ಎರಡನೇ ವಾರದಲ್ಲಿ 124 ಕೋಟಿ ರೂ., ಮೂರನೇ ವಾರದ ಮೊದಲ ದಿನ 7.67 ಕೋಟಿ ರೂ., ಎರಡನೇ ದಿನ 6.03 ಕೋಟಿ ರೂ., ಮೂರನೇ ದಿನ 8.36 ಕೋಟಿ ರೂ. ಮತ್ತು ನಾಲ್ಕನೇ ದಿನ 10.25 ಕೋಟಿ ರೂ. ಗಳಿಸಿದೆ. ಈ ಮೂಲಕ ವಿಶ್ವದಾದ್ಯಂತ ಚಿತ್ರವು 607.29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಜೈಲರ್ ಸಿನಿಮಾ ಮೂರನೇ ಭಾನುವಾರ ಹೌಸ್ಫುಲ್ ಆಗಿತ್ತು ಎಂದು ಹೇಳಲಾಗುತ್ತಿದೆ. ಜೈಲರ್ ಕ್ರೇಜ್ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.