Politics

ಕಾಂಗ್ರೆಸ್ ಗೇ ಮತ ನೀಡಿ – ಸತೀಶ್ ಜಾರಕಿಹೊಳಿ

ರಾಯಬಾಗ : ಕೊರೊನಾ, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ನಿರಂತರ ಜನರ ಸೇವೆ ಮಾಡಿದೆ. ಆದರೆ ಆ ಸಮಯದಲ್ಲಿ ಜನರ ಬಳಿ ಬಾರದವರು ಈಗ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾರೂ ಸಹ ಆಮಿಷಕ್ಕೆ ಬಲಿಯಾಗಬಾರದು. ಯಾರು, ಯಾರನ್ನೇ ಭೇಟಿಯಾದ್ರೂ ತಲೆ ಕೆಡಿಸಿಕೊಳ್ಳಬೇಡಿ, ನೀವು  ಪಕ್ಷದ ಪರವಾಗಿ ಇರಬೇಕು  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.
ರಾಯಬಾಗ ಮತ್ತು ಕುಡಚಿ ಮತಕ್ಷೇತ್ರದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ” ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಅದೇ ರೀತಿ ಕಾರ್ಯಕರ್ತರೂ ಕೂಡಾ ಬಹಳ ಗಟ್ಟಿಯಾಗಿ ಕೆಲಸಗಳನ್ನು ಮಾಡಬೇಕು. ಪ್ರಜ್ಞಾವಂತರಿರುವ ನೀವು ಯಾವುದೇ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಪಕ್ಷೇತರ ಅಭ್ಯರ್ಥಿಯಿಂದ ಗೊಂದಲ :
 ವಿಧಾನಪರಿಷತ್ ಚುನಾವಣೆ ಮೂರನೇಯ ವ್ಯಕ್ತಿಯಿಂದ ರಂಗೇರಿದೆ. ಪಕ್ಷೇತರ ಅಭ್ಯರ್ಥಿ ಟೋಟಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಫುಲ್  ಕನ್ಪೂಜ್ ಮಾಡುತ್ತಿದ್ದಾರೆ. ಶಾಮ ಘಾಟಗೆಯವರನ್ನು ಭೇಟಿಯಾಗುತ್ತಾರೆ, ಮತ್ತೊಂದಡೆ ರಾಜು ಕಾಗೆ, ಇನ್ನೊಂದಡೆ ಬಿಜೆಪಿ ಶಾಸಕ ಪಿ. ರಾಜುರವರನ್ನು ಭೇಟಿಯಾಗ್ತಾರೆ. ಕೊನೆಗೆ ಎಲ್ಲರೂ ಫುಲ್ ಕನ್ಪ್ಯೂಜ್ ಮಾಡಿದ್ದಾರೆ. ಅವರೂ ದೊಡ್ಡ ಕನ್ಫ್ಯೂಸ್ ನಲ್ಲಿದ್ದಾರೆ ಎಂದು  ಹಾಸ್ಯಾಸ್ಪದವಾಗಿ ನುಡಿದರು.
ನಾವು ಯಾರು ಕೂಡಾ ‘ ಗರ್ದಿ ಗಮ್ಮತ್ ನಲ್ಲಿ ಸೋಲಬಾರದು’.  ಅವರು ತಾಜ್ ಮಹಲ್ , ದೆಹಲಿ ಕುತುಬ್ ಮಿನಾರ್, ಹೈದರಾಬಾದ್ ನಿಜಾಮ್ ಕೋಟೆ, ಮೈಸೂರು ಅರಮನೆ ಯಾವುದೇ ಚಿತ್ರ ತೋರಿಸಲಿ, ನೀವು ಮಾತ್ರ ಬದಲಾಗಬಾರದು. ಆ ವ್ಯಕ್ತಿ ಇನ್ನೂ ಘಾಟಗೆಯವರ ಮನೆಗೆ ಎಷ್ಟು ಬಾರಿ ಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ದಪ್ಪ ಚರ್ಮದ ಸರ್ಕಾರ :
 ಬಿಜೆಪಿ ದಪ್ಪ ಚರ್ಮದ ಸರ್ಕಾರ. ಇದಕ್ಕೆ ಕಿವಿ, ಕಣ್ಣು ಏನೂ ಇಲ್ಲ. ಆ ರೀತಿಯಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವರ್ತನೆ ಮಾಡುತ್ತಿದೆ. ಅದಕ್ಕೆ ಅಂಕುಶ ಹಾಕಬೇಕಾದರೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ನಿಯಂತ್ರಣ ಮಾಡಲೇ ಬೇಕು ಎಂದು ವಿನಂತಿಸಿದರು.
ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನರಾಜ್ ಹಟ್ಟಿಹೊಳಿ ಸ್ಪರ್ಧೆ ಮಾಡಿದ್ದು, ಮತ ನೀಡಿ ಆಶೀರ್ವಾದ ಮಾಡಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದಂತ ಕಾರ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ಹಾಕಬೇಕು ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಕಾಂಗ್ರೆಸ್ ಸರಕಾರ ನೂರಾರು ಜನಪರ ಕಾರ್ಯಕ್ರಮಗಳನ್ನು ಜನರಿಗೆ ನೀಡಿದೆ. ಸಾಧನೆಯ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಕೆಲವರು ಕೇವಲ ಚುನಾವಣೆ ಬಂದಾಗ ಬರುತ್ತಾರೆ. ಯಾವುದೇ ತತ್ವ, ನಿಷ್ಠೆ, ಸಿದ್ದಾಂತ ಇಲ್ಲದವರಿಗೆ ಮತ ನೀಡಬೇಡಿ. ಚನ್ನರಾಜ ಹಟ್ಟಿಹೊಳಿ ಯುವಕರಿದ್ದು, ಜನ ಸೇವೆ ಮಾಡುವ ಉತ್ಸಾಹ, ಕಳಕಳಿ ಇದೆ. ಅವರನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಅವಕಾಶ ಕೊಡಿ ಎಂದು ವಿನಂತಿಸಿದರು.

