MOBILE ALERT :ನಿಮ್ಮ ಮೊಬೈಲ್‌ನಲ್ಲೂ ಈ ಸೌಂಡ್ ಬಂತಾ? ಗಾಬರಿಯಾಗಬೇಡಿ

ಬೆಂಗಳೂರು: ನಿಮ್ಮ ಮೊಬೈಲ್ ಪೋನ್‌ಗೂ ಸೈರನ್ ರೀತಿಯ ಸೌಂಡ್ ಜೊತೆ ತುರ್ತು ಸಂದೇಶವೊಂದು(emergency alert) ಬಂತಾ..? ಆತಂಕ ಪಡಬೇಡಿ.
ಭಾರತದ ದೂರ ಸಂಪರ್ಕ ಇಲಾಖೆ (ಡಿಒಟಿ) ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ತುರ್ತು ಎಚ್ಚರಿಕೆಯ ಸೂಚನೆ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.
ಇಂದು ಎಲ್ಲರ ಮೊಬೈಲ್‌ಗಳಿಗೆ ಸಂದೇಶವೊಂದು ಬರುತ್ತಿದ್ದು, ಒಂದು ಸೌಂಡ್‌ನೊಂದಿಗೆ ತುರ್ತು ಎಚ್ಚರಿಕೆಯ ಸಂದೇಶ ಬರುತ್ತಿದೆ. ಹಲವರು ಈ ಸಂದೇಶ ನೋಡಿ ಗಾಬರಿ ಕೂಡ ಆಗಿದ್ದಾರೆ. ಆದರೆ ಇದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ.
ಇದರಿಂದ ಯಾರೂ ಕೂಡ ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭಾರತದ ದೂರಸಂರ್ಪ ಇಲಾಖೆ ತಿಳಿಸಿದೆ. ಎಚ್ಚರಿಕೆಯಲ್ಲಿ, ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸೂಚನೆ ನೀಡಲಾಗಿದೆ.