Karnataka NewsNational

ಅಂಧಮಕ್ಕಳ ಊಟಕ್ಕೆ ಸಹಾಯ ಮಾಡಿದ ಅಬ್ದುಲ್ ರಹಿಮಾನ್

ಅಂಧಮಕ್ಕಳ ಊಟಕ್ಕೆ ಸಹಾಯ ಮಾಡಿದ ಅಬ್ದುಲ್ ರಹಿಮಾನ್

ಹೌದು ಬೆಂಗಳೂರಿನ ಬಿಬಿಎಂಪಿಯಲ್ಲಿ ತಮ್ಮ ವೃತ್ತಿಯನ್ನು ಮಾಡುತ್ತಿರುವ ಅಬ್ದುಲ್ ರಹಿಮಾನ್ ತಮ್ಮ ಮಗಳ ಜನ್ಮದಿನವನ್ನು ಅಲ್ಲಿ ಇಲ್ಲಿ ಹೋಗಿ ಹುಟ್ಟುಹಬ್ಬವನ್ನು ಮಾಡುವುದರ ಬದಲಾಗಿ ತಮ್ಮ ಮಗಳ ಜನ್ಮದಿನವನ್ನು ವಿಶೇಷ ಚೇತನರಿಗೆ ಊಟಕ್ಕೆ ಸಹಾಯ ಮಾಡಿ ಜನ್ಮ ದಿನಾಚರಣೆಯನ್ನು ಆಚರಿಸಿದ್ದಾರೆ.

ಹೌದು ಅವರ ಮಗಳಾದ ಶೇರಿನ್ ತಾಜ್ ಹುಟ್ಟುಹಬ್ಬ ಆಡಂಬರವಾಗಿ ಇರಬಾರದು ಅವಳ ಜನುಮದಿನ ಬೇರೊಬ್ಬರಿಗೆ ಸಹಾಯ ಹಾಗೂ ಸ್ಪೂರ್ತಿ ಆಗಿರಬೇಕು ಎಂದು ಅಂದರ ಜೀವ ಬೆಳಕು ಟ್ರಸ್ಟ್ ರಾಣಿಬೆನ್ನೂರಿಗೆ 10000 ಸಹಾಯಧನ ಮಾಡಿ ಮಗಳ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುವುದರ ಮುಖಾಂತರ ಸಾರ್ಥಕತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅಂಧರ ಜೀವ ಬೆಳಕು ಟ್ರಸ್ಟ್ ರಾಣೆಬೆನ್ನೂರಿನ ನಾಗನಗೌಡ ಬೆಳ್ಳುಳ್ಳಿ ಅವರು ನಾನು ಅಬ್ದುಲ್ ರಹಿಮಾನ್ ಸರ್ ಅವರನ್ನು ನೋಡಿಲ್ಲ ಅವರು ಸಹ ನಮ್ಮನ್ನು ನೋಡಿಲ್ಲ ನಮ್ಮ ಸಂಸ್ಥೆಗೆ ಭೇಟಿ ನೀಡಿಲ್ಲ ಆದರೂ ನಮ್ಮನ್ನು ಗುರುತಿಸಿ ತಮ್ಮ ಮಗಳ ಹುಟ್ಟು ಹಬ್ಬದ ಪ್ರಯುಕ್ತವಾಗಿ 10000 ಹಣಕಾಸು ಟ್ರಾನ್ಸ್ಫರ್ ಮಾಡಿರುವುದಕ್ಕೆ ನಮ್ಮ ಪ್ರೀತಿ ಪೂರ್ವಕ ಧನ್ಯವಾದಗಳು ಭಗವಂತ ಅವರಿಗೆ ಸಕಲ ಸಂಪತ್ತು ಆಯುರಾರೋಗ್ಯ ಐಶ್ವರ್ಯ ಸುಖ ಸಮೃದ್ಧಿ ನೆಮ್ಮದಿ ಕೊಟ್ಟು ಕರುಣಿಸಲಿ ಹಾಗೂ ಇವರು ಮಾಡಿರುವ ಸಹಾಯ ಮತ್ತೊಬ್ಬರಿಗೆ ಸ್ಪೂರ್ತಿ ತರುವಂತದ್ದಾಗಿದೆ.

ಎಲ್ಲೋ ಇದ್ದುಕೊಂಡು ನಮಗೆ ದೂರವಾಣಿ ಕರೆಮಾಡಿ ಕಷ್ಟದ ಕಾಲದಲ್ಲಿ ಸಹಾಯ ಮಾಡಿದ್ದಾರೆ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಮಾತನಾಡಿ ಹೀಗೆ ಯಾರಾದರೂ ನಮ್ಮ ಅಂಧಮಕ್ಕಳ ಊಟಕ್ಕೆ ಸಹಾಯ ಮಾಡುವವರು ನಮ್ಮನ್ನು ಸಂಪರ್ಕಿಸಿ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಿ ಎಂದು ಹೇಳುತ್ತಾ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದರು ಸಹಾಯ ಮಾಡುವ ದಾನಿಗಳು ಸಂಪರ್ಕಿಸಬೇಕಾದ ದೂರವಾಣಿ ಮೊಬೈಲ್ ಸಂಖ್ಯೆ 9535951112

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: