ಇತಿಹಾಸ ಪರಂಪರೆಯುಳ್ಳ ಸುಕ್ಷೇತ್ರ ಕಸಮಳಗಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ದುರ್ಗಾದೇವಿ ಜಾತ್ರೆ

*ಇತಿಹಾಸ ಪರಂಪರೆಯುಳ್ಳ ಸುಕ್ಷೇತ್ರ ಕಸಮಳಗಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ದುರ್ಗಾದೇವಿ ಜಾತ್ರೆ*
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಸುಮಾರು 11ನೇಯ ಶತಮಾನದ ವಿಶೇಷವಾದ ಪಾರ್ಶ್ವನಾಥ ಮೂರ್ತಿ ಭೂಮಿಯಲ್ಲಿ ಸಿಕ್ಕು ಸುಕ್ಷೇತ್ರವಾದ ಕಸಮಳಗಿ ಗ್ರಾಮದಲ್ಲಿ ಪ್ರತಿ ವರ್ಷ ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸದ ಮಂಗಳವಾರ ಹಾಗೂ ಭುದವಾರ ಎರಡು ದಿನಗಳ ಕಾಲ ದುರ್ಗಾದೇವಿ ಜಾತ್ರೆಯು 2007 ರಲ್ಲಿ ದೇವಿಯ ಮೂರ್ತಿ ಪ್ರತಿಷ್ಟಾಪಿಸಿ ನಿರಂತರವಾಗಿ 16 ವರ್ಷಗಳಿಂದ ವಿಜೃಂಭಣೆಯಿಂದ ಜರುಗುತ್ತಿದ್ದು ಇದರ ಅಂಗವಾಗಿ ದೇವಿಯ ಪಲ್ಲಕ್ಕಿ ಉತ್ಸವ ಮಹಾ ಮಂಗಳಾರತಿ ಹರಕೆ ತಿರಿಸುವುದು ಮಹಾ ಪ್ರಸಾದ ಮುಂತಾದ ಕಾರ್ಯಕ್ರಮಗಳು ಜರಗುತ್ತವೆ ಸಾವಿರಾರು ಭಕ್ತರು ಭಕ್ತಿ ಪೂರ್ವಕವಾಗಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾರೆ
ಇಂದಿನ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ರುದ್ರ ಸ್ವಾಮಿ ಮಠ ಬಳಕಿಯ ಶ್ರೀ ಚನ್ನಬಸವ ದೇವರು ವಹಿಸಿಕೊಂಡಿದ್ದರು ಹಾಗೂ ಅಥಿತಿಗಳಾಗಿ ಶಾಸಕರ ಅನುಪಸ್ಥಿತಿಯಿಂದ ಅವರ ಪರವಾಗಿ ಸದಾನಂದ ಪಾಟೀಲ ಆಗಮಿಸಿದ್ದರು ಹಾಗೂ ಹಲವಾರು ರಾಜಕೀಯ ಮುಖಂಡರು ಪಂಚಾಯಿತಿ ಸಿಬ್ಬಂದಿ ಮತ್ತು ನೂರಾರು ಭಕ್ತ ಸ್ತೋಮ ಭಾಗವಹಿಸಿ ದೇವಿಗೆ ಫೂಜೆ ಸಲ್ಲಿಸಿದರು
ಈ ಸಂಧರ್ಭದಲ್ಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಭೀಮಪ್ಪ ಬೋಕಡೆಕರ ಕಾರ್ಯದರ್ಶಿ ರವಿ ಬೆಕನಿ ಹಿರಿಯರಾದ ಕೇರವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ತೇಗೂರ ಈರಪ್ಪ ಹುಬ್ಬಳ್ಳಿ ಬಾಬು ಮಡಾಕರ ಬಸವರಾಜ ಬೆಕನಿ ಮಹಾವೀರ ಗೌಡ್ರ ಸುರೇಶ ಬಡಸ್ಕರ ಗಿರೀಶ ಪೂಜಾರ ರುದ್ರಪ್ಪಾ ಬೀಡಿಕರ ಹಾಗೂ ಸರ್ವ ಗ್ರಾಮಸ್ಥರು ನಿಂತು ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೇರವೇರಿಸಿದರು.
ವರದಿ: ಜ್ಯೋತಿಬಾ ಬೆಂಡಿಗೇರಿ