Scam 2003: ದೇಶ ಕಂಡ ಮಹಾ ಹಗರಣ ವೆಬ್ ಸಿರೀಸ್ ರೂಪದಲ್ಲಿ; ಹನ್ಸಲ್ ಮೆಹ್ತಾ ಬತ್ತಳಿಕೆಯಿಂದ ಹೊರಬಿತ್ತು ದಿ ತೆಲಗಿ ಸ್ಟೋರಿ ಟೀಸರ್
ಕರೀಂ ಲಾಲಾ ತೇಲಗಿ ಕಹಾನಿ ಈಗ ವೆಬ್ ಸಿರೀಸ್…. ಸೋನಿ ಟಿವ್ಹಿ ಆ್ಯಪ್ ಡೌನ್ ಲೋಡ್ಮಾಡಿಕೊಂಡ್ರೆ Scam 2023 ಎಂಬ ವೆಬ್ ಸೀರೀಸ್ ಪೋಸ್ಟರ್ ಪ್ರತ್ಯಕ್ಷ ಆಗುತ್ತದೆ.

ಕರೀಂ ಲಾಲಾ ತೇಲಗಿ ಕಹಾನಿ ಈಗ ವೆಬ್ ಸಿರೀಸ್….
ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ಅಬ್ದುಲ್ ಕರೀಮ್ ತೆಲಗಿ ಕುರಿತ ವೆಬ್‌ಸಿರೀಸ್ ಇದೀಗ ಒಟಿಟಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ. ಸೆಪ್ಟಂಬರ್ 1ರಂದು ಸೋನಿ ಲೀವ್‌ನಲ್ಲಿ ಸ್ಟ್ರೀಮ್ ಆಗಲಿದೆ. ಅದಕ್ಕೂ ಮುನ್ನ ಈ ಸಿರೀಸ್‌ನ ಟೀಸರ್ ರಿಲೀಸ್ ಆಗಲಿದೆ.
Scam 2003 The Telgi Story: ಬಾಲಿವುಡ್‌ನಲ್ಲಿ ಸಿನಿಮಾ ಮತ್ತು ವೆಬ್ ಸಿರೀಸ್ ಮೂಲಕವೇ ಖ್ಯಾತಿ ಪಡೆದ ನಿರ್ದೇಶಕ ಹನ್ಸಲ್ ಮೆಹ್ತಾ, ಇದೀಗ ಮತ್ತೊಂದು ಹಗರಣದ ಕಥೆಯೊಂದಿಗೆ ಆಗಮಿಸಿದ್ದಾರೆ. ‘ಸ್ಕ್ಯಾಮ್ 1992; ದಿ ಹರ್ಷದ್ ಮೆಹ್ತಾ ಸ್ಟೋರಿ’ ಮೂಲಕ ರಂಜಿಸಿದ್ದ ಹನ್ಸಲ್ ಈಗ ಸ್ಕ್ಯಾಮ್ 2003ರ ಕಥೆ ಹೇಳಲಿದ್ದಾರೆ. ‘ಸ್ಕ್ಯಾಮ್ 2003; ದಿ ತೆಲಗಿ ಸ್ಟೋರಿ’ ಈ ವೆಬ್‌ಸಿರೀಸ್‌ನ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಪ್ರಸಾರ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ.
ಹನ್ಸಲ್ ಮೆಹ್ತಾ ನಿರ್ದೇಶನದ ಸ್ಕ್ಯಾಮ್ 2003: ದಿ ತೆಲಗಿ ಸ್ಟೋರಿ ವೆಬ್‌ಸಿರೀಸ್‌ನ ಟೀಸರ್ ಮಂಗಳವಾರವಷ್ಟೇ (ಆಗಸ್ಟ್ 22) ಬಿಡುಗಡೆಯಾಗಿದೆ. ಈ ಸರಣಿಯ ಮೂಲಕ ನಕಲಿ ಛಾಪಾ ಕಾಗದ ಹಗರಣದ ಮಾಸ್ಟರ್ ಮೈಂಡ್ ಅಬ್ದುಲ್ ಕರೀಂ ತೆಲಗಿಯ ಕಥೆ ಹೇಳಲಿದ್ದಾರೆ ನಿರ್ದೇಶಕರು. 2003ರಲ್ಲಿ 30 ಸಾವಿರ ಕೋಟಿಯ ಈ ಹಗರಣ ಭಾರತದ ಅರ್ಥವ್ಯವಸ್ಥೆಯನ್ನೇ ಅಲುಗಾಡಿಸಿತ್ತು. ಅಂದಿನ ಆ ಹಗರಣವನ್ನು ಪತ್ರಕರ್ತ ಸಂಜಯ್ ಸಿಂಗ್ ರಿಪೋರ್ಟರ್ಸ್ ಡೈರಿ ಶೀರ್ಷಿಕೆಯಲ್ಲಿ ಪುಸ್ತಕ ಬರೆದಿದ್ದರು. ಇದೀಗ ಈ ಸಿನಿಮಾದ ಕಥೆ ಸಹ ಇದೇ ಪುಸ್ತಕದಿಂದಲೇ ಆಯ್ದುಕೊಳ್ಳಲಾಗಿದೆ.
