LatestNationalPolitics

ಬೆಳಗಿನ ಟಾಪ್ ನ್ಯೂಸ್​ಗಳು

ಅ.10ರವರೆಗೆ ಮಳೆ, ಏರಿಕೆಯಾದ ಚಿನ್ನ, ಶೂಟಿಂಗ್​ ಸೆಟ್​ನಲ್ಲಿ ಅನುಷ್ಕಾ ಶರ್ಮಾ,

1.Karnataka Weather Today:ಅಕ್ಟೋಬರ್ 10ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ-ಇಂದಿನ ಹವಾಮಾನ ವರದಿ ಹೀಗಿದೆ..

Karnataka Rains Today ಬೆಂಗಳೂರು(ಅ.08): ರಾಜ್ಯದಲ್ಲಿ ಮಳೆಯ(Heavy Rainfall) ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಕ್ಟೋಬರ್ 6 ಕ್ಕೆ ಮುಂಗಾರು(Monsoon) ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇನ್ನೂ ಅಕ್ಟೋಬರ್ 10ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ. ನೈರುತ್ಯ ಬಂಗಾಳ ಕೊಲ್ಲಿಯಿಂದ ಪೂರ್ವ ಮಧ್ಯ ಅರೇಬಿಯನ್ ಸಮುದ್ರದವರೆಗೆ ಹಾಗೂ ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಒಂದು ಮುಂಗಾರು ತೊಟ್ಟಿ ವಿಸ್ತರಿಸಿದ್ದು, ಇದು ರಾಜ್ಯದಲ್ಲಿ ಮಳೆಗೆ ಕಾರಣವಾಗಿದೆ.

2.Gold Price Today: ಇಂದು ಏರಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ ರೇಟು?

Gold Rate on October 08 2021: ನಿನ್ನೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ಬೆಲೆ(Gold Price) ಇಂದು ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,680 ರೂ. ಇತ್ತು. ಇಂದು 45,900 ರೂ.ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 46,680 ರೂ. ಇತ್ತು. ಇಂದು 46,900 ರೂ. ಗೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 220 ರೂಪಾಯಿ ಹೆಚ್ಚಾಗಿದೆ.

3.Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಸಾಧ್ಯತೆ

ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಿಂದ(Rainfall) ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ (Power Cut)ಮಾಡುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಒಂದೆಲ್ಲ ಒಂದು ಏರಿಯಾದಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಿದೆ. ಇಂದೂ ಕೂಡ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

4.Petrol Price:ಏರುತ್ತಲೇ ಇದೆ ಪೆಟ್ರೋಲ್ -ಡೀಸೆಲ್ ಬೆಲೆ, ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ

ಬೆಂಗಳೂರು (ಅಕ್ಟೋಬರ್​ 08); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇಂದು ಬೆಂಗಳೂರಿನಲ್ಲಿ (Bangalore) ಪೆಟ್ರೋಲ್ ಬೆಲೆ 52 ಪೈಸೆ ಏರಿಯಾಗಿದ್ದು, ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 107.14 ರೂ.ಗೆ ಮಾರಾಟ ಮಾಡಲಾಗಿದ್ದರೆ, ಚಿತ್ರದುರ್ಗದಲ್ಲಿ (Chitradurga) 1 ಲೀಟರ್​ ಪೆಟ್ರೋಲ್​ಗೆ 42 ಪೈಸೆ ಏರಿಸಲಾಗಿದ್ದು, ಪೆಟ್ರೋಲ್ ಬೆಲೆ ಶೀಘ್ರದಲ್ಲೆ 110 ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಡೀಸೆಲ್​ ಬೆಲೆಯನ್ನೂ ಏರಿಸಲಾಗಿದ್ದು, ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.

5.ಶೂಟಿಂಗ್​ ಸೆಟ್​ಗೆ Anushka Sharma ಎಂಟ್ರಿ: ನಟಿಯ ಲೆಟೆಸ್ಟ್​ ಫೋಟೋಗಳು ವೈರಲ್​..!

ಅನುಷ್ಕಾ ಅವರು ವಿದೇಶದಿಂದ ಮರಳಿದ ನಂತರ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಮಗಳು ವಾಮಿಕಾರನ್ನು ಮನೆಯಲ್ಲಿ ಬಿಟ್ಟು, ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ನಿನ್ನೆಯಷ್ಟೆ ಈ ನಟಿ ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ತೆಗೆದ ಚಿತ್ರಗಳು ವೈರಲ್​ ಆಗುತ್ತಿವೆ. ಶೂಟಿಂಗ್​ ಸೆಟ್​ನ ಎಂಟ್ರಿ ಗೇಟ್​ನಲ್ಲಿ ಕಾಣಿಸಿಕೊಂಡ ಅನುಷ್ಕಾ ಶರ್ಮಾ ನೀಲಿ ಹಾಗೂ ಬಿಳಿ ಬಣ್ಣದ ಡ್ರೆಸ್​ನಲ್ಲಿದ್ದರು. ರೆಡ್​ ಕಾರ್ಪೆಟ್​ ಮೇಲೆ ನಡೆದು ಹೋಗುತ್ತಿದ್ದ ನಟಿ ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: