ಖಾನಾಪುರ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳ ಗೋಳು ಕೇಳುವರು ಯಾರು

*ಖಾನಾಪುರ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳ ಗೋಳು ಕೇಳುವರು ಯಾರು*
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಪಶ್ಚಿಮ ಭಾಗದಲ್ಲಿ ಬದುಕುತ್ತಿರುವ ವಿದ್ಯಾರ್ಥಿಗಳು ಹಾಗೂ ವೃದ್ಧರು 20 ರಿಂದ 30 ಕಿಲೋಮೀಟರ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ ಸರಿಯಾಗಿ ಬಸ ಇಲ್ಲದ ಕಾರಣ ಪ್ರತಿ ದಿನ ಶಾಲೆಗೆ ಹೋಗುವಾಗ ಹಾಗೂ ಸಾಯಂಕಾಲ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಬಸ್ಸುಗಳಿಲ್ಲದೆ ಮನೆಗೆ ತಲುಪುವುದು ತೊಂದರೆಯಾಗಿ ಪಾಲಕರು ಭಯಪಡುವಂತಾಗಿದೆ
ಕಾರಣ ಇಂದು ತಹಶೀಲ್ದಾರ ಅವರಿಗೆ ಹೋರಾಟದ ಮುಖಾಂತರ ಮನವಿ ನೀಡಿ ತಮ್ಮ ಅಳಲನ್ನ ತೋಡಿಕೊಂಡರು ಈ ಸಮಯದಲ್ಲಿ ಭೀಮ್ ಆರ್ಮಿ ಸಂಘಟನೆ ತಾಲೂಕ ಅಧ್ಯಕ್ಷರು ಸಂದೀಪ ಚಲವಾದಿ ಮಾತನಾಡಿ ಸರಕಾರ ಮಹಿಳೆಯರಿಗಾಗಿ ಉಚಿತ ಬಸ ಪ್ರಯಾಣ ಯೋಜನೆ ನೀಡಿರುವುದು ಕೇವಲ ರಾಜಕಾರಣಕ್ಕಾಗಿ ರಾಜ್ಯದ ಪ್ರತಿಯೊಂದು ವ್ಯಕ್ತಿಗೆ ಈ ಯೋಜನೆ ತಲುಪಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿ ಇಲ್ಲವಾದರೆ ಖಾನಾಪೂರ ತಾಲೂಕನ್ನು ಪಕ್ಕದ ಗೋವಾ ಅಥವಾ ಕೇರಳ ರಾಜ್ಯಕ್ಕೆ ಸೇರಿಸಿ ಎಂದು ಆಕ್ರೋಶ ಹೊರಹಾಕಿದರು
ಈ ಸಮಯದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ದಲಿತ ಸಮಿತಿ ಸಂಯೋಜಕ ಜಿಲ್ಲಾ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಭೀಮ ಆರ್ಮಿ ವಿಭಾಗಿ ಕಾರ್ಯದರ್ಶಿ ನಾಗೇಶ ಕಾಂಬಳೆ ಹಾಗೂ DSS ತಾಲೂಕಾ ಅಧ್ಯಕ್ಷರು ರಾಘವೇಂದ್ರ ಛಲವಾದಿ ಮಂಜುನಾಥ ಕಾಂಬಳೆ ಬೆಂಬಲಿಸಿ ಸಂಬಂಧಪಟ್ಟ ಇಲಾಖೆಯವರು ಕೂಡಲೆ ಬಸ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವದೆಂದು ತಹಸಿಲ್ದಾರ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಸಿದರು
ವರದಿ ಜ್ಯೋತಿಬಾ ಬೆಂಡಿಗೇರಿ