ಹನ್ಸಲ್ ಮೆಹ್ತಾ ಈ ಹಿಂದಿನ ‘ಸ್ಕ್ಯಾಮ್ 1992’ ವೆಬ್ ಸಿರೀಸ್‌ನಲ್ಲಿ ಪ್ರತೀಕ್ ಗಾಂಧಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ರಂಗಭೂಮಿ ನಟ ಗಗನ್ ದೇವ್, ಸ್ಕ್ಯಾಮ್ 2003 ಸಿರೀಸ್‌ನಲ್ಲಿ ಅಬ್ದುಲ್ ಕರೀಂ ತೆಲಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂದಹಾಗೆ, ನಕಲಿ ಸ್ಟಾಂಪ್ ಪೇಪರ್ ಮುದ್ರಿಸುವ ಮೂಲಕ 30 ಸಾವಿರ ಕೋಟಿ ಹಗರಣದ ಪ್ರಮುಖ ರೂವಾರಿ ಎನಿಸಿಕೊಂಡಿದ್ದ ತೆಲಗಿ, 300ಕ್ಕೂ ಅಧಿಕ ಜನ ಕೆಲಸಗಾರರನ್ನೂ ನೇಮಿಸಿಕೊಂಡಿದ್ದ. ಆಗಿನ ಕಾಲದಲ್ಲಿ ಇದು ಭಾರತದ ಅತೀ ದೊಡ್ಡ ಹಗರಣಗಳಲ್ಲೊಂದು.
“ತೆಲಗಿ ಹೆಸರೂ ಕೇಳಿದ್ದೀರಿ ಅಲ್ಲವೇ.. ತೆಲಗಿ ಓರ್ವ ಖೋಟಾ ನೋಟು. ತೆಲಗಿ ಓರ್ವ ವಿಷಸರ್ಪ, ಅವನೊಬ್ಬ ಸ್ಮಾರ್ಟ್, ಆತ ಯಾವುದೇ ರಿಸ್ಕ್ ತೆಗೆದುಕೊಳ್ಳಲು ರೆಡಿಯಿರುವಾತ.. ಹೀಗೆ ಶುರುವಾಗುವ ಟೀಸರ್‌ನಲ್ಲಿ “ದೇಶದ ಅರ್ಥವ್ಯವಸ್ಥೆ ಕುಬೇರ ಖಜಾನೆಯಾದರೆ, ಸ್ಟಾಂಪ್ ಪೇಪರ್ ಅದರ ಕೀಲಿ ಕೈ” ಎಂಬ ಡೈಲಾಗ್ ಟೀಸರ್‌ನಲ್ಲಿ ತೆಲಗಿ ಬಾಯಿಂದ ಬರುತ್ತದೆ. ಈ ವಂಚಕನ ಜಾಲ, ಹಣಕಾಸಿನ ವ್ಯವಹಾರ, ಪೊಲೀಸ್ ಬಲೆಗೆ ಬಿದ್ದದ್ದು ಹೇಗೆ… ಹೀಗೆ ಹಲವು ರೋಚಕ ಗುಚ್ಛವನ್ನು ಸಿರೀಸ್‌ನಲ್ಲಿ ತುಂಬಿಸಿದ್ದಾರೆ ನಿರ್ದೇಶಕರು.
ಸ್ಟುಡಿಯೋ ನೆಕ್ಸ್ಟ್ ಸಹಯೋಗದೊಂದಿಗೆ ಅಪ್ಲಾಸ್ ಎಂಟರ್ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಈ ವೆಬ್‌ಸಿರೀಸ್ ನಿರ್ಮಾಣವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್ ಮೆಹ್ತಾ ಮತ್ತು ತುಷಾರ್ ಹಿರಾನಂದಾನಿ ಈ ಸೀರಿಸ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ವೆಬ್‌ಸಿರೀಸ್ ಸೋನಿ ಲಿವ್ ಒಟಿಟಿಯಲ್ಲಿ ಸೆಪ್ಟೆಂಬರ್ 1ರಿಂದ ಪ್ರಸಾರವಾಗಲಿದೆ.