fbpx
Belagavi NewsKarnataka News

ಕಿತ್ತೂರು ಉತ್ಸವ 2023: ವಿವಿಧ ಕಾರ್ಯಕ್ರಮಗಳ ವೇಳಾ ಪಟ್ಟಿ ಸೋಮವಾರ ಅ.23 ರಂದು ಸಂಜೆ 7 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕಿತ್ತೂರು ಉತ್ಸವಕ್ಕೆ ದಿನಗಣನೆ ಐತಿಹಾಸಿಕ ನಾಡಿನಲ್ಲಿ ಮೂರು ದಿನಗಳ ಕಾಲ ನಾನಾ ವೈವಿಧ್ಯಮಯ ಕಾರ್ಯಕ್ರಮ

ಬೆಳಗಾವಿ : ಕಿತ್ತೂರು ಉತ್ಸವದ ನಿಮಿತ್ಯ ಕಿತ್ತೂರು ರಾಣಿ ಚನ್ನಮ್ಮಾ ವೇದಿಕೆ ಕೋಟೆ ಆವರಣದಲ್ಲಿ ಸೋಮವಾರ ಅ.23 ರಂದು ಸಂಜೆ 7 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ.ನ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ.ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ.

ಧರ್ಮಕ್ಷೇತ್ರ ಕೂಡಲ ಸಂಗಮ ಅಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಸಮಾರಂಭದ ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ವಿಶೇಷ ಪ್ರತಿನಿಧಿಯಾದ -2 ನವದೆಹಲಿ ಪ್ರಕಾಶ ಹುಕ್ಕೇರಿ, ಉತ್ತರ ಕನ್ನಡ (ಲೋಕಸಭೆ) ಸಂಸದರಾದ ಅನಂತಕುಮಾರ ಹೆಗಡೆ, ರಾಜ್ಯಸಭೆ ಸಂಸದರಾದ ಈರಣ್ಣಾ ಕಡಾಡಿ,ಚಿಕ್ಕೋಡಿ (ಲೋಕಸಭೆ) ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬೆಳಗಾವಿ (ಲೋಕಸಭೆ) ಸಂಸದರಾದ ಮಂಗಲ ಅಂಗಡಿ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜಿಲ್ಲೆಯ ಎಲ್ಲ ಶಾಸಕರು, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಉದ್ಘಾಟನೆ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ಕಿತ್ತೂರು ಚೆನ್ನಮ್ಮನವರ ವಂಶಸ್ಥರಿಗೆ ಸನ್ಮಾನ..

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಅಂಜುಮ್ ಪರ್ವೇಜ್, ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಡಾ. ಎನ್. ಮಂಜುಳಾ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ ಹಾಗೂ ಬೆಳಗಾವಿ ಉತ್ತರ ವಲಯದ ಆರಕ್ಷಕ ಮಹಾ ನಿರೀಕ್ಷಕರಾದ ವಿಕಾಶ್ ಕುಮಾರ್ ವಿಕಾಶ್ ಅವರು ಸನ್ಮಾನ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ರಾಣಿ ಚೆನ್ನಮ್ಮನ ತವರೂರು ಕಾಕತಿಯಲ್ಲಿ ಮೂರ್ತಿಯ ಪೂಜೆ.. 

ರಾಣಿ ಚೆನ್ನಮ್ಮನ ತವರೂರು ಕಾಕತಿಯಲ್ಲಿ ಸೋಮವಾರ ಅ.23 ರಂದು ಬೆಳಿಗ್ಗೆ 8 30 ಗಂಟೆಗೆ ರಾಣಿ ಚೆನ್ನಮ್ಮನ ಮೂರ್ತಿಯ ಪೂಜೆ ನಡೆಯಲಿದೆ.

ಕಾಕತಿ ಶಿವಪೂಜಿಮಠದ ಪೂಜ್ಯ ಶ್ರೀ ರಾಜಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಚಿಕ್ಕೋಡಿ (ಲೋಕಸಭೆ) ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾಕತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ ಹಾಗೂ ಕಾಕತಿ ಗ್ರಾಮ ಪಂಚಾಯತ ಎಲ್ಲ ಸದಸ್ಯರು ಉಪಸ್ಥಿತರಿರುವರು.