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ, ಜನರ ಬೇಡಿಕೆಯಂತೆ  18 ಕೋಟಿ ವೆಚ್ಚದಲ್ಲಿ ರಾಯಬಾಗ ರೈಲ್ವೆ ಓವರ್ ಬ್ರೀಡ್ಜ್ ನಿರ್ಮಾಣ ಮಾಡಿಕೊಡಲಾಗಿದೆ. ಸಂಸದರಾಗಿರುವ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದೇ ರೀತಿ ಚನ್ನರಾಜ್ ಹಟ್ಟಿಹೊಳಿಯವರನ್ನು ಗೆಲ್ಲಿಸಿದ್ರೆ ಈ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡಲಿದ್ದಾರೆಂಬ ಭರವಸೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನೂರು ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಪರಿಷತ್ ಗೆ  ಸ್ಪರ್ಧೆ ಮಾಡಿದ್ದೇನೆ. ನನ್ನ ಸೌಭಾಗ್ಯ, ಕಾಂಗ್ರೆಸ್ ಪಕ್ಷ ಯುವಕರಲ್ಲಿ ವಿಶ್ವಾಸ ಇಟ್ಟು ಟಿಕೆಟ್ ನೀಡಿದೆ. ಟಿಕೆಟ್ ಸಿಗಬೇಕಾದ್ರೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಆಶೀರ್ವಾದ ಇದ್ದಾಗ ಮಾತ್ರ ಸಿಗಲಿದೆ ಎಂದರು.
ಮಾಜಿ ಸಚಿವರಾದ ಎ.ಬಿ.ಪಾಟೀಲ, ವೀರಕುಮಾರ ಪಾಟೀಲ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ಕಾಂಗ್ರೆಸ್ ಮುಖಂಡರಾದ  ಮಹೇಶ ತಮ್ಮಣ್ಣವರ, ಮಹಾವೀರ ಮೋಹಿತೆ, ಈರನಗೌಡಾ ಪಾಟೀಲ, ಸದಾಶಿವ ಜಯಸಿಂಗ್, ಅಪ್ಪಾಸಾಲ ಕಲಗುಡೆ, ಡಿ ಎಸ್ ನಾಯಕ್, ಎನ್ ಎ ಮಗದುಮ್ಮ, ಧೂಳಗೌಡ ಪಾಟೀಲ, ಸಂಜು ಬಾನೆಸರ್ಕಾರ, ಯುವ ಕಾಂಗ್ರೆಸ್ ಅಧ್ಯಕ್ಷ ಸಿಂಗೆ ಮುಂತಾದವರು ಉಪಸ್ಥಿತರಿದ್ದರು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: