Belagavi NewsCrime News
ಬೆಳಗಾವಿ: ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ DDPI ಹೆಬ್ಬಾಳ್ಕರ್ ಪತ್ರದ ಮೂಲಕ ಡಿಡಿಪಿಐ ಹುದ್ದೆ ಪಡೆದಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಳಗಾವಿ: ಲಂಚಕ್ಕೆ ಕೈಯೊಡ್ಡಿದಾಗಲೇ ಬೆಳಗಾವಿ ಜಿಲ್ಲೆ ಡಿಡಿಪಿಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಬಸವರಾಜ್ ನಾಲತವಾಡ ಲೋಕಾಯುಕ್ತ ಬಲೆಗೆ ಬಿದ್ದ ಡಿಡಿಪಿಐ. ಕಿತ್ತೂರು ತಾಲೂಕಿನ ತುರುಮುರಿ ಬಸವೇಶ್ವರ ಶಿಕ್ಷಣ ಸಂಸ್ಥೆ ಪರವಾನಿಗಿ ನವೀಕರಣ ಮಾಡಿಕೊಡಲು ಡಿಡಿಪಿಐ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡಿಡಿಪಿಐ ವಿರುದ್ಧ ಶಾಲಾ ಮುಖ್ಯಸ್ಥ ಅರ್ಜುನ ಕುರಿ ದೂರು ದಾಖಲಿಸಿದ್ದರು.
ಇಂದು 40,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಡಿಡಿಪಿಐ ಬಸವರಾಜ್ ನಾಲತವಾಡ ಅವರನ್ನು ವಶಕ್ಕೆ ಪಡೆದಿದ್ದಾರೆ