ಬೆಳಗಾವಿ ಆರ್.ಪಿ.ಡಿ. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲ್ಕಾರ ಅವರು ಉಪನ್ಯಾಸ ನೀಡಲಿದ್ದಾರೆ.

ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ..

ಕಿತ್ತೂರಿನ ಗಡಾದಮರಡಿಯಲ್ಲಿ ಸೋಮವಾರ (ಅ.23 ) ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು,ಚೆನ್ನಮ್ಮನ ಕಿತ್ತೂರು ಉತ್ಸವ ಸಮಿತಿ ಅಧ್ಯಕ್ಷರಾದ ನಿತೇಶ ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆ.

ವಿಜಯ ಜ್ಯೋತಿಗೆ ಸ್ವಾಗತ ಹಾಗೂ ಸಂಸ್ಥಾನದ ಧ್ವಜಾರೋಹಣ..

ಅದೇ ದಿನ ಚನಮ್ಮ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಲೋಕೋಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಲಿದ್ದರೆ.

ಜಾನಪದ ಕಲಾವಾಹಿನಿ ಉದ್ಘಾಟನೆ… 

ಚನಮ್ಮ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10 15 ಗಂಟೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಜಾನಪದ ಕಲಾವಾಹಿನಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಫಲ ಪುಷ್ಪ ಪ್ರದರ್ಶನ ಉದ್ಘಾಟನೆ..

ಚನಮ್ಮ ಕಿತ್ತೂರಿನ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಬೆಳಗಾವಿ (ಲೋಕಸಭೆ) ಸಂಸದರಾದ ಮಂಗಲ ಅಂಗಡಿ ಅವರು ಫಲ ಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.

ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ..

ಚನಮ್ಮ ಕಿತ್ತೂರಿನ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಬೆಳಿಗ್ಗೆ 11 30 ಗಂಟೆಗೆ ವಿಶೇಷ ಪ್ರತಿನಿಧಿಯಾದ -2 ನವದೆಹಲಿ ಪ್ರಕಾಶ ಹುಕ್ಕೇರಿ ಅವರು ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಮಾಡಲಿದ್ದಾರೆ.

ಕ್ರೀಡೆ ಮತ್ತು ದೋಣಿ ವಿಹಾರ ಉದ್ಘಾಟನೆ..

ಚನಮ್ಮ ಕಿತ್ತೂರಿನ ತುಂಬುಗಿರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ ಅವರು ಕ್ರೀಡೆ ಮತ್ತು ದೋಣಿ ವಿಹಾರ ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯಸಭೆ ಸಂಸದರಾದ ಈರಣ್ಣಾ ಕಡಾಡಿ ಅವರು ಉಪಸ್ಥಿತರಿರಲಿದ್ದಾರೆ.

ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು

ಕಿತ್ತೂರಾಣಿ ಚೆನ್ನಮ್ಮ ಕೋಟೆ ಆವರಣದಲ್ಲಿ ಸೋಮವಾರ ಅ. 23 ರಂದು ಸಂಜೆ 4 ರಿಂದ 7ಗಂಟೆ ವರಗೆ ವಿವಿಧ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಾನಪದ ಸಂಗೀತ,ದಾಸವಾಹಿನಿ,ತತ್ವಪದ, ರಂಗ ಗೀತೆಗಳು,ಸ್ಯಾಕ್ಸೋಫೋನ, ಜಾನಪದ ವೈವಿಧ್ಯ,ಸುಗಮ ಸಂಗೀತ, ಭರತನಾಟ್ಯ,ಜಾನಪದ ಸಂಗೀತಗಳು, ನೃತ್ಯ ರೂಪಕ, ಗಾನಕಲಾ ಕುಂಚ ಗಾಯನ, ಪಲಕ್ಕಡ ಜಾನಪದ ನೃತ್ಯ, ವಚನ ಸಂಗೀತ, ಪೂಜಾ ಕುಣಿತ ಹಾಗೂ ಜಾದೂ ಪ್ರದರ್ಶನ ನಡೆಯಲಿದೆ.

