ಖಾನಾಪುರ ತಾಲೂಕು ಬರಪಿಡಿತ ಒತ್ತಾಯಕ್ಕೆ ಮಣಿದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಾಲೂಕಿಗೆ ಬೇಟಿ

*ಖಾನಾಪುರ ತಾಲೂಕು ಬರಪಿಡಿತ ಒತ್ತಾಯಕ್ಕೆ ಮಣಿದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಾಲೂಕಿಗೆ ಬೇಟಿ*
ರಾಜ್ಯದಲ್ಲಿ ಮಳೆ ಅಭಾವದಿಂದಾಗಿ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಬಾರದ ಕಾರಣ ರೈತಾಪಿ ವರ್ಗ ದಿಕ್ಕು ತೋಚದೆ ಕಾಲ ಕಳಿತ್ತಿರುವಾಗ ಸಮೀಕ್ಷೆ ನಡೆಸಿ ಕರ್ನಾಟಕ ರಾಜ್ಯದ165 ತಾಲೂಕುಗಳನ್ನು ಬರಪಿಡಿತ ತಾಲೂಕ ಅಂತ ಘೋಷಿಸಿದೆ ಆದರೆ ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ ಹಾಗೂ ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕ ಪಟ್ಟಿಯಿಂದ ಕೈ ಬಿಟ್ಟಿದ್ದು ಈ ಭಾಗದ ರೈತರಿಗೆ ನುಂಗಲಾರದ ತುತ್ತಾಗಿತ್ತು ಇದನ್ನು ಖಂಡಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಹೋರಾಟ ನಡೆಸಿ ಮನವಿ ಸಲ್ಲಿಸಿದರು
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ, ಹರ್ಷಲ್ ಬೋಯರ್ ಅವರ ನೇತೃತ್ವದ ತಂಡ ಖಾನಾಪುರ ತಾಲೂಕಿನ ಬಿಡಿ ಕಕ್ಕೆರಿ ಭೂರುನಕಿ ಮಾಸ್ಕೆನಟ್ಟಿ ಕಕ್ಕೇರಿ ಅವರ ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಭತ್ತ ಹಾಗೂ ಕಬ್ಬಿನ ಬೆಳೆಗಳನ್ನು ಪರಿಶೀಲಿಸುವಾಗ ಬತ್ತದ ಹಾಗೂ ಕಬ್ಬಿನ ಇಳುವರಿ ಬಗ್ಗೆ ಖಾನಾಪುರ ತಾಲೂಕಿನ ಶಾಸಕ ವಿಠ್ಠಲ್ ಸೋಮಣ್ಣ ಹಲಗೆಕರ್ ಹಾಗೂ ರೈತ ಮುಖಂಡರು ಬೆಳೆಗಳ ಇಳುವರಿ ಬಗ್ಗೆ ವಿವರವಾಗಿ ಹೇಳಿದರು ಮತ್ತು
ಇದಕ್ಕೆ ಸರಕಾರ ಕೂಡಲೇ ರೈತರಿಗೆ ಶೇ.100 ರಷ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ
ನೇಗಿಲ ಯೋಗಿ ರೈತ ಸಂಘದ ಅಧ್ಯಕ್ಷರಾದ ರವಿ ಪಾಟೀಲ್,ಕಿಶೋರ್ ಮಿಟಾರಿ,ದತ್ತಾರಾಮ್ ಪಾಟೀಲ್,ನಾರಾಯಣ್ ದೇವಗೇಕರ್, ರುದ್ರಪ್ಪ ಭೆಂಡಿಗೆರಿ, ಯಲ್ಲಪ್ಪ ನಲವಡೆ, ರವಿ ಮಾದಾರ್, ದತ್ತಾ ಬಿಡಕರ್,ಬಸವರಾಜ್ ಭಂಗಿ, ಎಂ ಎಂ ರಾಜಿಭಾಯಿ, ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು
ವರದಿ: ಜ್ಯೋತಿಬಾ ಬೆಂಡಿಗೇರಿ