ಉದ್ಘಾಟನಾ ಸಮಾರಂಭ ಸಂಜೆ 7 ರಿಂದ 8 ಗಂಟೆ ವರಗೆ..

ಮಹಿಷಾಸುರ ಮರ್ಧಿನಿ ನೃತ್ಯ ವೈವಿಧ್ಯ ವಿದ್ವಾನ ಮಂಜುಳಾ ಮತ್ತು ತಂಡದವರಿಂದ, ರಸಮಂಜರಿ ಜನಸ್ನೇಹಿ ಪೊಲೀಸ ಅಪರಾದ ಜಾಗೃತಿ ಪೊಲೀಸ್ ಅಧೀಕ್ಷಕ ಕಾರ್ಯಾಲಯ ಸಿಬ್ಬಂದಿಯವರಿಂದ ಹಾಗೂ ನೃತ್ಯ, ನಾಡು ನುಡಿಯ ವೈಭವ ಸಾರುವ ಗೀತೆಗಳುನ್ನು ಮಂಜುನಾಥ ಹುಡೇದ ಮತ್ತು ತಂಡದವರಿಂದ ನಡೆಯಲಿದೆ.

9 30 ರಿಂದ 11 30 ರ ವರಗೆ ಸಂಚಿತ ಹೆಗಡೆ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸವದತ್ತಿಯ ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ವತಿಯಿಂದ 11 30 ಗಂಟೆಗೆ ನಾಟಕ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಸೋಮವಾರ ಅ. 23 ರಂದು ಸಂಜೆ 4 ರಿಂದ 7 ಗಂಟೆ ವರಗೆ ಸರದಾರ ಗುರು ಸಿದ್ದಪ್ಪ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಹನಾಯಿ,ಸುಗಮ ಸಂಗೀತ,ಭಜನೆ,ಭಾವಗೀತೆ, ಯೋಗಾಸನ, ವಚನ ಗಾಯನ, ಜಾನಪದ ಸಂಗೀತ, ಚಿತ್ರ ಸಂಭಾಷಣೆ ಹಿಂದುಸ್ತಾನಿ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಕಿತ್ತೂರಾಣಿ ಚೆನ್ನಮ್ಮ ವೇದಿಕೆ ಕೋಟೆ ಆವರಣದಲ್ಲಿ 7 ರಿಂದ 8 ಗಂಟೆಯವರೆಗೆ ಉದ್ಘಾಟನೆ ಸಮಾರಂಭ ಕಾರ್ಯಕ್ರಮ ನಡೆಯಲಿದೆ.

8 ರಿಂದ 10 ಗಂಟೆ ವರಗೆ ಭರತನಾಟ್ಯ,ಸುಗಮ ಸಂಗೀತ, ಜಾನಪದ ಸಂಗೀತ, ಬಯಲಾಟ ಪದಗಳು, ಸಂಗೀತ, ಭಜನೆ,ರಸಮಂಜರಿ ಹಾಗೂ ಬಯಲಾಟ ಕಾರ್ಯಕ್ರಮಗಳು ನಡೆಯಲಿವೆ.

ಸಂಸ್ಕೃತಿಕ ಕಾರ್ಯಕ್ರಮಗಳು.

ವಡ್ಡರ ಯಲ್ಲಣ್ಣ ಕಲ್ಮಠ ಆವರಣದಲ್ಲಿ ಸೋಮವಾರ ಅ.23 ರಂದು ಸಂಜೆ 4 ಗಂಟೆಯಿಂದ 7 ಗಂಟೆ ವರಗೆ ಭಜನೆ, ಮೂಗಿನಿಂದ ಶಹನಾಯಿ, ಜಾನಪದ ಬಯಲಾಟ ಕಾರ್ಯಕ್ರಮಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ 8 ಗಂಟೆಯಿಂದ ಭಜನೆ, ಬಯಲಾಟ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು, ಚನ್ನಮ್ಮನ ಕಿತ್ತರು ಉತ್ಸವ ಸಮಿತಿ ಅಧ್ಯಕ್ಷರಾದ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: